For the best experience, open
https://m.samyuktakarnataka.in
on your mobile browser.

ಪ್ಯಾಲೆಸ್ತೈನ್ ಧ್ವಜ ಪ್ರದರ್ಶನ: ನಾಲ್ವರು ವಿರುದ್ಧ ಪ್ರಕರಣ ದಾಖಲು

08:29 PM Sep 19, 2024 IST | Samyukta Karnataka
ಪ್ಯಾಲೆಸ್ತೈನ್ ಧ್ವಜ ಪ್ರದರ್ಶನ  ನಾಲ್ವರು ವಿರುದ್ಧ ಪ್ರಕರಣ ದಾಖಲು

ಬಾಗಲಕೋಟೆ: ನವನಗರದಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೈನ್ ಧ್ವಜ ಪ್ರದರ್ಶನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೆರವಣಿಗೆಗೆ ಅನುಮತಿ ಕೋರಿದ್ದ ಮುಖಂಡರ ವಿರುದ್ಧ ನವನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮುಖಂಡರಾದ ಜಿ.ಎ. ಡಾಲಾಯತ, ಯೂಸುಫ್ ಬಿಳೆಕುದರಿ, ಆಶೀಫ ಬೇನೂರ, ಸಿಕಂದರ ಗೊಳಸಂಗಿ ಹಾಗೂ ಇತರರ ಮೇಲೆ ಪ್ರಕರಣ ದಾಖಲಾಗಿದೆ. ನವನಗರದಲ್ಲಿ ನಡೆದ ಮೆರವಣಿಗೆ ವೇಳೆ ಯಾವುದೋ ಒಬ್ಬ ಯುವಕನಿಂದ ಧ್ವಜ ಪ್ರದರ್ಶಿಸಿ ಸಾರ್ವಜನಿಕರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿ ಅಪಮಾನ ಮಾಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.

ಮತ್ತೊಂದು ವಿಡಿಯೋ ವೈರಲ್: ನವನಗರದಲ್ಲಿ ಸೆ. ೧೮ರ ಬುಧವಾರ ಮೆರವಣಿಗೆ ಜರುಗಿತ್ತು. ಅದಕ್ಕೂ ಮುನ್ನ ಸೆ. ೧೬ರಂದು ಬಾಗಲಕೋಟೆ ನಗರದಲ್ಲಿ ನಡೆದಿದ್ದ ಮೆರವಣಿಗೆಯಲ್ಲಿ ಪ್ರಮುಖ ಸ್ಥಳದಲ್ಲೇ ಪ್ಯಾಲೆಸ್ತೈನ್ ಧ್ವಜ ಪ್ರದರ್ಶಿಸಿರುವ ವಿಡಿಯೋ ಈಗ ಎಲ್ಲಡೆ ವೈರಲ್ ಆಗಿದೆ. ಕಿಲ್ಲಾ ಓಣಿಯ ಕೊತ್ತಲೇಶದ ದೇವಸ್ಥಾನ ಬಳಿಯಲ್ಲಿರುವ ಹಳೆ ಚಾವಡಿ ಕಟ್ಟಡದ ಮುಂಭಾಗವೇ ಯುವಕನೋರ್ವ ಬೃಹದಾಕಾರದ ಪ್ಯಾಲೆಸ್ತೈನ್ ಧ್ವಜವನ್ನು ಹಿಡಿದು ತಿರುವಿದ್ದು, ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಕೆಲವರು ಶೇರ್ ಮಾಡಿಕೊಂಡಿದ್ದರು. ಇದೀಗ ಆ ವಿಡಿಯೋ ಕೂಡ ವಾಟ್ಸಪ್‌ನಲ್ಲಿ ಹರಿದಾಡುತ್ತಿದೆ.

Tags :