For the best experience, open
https://m.samyuktakarnataka.in
on your mobile browser.

ಪ್ಯಾರಾಲಿಂಪಿಕ್ಸ್‌ 2024: ಹೈ ಜಂಪ್​ನಲ್ಲಿ ನಿಶಾದ್‌ ಕುಮಾರ್‌ಗೆ ಬೆಳ್ಳಿ ಪದಕ

10:44 AM Sep 02, 2024 IST | Samyukta Karnataka
ಪ್ಯಾರಾಲಿಂಪಿಕ್ಸ್‌ 2024  ಹೈ ಜಂಪ್​ನಲ್ಲಿ ನಿಶಾದ್‌ ಕುಮಾರ್‌ಗೆ ಬೆಳ್ಳಿ ಪದಕ

ಪ್ಯಾರಿಸ್​: ಪ್ಯಾರಾಲಿಂಪಿಕ್ಸ್‌ನ ಪುರುಷರ ಹೈ ಜಂಪ್ ಟಿ47 ಸ್ಪರ್ಧೆಯಲ್ಲಿ ಭಾರತದ ನಿಶಾದ್ ಕುಮಾರ್ ಬೆಳ್ಳಿ ಪದಕ ಗೆದ್ದಿದ್ದಾರೆ.
ಭಾನುವಾರ ರಾತ್ರಿ ನಡೆದ ಪುರುಷರ ಹೈಜಂಪ್ ಟಿ47 ವಿಭಾಗದ ಸ್ಪರ್ಧೆಯಲ್ಲಿ ನಿಶಾದ್ ಅವರ ಬೆಳ್ಳಿ ಪದಕದೊಂದಿಗೆ ಭಾರತವು ಈ ಬಾರಿಯ ಪ್ಯಾರಾಲಿಂಪಿಕ್ಸ್​ನಲ್ಲಿ 7ನೇ ಪದಕವನ್ನು ಗೆದ್ದುಕೊಂಡಂತಾಗಿದೆ. 24 ವರ್ಷದ ನಿಶಾದ್ ಕುಮಾರ್ ಮೂರು ವರ್ಷಗಳ ಹಿಂದೆ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಇದೇ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದರು. ಇದಕ್ಕೂ ಮುನ್ನ ಭಾರತೀಯ ಕ್ರೀಡಾಳುಗಳು 1 ಚಿನ್ನ, 1 ಬೆಳ್ಳಿ ಹಾಗೂ 4 ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದು. ಇದೀಗ ನಿಶಾದ್ ಅವರ ಬೆಳ್ಳಿ ಪದಕದೊಂದಿಗೆ ಪದಕಗಳ ಸಂಖ್ಯೆ ಏಳಕ್ಕೇರಿದೆ. ಹಾಗೆಯೇ ಪದಕ ಪಟ್ಟಿಯಲ್ಲಿ ಭಾರತವು 27ನೇ ಸ್ಥಾನವನ್ನು ಅಲಂಕರಿಸಿದೆ.

Tags :