ಪ್ರಕೃತಿಯು ದಕ್ಷತೆಯನ್ನು ಪ್ರೀತಿಸುತ್ತದೆ
ಅಧ್ಯಾತ್ಮಿಕತೆಯ ಸಾರವಾದ ಜಗತ್ತನ್ನು ರಚಿಸುವ ಮತ್ತು ಅದನ್ನು ಇನ್ನಷ್ಟು ಸುಂದರಗೊಳಿಸುವ ಹೊಣೆಗಾರಿಕೆಯಿಂದ ಯಾರೂ ಹೊರತಲ್ಲ. `ಈ ಕ್ಷಣದಲ್ಲಿ ವಿಶ್ವವು ನಿಮ್ಮ ಮೂಲಕ ಜೀವಿಸುತ್ತಿದೆ' ಎಂಬುದನ್ನು ಯಾರೂ ಮರೆಯುವಂತಿಲ್ಲ! ದೇವರಲ್ಲಿ ನಂಬಿಕೆ ಇದ್ದೋ ಅಥವಾ ಇಲ್ಲದೆಯೋ ಸದಾ ಮೌನವಾಗಿ ಅರಿವಿನಿಂದ ಭೌತಿಕವಾಸ್ತವಕ್ಕೆ ಕಾರಣವಾಗುವ ಅದೃಶ್ಯ ಘಟನಾವಳಿಗಳ ಸರಪಳಿಯು ಸೃಷ್ಟಿಯಲ್ಲಿ ಹಾಗೆಯೇ ಉಳಿದುಕೊಂಡು ಬಂದಿದೆ ಮತ್ತು ಮುಂದುವರಿದಿದೆ. ಬ್ರಹ್ಮಾಂಡದ ಕಾರ್ಯ ವ್ಯವಸ್ಥೆ ಅಂದರೆ, ಸೃಷ್ಟಿಯ ನಿಯಮಗಳು ಸರ್ವರಿಗೂ ಏಕಪ್ರಕಾರವಾಗಿ ಅನ್ವಯಿಸುತ್ತದೆ ಮತ್ತು ಅವುಗಳು ಕೆಲವೊಂದು ಮೂಲತತ್ವಗಳ ಜೊತೆಗೆ ಕಾರ್ಯ ನಿರ್ವಹಿಸುತ್ತದೆ. ಆದಾಗ್ಯೂ, ನೀವು ಪ್ರಜ್ಞಾಪೂರ್ವಕವಾಗಿ ಅಧ್ಯಾತ್ಮಿಕ ಜೀವನವನ್ನು ನಡೆಸಬೇಕು ಎಂದು ನಿರ್ಧರಿಸಿದರೆ ಬದಲಾವಣೆ ಸಂಭವಿಸುತ್ತದೆ. ನಾವು ಈಗಾಗಲೇ ಸೃಷ್ಟಿಯ ಹಲವು ನಿಯಮಗಳನ್ನು ಸ್ವೀಕರಿಸಿದ್ದೇವೆ ಮತ್ತು ಬದುಕಿನಲ್ಲಿ ಅಳವಡಿಸಿಕೊಂಡಿದ್ದೇವೆ. ಇಷ್ಟಾಗಿಯೂ ನಾವು ಸಾರ್ವತ್ರಿಕವಾದುದನ್ನು ವೈಯಕ್ತಿಕವನ್ನಾಗಿಸುವ ಸಾಧ್ಯತೆಯೂ ಇದ್ದೇ ಇದೆ. ಈ ಹೇಳಿಕೆಗಳಲ್ಲಿ ಯಾವುದೇ ಧರ್ಮದ ಗಂಧ ಅಥವಾ ಸ್ಪರ್ಶವಿಲ್ಲ; ಯಾವುದೇ ಅಧ್ಯಾತ್ಮಿಕ ಶಬ್ದಕೋಶವನ್ನು ಒಳಗೊಂಡಿಲ್ಲ. ಆದರೂ ಈ ಮೂಲ ತತ್ವವು ಧರ್ಮದ ಮೂಲಾಧಾರವಾಗಿದೆ ಮತ್ತು ಸೃಷ್ಟಿಕರ್ತನನ್ನು ಅವನ ಸೃಷ್ಟಿಯೊಂದಿಗೆ ಒಂದುಗೂಡಿಸುತ್ತದೆ. ಭೌತಿಕ ಪ್ರಪಂಚವು ಮನಸ್ಸನ್ನು ಪ್ರತಿಬಿಂಬಿಸುತ್ತದೆ ಹಾಗೂ ಪ್ರತಿ ಪರಮಾಣುವಿನಲ್ಲಿ ಸೃಷ್ಟಿಯ ಉದ್ದೇಶ ಮತ್ತು ಬುದ್ಧಿವಂತಿಕೆಯನ್ನು ಹೊಂದಿದೆ. ಈ ತತ್ವದಲ್ಲಿ ನಾವು ಎಲ್ಲಾ ಪುರಾಣಗಳು ಮತ್ತು ಮೂಲರೂಪಗಳು, ಮೂಲಪುರುಷರು, ದಾರ್ಶನಿಕರು ಮತ್ತು ಅನ್ವೇಷಣೆಗಳ ಆರಂಭವನ್ನು ನೋಡುತ್ತೇವೆ. ಸಾಮೂಹಿಕ ಮನಸ್ಸು ವ್ಯಕ್ತಿಯನ್ನು ಮೀರಿದ ಅರಿವಿನ ಮಟ್ಟವನ್ನು ಹಂಚಿಕೊಳ್ಳುತ್ತದೆ. ನೀವು ಇತರರನ್ನು 'ನಿಮ್ಮದೇ ಅಂಶ'ಗಳಾಗಿ ನೋಡಿದಾಗ ನಿಜವಾಗಿಯೂ ಮೂಲರೂಪಗಳನ್ನು ಹಾಗೂ ಅವುಗಳ ಪ್ರಕಾರಗಳನ್ನು ಕಾಣಲು ಶಕ್ತರಾಗುತ್ತೀರಿ. ನಾವು ಲೆಕ್ಕವಿಲ್ಲದಷ್ಟು ಮುಖವಾಡಗಳನ್ನು ಧರಿಸಿರುವ ಮನುಷ್ಯರಂತೆ ವರ್ತಿಸುತ್ತಿದ್ದೇವೆ! ಎಲ್ಲಾ ಮುಖವಾಡಗಳನ್ನು ಕಳಚಿದಾಗ ಉಳಿಯುವುದು ಸತ್ವ, ಆತ್ಮ, ದೈವಿಕ ಕಿಡಿಯೊಂದೇ.
ಧರ್ಮ ಮತ್ತು ವಿಜ್ಞಾನದ ನಡುವಿನ ಸಂಘರ್ಷ ಬಹಳ ಹಳೆಯದು ಮತ್ತು ಬಹುತೇಕ ದಣಿದಿದೆ ಕೂಡಾ. ಆದರೂ ಎರಡೂ ಕಡೆಯವರು ಬಗ್ಗಲು ಸಿದ್ಧರಿಲ್ಲ. ಧರ್ಮವು ಪ್ರಕೃತಿಯಲ್ಲಿನ ವಿನ್ಯಾಸವನ್ನು ಸೃಷ್ಟಿಕರ್ತನ ಪುರಾವೆಯನ್ನಾಗಿ ನೋಡಿದರೆ; ವಿಜ್ಞಾನವು ಪ್ರಕೃತಿಯಲ್ಲಿ ಯಾದೃಚ್ಛಿಕತೆಯನ್ನು ರ‍್ಯಾಂಡಮ್) ಯಾವುದೇ ವಿನ್ಯಾಸದ ಪುರಾವೆಯಾಗಿ ನೋಡುತ್ತದೆ. ಆದರೆ ವಿಜ್ಞಾನವನ್ನೂ ಒಳಗೊಂಡಂತೆ ಎಂದಿಗೂ ಅವ್ಯವಸ್ಥೆಯ ಆಧಾರದ ಮೇಲೆ ಸಂಸ್ಕೃತಿ ಇರಲಿಲ್ಲ. ಪ್ರಜ್ಞೆಯು ಬ್ರಹ್ಮಾಂಡವನ್ನು ನೋಡುತ್ತದೆ ಮತ್ತು ಎಲ್ಲೆಲ್ಲಿಯೂ (ಮಧ್ಯೆ ಮಧ್ಯೆ ಇರುವ ಸ್ಥಳಗಳು ಮನುಷ್ಯನ ಇಂದ್ರಿಯಗಳಿಗೆ ಅಸ್ತವ್ಯಸ್ತವಾಗಿ ಮತ್ತು ಯಾದೃಚ್ಛಿಕವಾಗಿ ಕಂಡರೂ) ವಿನ್ಯಾಸಗಳನ್ನು ಕಾಣುತ್ತದೆ. ಸೃಷ್ಟಿಯಲ್ಲಿನ ಒಂದು ಅನುಕ್ರಮಣಿಕೆಯನ್ನು ಅಥವಾ ಸಹಜ ವ್ಯವಸ್ಥೆಯನ್ನು ಕಾಣದಿರುವುದು ಒಬ್ಬ ವ್ಯಕ್ತಿಗೆ ಅಸಾಧ್ಯವೇ. ಕುಟುಂಬದ ಹೊರಗಿನ ಜೀವನದ ಪ್ರತಿಯೊಂದು ಅಂಶವೂ ಪ್ರಕೃತಿಯ ಈ ಸಹಜ ವ್ಯವಸ್ಥೆಯ ಮೇಲೆಯೇ ಆಧಾರಿತವಾಗಿದೆ. ವಿನ್ಯಾಸಗಳನ್ನು ಗ್ರಹಿಸಲು ಸಾಧ್ಯವಾಗುವಂತೆ ಮಿದುಳಿನ ರಚನೆಯಾಗಿದೆ. ಮನಸ್ಸೇ ಅಂತಿಮವಾಗಿ ಅರ್ಥವನ್ನು ಉಂಟುಮಾಡುವ ಸಾಧನ.
ಪ್ರಕೃತಿಯು ದಕ್ಷತೆಯನ್ನು ಪ್ರೀತಿಸುತ್ತದೆ. ನೀವು ಚೆಂಡನ್ನು ಬೀಳಿಸಿದಾಗ ಅದು ಯಾವುದೇ ಅನಿರೀಕ್ಷಿತ ತಿರುವುಗಳನ್ನು ತೆಗೆದುಕೊಳ್ಳದೆ ನೇರವಾಗಿ ಕೆಳಗೆ ಬೀಳುತ್ತದೆ. ಬಂಧದ ಸಾಮರ್ಥ್ಯವನ್ನು ಹೊಂದಿರುವ ಎರಡು ಅಣುಗಳು ಪರಸ್ಪರ ಭೇಟಿಯಾದಾಗ ಬಂಧನಕ್ಕೆ ಒಳಗಾಗುತ್ತವೆ. ಅಲ್ಲಿ ಬೇರಾವುದೇ ಅನಿಶ್ಚಿತ ನಿರ್ಣಯಕ್ಕೆ ಆಸ್ಪದವಿರುವುದಿಲ್ಲ. ಕನಿಷ್ಠಶಕ್ತಿಯ ವಿನಿಯೋಗದ ಈ ನಿಯಮ ಮಾನವರನ್ನೂ ಸಹ ಒಳಗೊಳ್ಳುತ್ತದೆ. ನಿಃಸ್ಸಂಶಯವಾಗಿಯೂ ನಮ್ಮ ದೇಹವು ಪ್ರತಿ ಜೀವಕೋಶದಲ್ಲಿ ನಡೆಯುವ ರಸಾಯನಿಕ ಪ್ರಕ್ರಿಯೆಗಳ ದಕ್ಷತೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಇಡೀ ಅಸ್ತಿತ್ವವು ಅದೇ ತತ್ವದಲ್ಲಿ ಸುತ್ತುವರಿಯಲ್ಪಟ್ಟಿದೆ. ಹೀಗಾಗಿಯೇ 'ಕಾರಣ' ಮತ್ತು 'ಪರಿಣಾಮ'ಗಳು ಅತ್ಯಂತ ಪರಿಣಾಮಕಾರಿ ರೀತಿಯಲ್ಲಿ ಜೋಡಿಸಲ್ಪಟ್ಟಿವೆ. ಈ ವಾದವು ವೈಯಕ್ತಿಕ ಬೆಳವಣಿಗೆಗೂ ಅನ್ವಯಿಸುತ್ತದೆ.
ಸಾಮಾನ್ಯ ಕಲ್ಪನೆಯ ಪ್ರಕಾರ, ಪ್ರಾಚೀನ ಸಂಸ್ಕೃತಿಗಳು ಏಕೀಕೃತ ಸೃಷ್ಟಿಯನ್ನು ಕಂಡವು. ಆದರೆ, ಆಧುನಿಕರು ವಿಭಜಿತ ಜಗತ್ತನ್ನು ನೋಡುತ್ತಾರೆ. ಪುರಾಣ, ಸಂಪ್ರದಾಯಗಳು ಮತ್ತು ಸಾಮಾಜಿಕ ಬಾಂಧವ್ಯದ ಅನುಪಸ್ಥಿತಿಯಲ್ಲಿ ನಂಬಿಕೆಯ ಅವನತಿಯು ಇದಕ್ಕೆ ಕಾರಣವೆಂದು ಆರೋಪಿಸಲಾಗಿದೆ. ಮಾನಸಿಕ ಪರಕೀಯತೆಯ ವ್ಯಾಪಕ ಭಾವನೆಯ ಹೊರತಾಗಿಯೂ (ತಂತ್ರಜ್ಞಾನವು ಅರ್ಥವನ್ನು ಜೀವಂತವಾಗಿಡುವ ನಮ್ಮ ಸಾಮರ್ಥ್ಯವನ್ನು ಮೀರಿಸುವ ಫಲಿತಾಂಶ) ಮನುಷ್ಯ ಮತ್ತು ಪ್ರಕೃತಿಯ ದ್ವಂದ್ವತೆಯು ಪೀಳಿಗೆಯಿಂದ ಪೀಳಿಗೆಗೆ ಕುಗ್ಗುತ್ತಿದೆ. ಅಳವಡಿಕೆಯು (ಅಡಾಪ್ಟೇಷನ್) ಒಂದು ಅದ್ಭುತ ಸಂಗತಿ ಏಕೆಂದರೆ, ಅದು ಬೃಹತ್ ಜಿಗಿತಗಳಿಂದ ಪ್ರಗತಿಯೆಡೆಗೆ ಮುಂದುವರಿಯುತ್ತದೆ. ಇದನ್ನು ವಿಕಸನ ಕ್ರಿಯೆಯಲ್ಲಿ ಕಾಣಬಹುದು. ನಾವಿದನ್ನು ಒಪ್ಪಲಿ, ಬಿಡಲಿ ನಿಃಸ್ಸಂದೇಹವಾಗಿಯೂ ಭೌತಿಕ ಪ್ರಪಂಚವು ಆಳವಾದ ಮಟ್ಟದಲ್ಲಿ ನಡೆಯುವ ಸೃಜನಾತ್ಮಕ ಪ್ರಕ್ರಿಯೆಗಳಿಂದ ಸ್ವತಃ ಹೊಂದಿಕೊಳ್ಳುತ್ತದೆ. ಇದನ್ನು ಅನುವಂಶಿಕ ಅಥವಾ ಜಾಗೃತಿ ಎಂದು ಹೇಗೆ ಬೇಕಾದರೂ ಕರೆಯಬಹುದು.
ವಿಜ್ಞಾನದ ಪ್ರಕಾರ; ಸೃಷ್ಟಿ ಮತ್ತು ವಿನಾಶದ ನಡುವೆ ಸೂಕ್ಷ್ಮವಾದ ಸಮತೋಲನವಿದೆ ಮತ್ತು ಆ ಸಮತೋಲನದ ನಿರ್ವಹಣೆಯಲ್ಲಿ ಶತಕೋಟಿ ವರ್ಷಗಳು ಕಳೆದಿವೆ. ಆದಾಗ್ಯೂ, ಬೃಹತ್ ಪ್ರಮಾಣದಲ್ಲಿ ಬ್ರಹ್ಮಾಂಡದ ಶಕ್ತಿಗಳು ಜೀವನದ ಆರಂಭವನ್ನು ನೇಯ್ದ ಸೂಕ್ಷ್ಮವಾದ ಬಟ್ಟೆಯನ್ನು ಕಿತ್ತುಹಾಕಲು ಸಾಧ್ಯವಾಗದ ಕಾರಣ (ಒಬ್ಬ ವರ್ಣಚಿತ್ರಕಾರ ತನ್ನ ಪೆಟ್ಟಿಗೆಯಲ್ಲಿ ಅಸ್ತವ್ಯಸ್ತವಾಗಿರುವ ಬಣ್ಣಗಳನ್ನು ಬಳಸುವ ರೀತಿಯಲ್ಲಿ) ವಿಕಾಸವು ಅವ್ಯವಸ್ಥೆಯನ್ನು ಬಳಸಿಕೊಳ್ಳುತ್ತಿದೆ ಎಂಬುದನ್ನು ಒಬ್ಬ ಸಾಮಾನ್ಯ ವ್ಯಕ್ತಿಯೂ ತೀರ್ಮಾನಿಸಬಹುದು. ವೈಯಕ್ತಿಕ ಮಟ್ಟದಲ್ಲಿ ನೋಡುವುದಾದರೆ; ನಿಮ್ಮ ತಲೆಯಲ್ಲಿ ಆಲೋಚನೆಗಳು ಮತ್ತು ಪ್ರಚೋದನೆಗಳ ಸುಂಟರಗಾಳಿಯಿಂದ ನೀವು ಪ್ರಭಾವಿತರಾಗಿರುವಾಗ ಕೇಂದ್ರೀಕೃತ ಮನಃಸ್ಥಿತಿಯನ್ನು ತಲುಪಲು ಸಾಧ್ಯವೇ? ಆದರೆ ಅದರ ಮೂಲವನ್ನು ಹುಡುಕಲು ನಿಮ್ಮ ಮನಸ್ಸನ್ನು ಬಳಸಬಹುದು. ಬ್ರಹ್ಮಾಂಡ ಅಥವಾ ಮನಸ್ಸಿನ ಮೇಲ್ಮೈಯಲ್ಲಿ ಅಸ್ತವ್ಯಸ್ಥತೆ ಕಾಣಿಸಿದರೂ ಅದರ ಕೆಳಗೆ ಪ್ರಗತಿಯ, ವಿಕಾಸದ ಅಲೆಗಳ ಏರಿಳಿತಗಳು ಘಟಿಸುತ್ತಲೇ ಇರುತ್ತವೆ.
ನಾವು ಮೂಲಭೂತವಾಗಿ ಗಮನಿಸಬೇಕಾದ ಪ್ರಕೃತಿ ತತ್ವಗಳು: ವಿಶ್ವವು ಪ್ರಜ್ಞೆಯ ಕನ್ನಡಿಯಾಗಿದೆ; ನಿಮ್ಮ ಜೀವನದಲ್ಲಿನ ಘಟನೆಗಳು ನೀವು ಯಾರೆಂಬುದನ್ನು ಪ್ರತಿಬಿಂಬಿಸುತ್ತವೆ; ಸೃಷ್ಟಿಯ ಅರಿವು ಸಾಮೂಹಿಕವಾಗಿದ್ದು ನಾವೆಲ್ಲರೂ ಅದನ್ನು ಸಾಮಾನ್ಯ ಮೂಲದಿಂದಲೇ ಸೆಳೆಯುತ್ತೇವೆ; ನಿಮ್ಮ ಜೀವನದಲ್ಲಿ ಜನರು ನಿಮ್ಮದೇ ಅಂಶಗಳನ್ನು ಪ್ರತಿಬಿಂಬಿಸುತ್ತಾರೆ; ಆಂತರಿಕ ಅರಿವು ತನ್ನೊಳಗೆಯೇ ಸದಾ ವಿಸ್ತರಿಸಲ್ಪಡುತ್ತದೆ; ನೀವು ಯಾವುದಕ್ಕೆ ಗಮನ ನೀಡುತ್ತೀರೋ ಅದು ಬೆಳೆಯುತ್ತದೆ; ಪ್ರಜ್ಞೆಯು ವಿನ್ಯಾಸಗಳಿಂದ ರಚಿಸಲ್ಪಡುತ್ತದೆ; ಯಾವುದೂ ಯಾದೃಚ್ಛಿಕವಲ್ಲ ರ‍್ಯಾಂಡಮ್)-ನಿಮ್ಮ ಜೀವನವು ಚಿಹ್ನೆಗಳು ಮತ್ತು ಸಂಕೇತಗಳಿಂದ ತುಂಬಿದೆ; ಭೌತಿಕ ಕಾನೂನುಗಳು ಕನಿಷ್ಠ ಪ್ರಯತ್ನದಿಂದ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತವೆ; ಯಾವುದೇ ಕ್ಷಣದಲ್ಲಿ ವಿಶ್ವವು ನಿಮಗೆ ಸಾಧ್ಯವಾದಷ್ಟೂ ಉತ್ತಮ ಫಲಿತಾಂಶಗಳನ್ನೇ ನೀಡುತ್ತಿದೆ; ಸರಳರೂಪಗಳು ಹೆಚ್ಚು ಸಂಕೀರ್ಣರೂಪಗಳಾಗಿ ಬೆಳೆಯುತ್ತವೆ;
ಜ್ಞಾನವು ತನ್ನ ವಿಸ್ತರಣೆಯಲ್ಲಿ ಪ್ರಪಂಚದಿಂದ ಹೆಚ್ಚು ಹೆಚ್ಚು ತೆಗೆದುಕೊಳ್ಳುತ್ತದೆ; ಜೀವನದ ದಿಕ್ಕು ದ್ವಂದ್ವತೆಯಿಂದ ಏಕತೆಯೆಡೆಗೆ ಸಾಗುತ್ತದೆ; ವಿಕಸನವು ಪರಿಸರಕ್ಕೆ ಸಂಪೂರ್ಣವಾಗಿ ಹೊಂದಿಕೆಯಾಗುವ ಬದುಕುಳಿಯುವ ಲಕ್ಷಣಗಳನ್ನು ಅಭಿವೃದ್ಧಿಪಡಿಸುತ್ತದೆ; ನೀವು ನಿಮ್ಮನ್ನು ವಿಕಾಸದ ದಿಕ್ಕಿಗೆ ತೆರೆದುಕೊಂಡರೆ ನೀವು ಎಲ್ಲಿಗೆ ತಲುಪಬೇಕೆಂದಿರುವಿರೋ ಅಲ್ಲಿಗೇ ಕರೆದೊಯ್ಯುತ್ತದೆ; ಅವ್ಯವಸ್ಥೆ ಅಂತಿಮವಾಗಿ ವಿಕಾಸಕ್ಕೆ ಪೂರಕವಾಗುತ್ತದೆ; ವಿಘಟಿತ ಮನಸ್ಸು ಏಕತೆಯೆಡೆಗೆ ಕೊಂಡೊಯ್ಯಲು ಸಾಧ್ಯವಿಲ್ಲ ಆದರೆ, ನೀವದನ್ನು ನಿಮ್ಮ ಜೀವನ ಪ್ರಯಾಣದ ದಾರಿಯುದ್ದಕ್ಕೂ ಬಳಸಬೇಕಾಗುತ್ತದೆ;
ಅನೇಕ ಅಗೋಚರ ಮಟ್ಟಗಳು ಭೌತಿಕ ಜಗತ್ತಿನಲ್ಲಿ ಆವರಿಸಲ್ಪಟ್ಟಿವೆ; ನೀವು ಏಕಕಾಲದಲ್ಲಿ ಅನೇಕ ಆಯಾಮಗಳಲ್ಲಿ ಜೀವಿಸುತ್ತಿದ್ದೀರಿ; ಸಮಯ, ಕಾಲ ಮತ್ತು ಪರಿಸ್ಥಿತಿಗಳಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆಂಬ ನಿಮ್ಮ ನೋಟವು ಒಂದು ಭ್ರಮೆಯಾಗಿದೆ.