ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಪ್ರಜಾಪ್ರಭುತ್ವದ ಆಶಯ ಎತ್ತಿ ಹಿಡಿಯುವ ಸಂಭ್ರಮ

11:36 AM Dec 28, 2023 IST | Samyukta Karnataka

ಕಾಂಗ್ರೆಸ್ ಸಂಸ್ಥಾಪನಾ ದಿನ

ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ಭಾರತವು ಬಹು ಸಂಸ್ಕೃತಿಯನ್ನೊಳಗೊಂಡು ವಿವಿಧತೆಯಲ್ಲಿ ಏಕತೆ ಎಂಬ ಸಂದೇಶವನ್ನು ಪಸರಿಸುವ ದೇಶ. ಇಲ್ಲಿನ ರಾಜಕೀಯ ವ್ಯವಸ್ಥೆ ಬಹುತ್ವವನ್ನು ಒಳಗೊಂಡೇ ಬೆಳೆದಿದೆ. ಈ ಬಹುತ್ವದ ಬೇರನ್ನು ಕಿತ್ತೊಗೆದು ಏಕಪಕ್ಷೀಯ ವ್ಯವಸ್ಥೆಯನ್ನು ತರುವ ಪ್ರಯತ್ನ ನಡೆದಿದ್ದರೂ, ಕಾಂಗ್ರೆಸ್ ಮಾತ್ರ ಮರಳಿ ತನ್ನ ಬೇರುಗಳನ್ನು ವಿಸ್ತರಿಸಿ ಹೆಬ್ಬಾಲವಾಗಿ ಬೆಳೆಯುತ್ತಿದೆ. ದಕ್ಷಿಣದಲ್ಲಿ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಅಭೂತಪೂರ್ವವಾಗಿ ಅಧಿಕಾರ ಸ್ಥಾಪಿಸಿಕೊಂಡಿರುವ ಕಾಂಗ್ರೆಸ್, ತನ್ನ ವಿರೋಧಿಗಳು ಕೂಡ ಹುಬ್ಬೇರುವಂತೆ ಬೆಳೆಯುತ್ತಿರುವುದನ್ನು ಇತಿಹಾಸದ ಮರುಕಳಿಸುವಿಕೆ ಎನ್ನಬಹುದು. ಕಾಂಗ್ರೆಸ್ ಪಕ್ಷದ ೧೩೯ ನೇ ಸಂಸ್ಥಾಪನಾ ದಿನದಂದು ಈ ಅತಿ ದೊಡ್ಡ ಸಂಘಟನೆಯ ವೇಗವಾದ ವಿಸ್ತರಣೆಗೆ ಮರು ವ್ಯಾಖ್ಯಾನ ದೊರೆಯುತ್ತಿರುವುದನ್ನು ಅವಲೋಕಿಸಬೇಕಿದೆ.
ಇಂಡಿಯಾ ಎಂದರೆ ಇಂಡಿಯಾ
೧೮೮೫ರ ಡಿಸೆಂಬರ್ ೨೮ ರಂದು ಮುಂಬೈಯಲ್ಲಿ ಮೊಟ್ಟಮೊದಲ ಸಮಾವೇಶ ನಡೆದಾಗ ಇದೊಂದು ದೊಡ್ಡ ಸಂಘಟನೆಯಾಗಿ ಜನರನ್ನು ತಲುಪಲಿದೆ ಎಂಬ ನಿರೀಕ್ಷೆ ಹೆಚ್ಚಿನವರಲ್ಲಿ ಇರಲಿಲ್ಲ. ದೇಶದ ಸ್ವಾತಂತ್ರ‍್ಯ ಹಾಗೂ ಜನರ ಬದುಕಿನ ಗುಣಮಟ್ಟವನ್ನು ಉತ್ತಮಪಡಿಸುವ ಕಾಳಜಿಯಷ್ಟೇ ಆಗ ಎಲ್ಲ ನಾಯಕರ ಕಣ್ಣ ಮುಂದೆ ಇತ್ತು ನಂತರದ ವರ್ಷಗಳಲ್ಲಿ ಕಾಂಗ್ರೆಸ್ ವಿಸ್ತರಿಸುತ್ತಾ ಹೋದಂತೆ, ಜನರಲ್ಲಿ ಪಕ್ಷದ ಬಗ್ಗೆ, ಅಪಾರ ವಿಶ್ವಾಸ ಮೂಡಿತು. ಸ್ವಾತಂತ್ರ‍್ಯ ಹೋರಾಟಗಳಲ್ಲಿ ಭಾಗಿ, ಸಾಮಾಜಿಕ ಸಮಾನತೆ, ಕಂದಾಚಾರ ನಿವಾರಣೆ ಮೊದಲಾದ ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗಿದ್ದರಿಂದ ಇದು ನಮ್ಮದೇ ಪಕ್ಷ ಎಂಬ ನಂಬಿಕೆ ಜನರಲ್ಲಿ ಮೂಡಿತು. ಪಂಡಿತ್ ಜವಹರಲಾಲ್ ನೆಹರು ಪ್ರಧಾನಿಯಾದಾಗಲಂತೂ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆಯಿತು. ನಂತರ ಇಂದಿರಾಗಾಂಧಿಯವರ ಕಾಲದಲ್ಲಿ, ಇಂಡಿಯಾ ಎಂದರೆ ಇಂದಿರಾ' ಎಂಬ ಮಾತು ಜನಜನಿತವಾಗಿತ್ತು. ಈ ನಡುವೆ ಅನೇಕ ಏಳುಬೀಳುಗಳು ಕಂಡು ಪಕ್ಷಕ್ಕೆ ಹಿನ್ನಡೆಯಾಗಿದ್ದು ನಿಜ. ಆದರೆ ಆಗಿನ ಯುವ ನಾಯಕ ರಾಜೀವ್ ಗಾಂಧಿ ದೇಶಕ್ಕೆ ಹೊಸ ಭರವಸೆಯನ್ನು ಮೂಡಿಸಿ ರಾಜಕೀಯ ವ್ಯವಸ್ಥೆಯ ಸುಧಾರಣೆಗೆ ಹೊಸ ನೋಟ ತಂದರು. ದೇಶದೆಲ್ಲೆಡೆ ಓಡಾಡಿ ದೇಶದ ಪ್ರಗತಿಯ ದಿಕ್ಕನ್ನು ಬದಲಿಸುವ ಆಶ್ವಾಸನೆಯನ್ನು ಜನರ ಮನಸ್ಸಿನಲ್ಲಿ ಮೂಡಿಸಿದರು.

ಮರುಕಳಿಸಿದ ಚರಿತ್ರೆ

ಆಗಲೇ ಹೇಳಿದಂತೆ ಈ ಇತಿಹಾಸ ಮರುಕಳಿಸಿದೆ. ರಾಜೀವ್ ಗಾಂಧಿಯವರ ಮಗ ರಾಹುಲ್ ಗಾಂಧಿಭಾರತ ಜೋಡಿಸಿ' ಯಾತ್ರೆಯ ಮೂಲಕ ಆ ಭರವಸೆಯನ್ನು ಮತ್ತೆ ಜನರ ಹೃದಯಗಳಲ್ಲಿ ನೆಲೆ ಮಾಡಿದರು. ಈ ಕುರಿತು ವಿರೋಧ ಪಕ್ಷಗಳಿಂದ ಎಷ್ಟೇ ಟೀಕೆ ಬಂದರೂ ಕೊನೆಗೆ ಜನತಾ ಜನಾರ್ದನರು ಕಾಂಗ್ರೆಸ್‌ನ ಕೈ ಹಿಡಿದರು. ಇತ್ತೀಚೆಗೆ ತೆಲಂಗಾಣದಲ್ಲೂ
ಇದೇ ರೀತಿ ಚರಿತ್ರಾರ್ಹ ದಾಖಲೆಯಾಗಿದೆ. ಅಂದು ರಾಜೀವ್ ಗಾಂಧಿಯವರಂತಹ ನಾಯಕರು ಜನರ ಮನಸ್ಸುಗಳನ್ನು ಹೇಗೆ ಜೋಡಿಸಿದ ರೋ ಈಗ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮೊದಲಾದ ನಾಯಕರು ಜನರ ಮನಸ್ಸುಗಳನ್ನು ಬೆಸೆಯುವ ಕೆಲಸ ಮಾಡುತ್ತಿದ್ದಾರೆ.
ಕಾಂಗ್ರೆಸ್ ಮಾಡಿದ್ದೇನು?
ಸ್ವಾತಂತ್ರದ ನಂತರದಿಂದ ಆರಂಭವಾಗಿ ೨೦೧೪ ರವರೆಗೆ ಬಹುತೇಕ ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ದೇಶಕ್ಕೇನು ಮಾಡಿದೆ ಎಂಬ ಪ್ರಶ್ನೆಯನ್ನು ವಿರೋಧ ಪಕ್ಷಗಳು ಉರುಹೊಡೆದುಕೊಂಡಿವೆ. ೨೦೦೪-೨೦೧೪ ರ ಅವಧಿಯಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ, ಉದ್ಯೋಗ ಖಾತರಿ ಮೂಲಕ ಗ್ರಾಮೀಣ ಕುಟುಂಬಗಳಿಗೆ ೧೦೦ ದಿನಗಳ ಕೆಲಸ ನೀಡಿತು. ಒಂದು ಅಧ್ಯಯನದ ಪ್ರಕಾರ, ಈ ಮಹತ್ವದ ಕ್ರಮದಿಂದ ೨೦೦೪-೦೫ ರಿಂದ ೨೦೧೧-೧೨ ರವರೆಗೆ ಬಡತನದ ಪ್ರಮಾಣ ಶೇ.೩೨ ರಷ್ಟು ಕಡಿಮೆಯಾಗಿ, ೧೪ ಕೋಟಿ ಜನರು ಬಡತನದ ಕೂಪಕ್ಕೆ ತಳ್ಳುವುದನ್ನು ತಡೆದಿತ್ತು. ಜನರ ಹಸಿವು ನೀಗಿಸುವ ಐತಿಹಾಸಿಕವಾದ ಆಹಾರ ಭದ್ರತಾ ಕಾಯ್ದೆಯಿಂದ ಆಹಾರ ಧಾನ್ಯಗಳ ಪಡಿತರ ವಿತರಣೆ ಜಾರಿಗೆ ಬಂತು. ವಿಶೇಷ ಆರ್ಥಿಕ ವಲಯಗಳ ಕಾಯ್ದೆಯಿಂದಾಗಿ ೨೦೧೨-೧೩ ನೇ ಸಾಲಿನಲ್ಲಿ ಈ ವಲಯಗಳಲ್ಲಿ ರಫುö್ತ, ಪ್ರಮಾಣ ಶೇ.೩೧ ರಷ್ಟು ಏರಿಕೆಯಾಗಿತ್ತು ಆರ್‌ಟಿಐ ಕಾಯ್ದೆ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ತಂದರೆ, ಆದರೆ, ಆರ್‌ಟಿಇ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಕಲಿಕೆಯ ವಿಶೇಷ ಹಕ್ಕನ್ನು ನೀಡಿತು. ವಿರೋಧ ಪಕ್ಷಗಳು ಅಂದು ವಿರೋಧಿಸಿ ಇಂದು ಅನುಸರಿಸುತ್ತಿರುವ ಆಧಾರ್ ಗುರುತಿನ ವ್ಯವಸ್ಥೆಯನ್ನು ತಂದಿದ್ದು ಕೂಡ ಯುಪಿಎ ಸರ್ಕಾರ.
ಸಂವಿಧಾನದ ಉಳಿವಿಗೆ ಕಾಂಗ್ರೆಸ್
ಜಾತ್ಯತೀತತೆ, ಸಮಾನತೆ, ಸಾರ್ವಭೌಮತೆ ಮೊದಲಾದ ಆಶಯಗಳು ಸೇರಿದಂತೆ ಸಂವಿಧಾನವನ್ನು ಕಾಪಾಡುವ ಉದ್ದೇಶದಿಂದ ಕಾಂಗ್ರೆಸ್ ತನ್ನ ಬಲವನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿದೆ. ಹೊಸ ಕಾಲದಲ್ಲಿ ಹೊಸ ಸವಾಲುಗಳನ್ನೆದುರಿಸುತ್ತಾ ಬಡವರು,
ದಲಿತರು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಭವಿಷ್ಯ ಕಟ್ಟಿಕೊಡುವ ಸಂಕಲ್ಪದೊಂದಿಗೆ ಪಕ್ಷ ಮುನ್ನಡೆಯುತ್ತಿದೆ. ಜಾತಿ ಹಾಗೂ ಧರ್ಮಗಳ ಆಧಾರದಲ್ಲಿ ಮನಸ್ಸುಗಳನ್ನು ಮುರಿದು ದ್ವೇಷವನ್ನು ಬಿತ್ತುವವರ ನಡುವೆ ಪ್ರೀತಿಯನ್ನು ಹಂಚುವ ಸಮಾಜಕಾರ್ಯದ ಮಹತ್ತರ ಹೊಣೆ ಕಾಂಗ್ರೆಸ್ ಪಕ್ಷಕ್ಕಿದೆ.
ಆಚರಣೆ ಅಲ್ಲ ಪ್ರಜಾತಂತ್ರದ ಆಶಯ
`ಪ್ರಜಾಪ್ರಭುತ್ವವು ಕೇವಲ ಸರ್ಕಾರದ ಒಂದು ರೂಪವಲ್ಲ. ಅದು ಮೂಲಭೂತವಾಗಿ ಸಮಾಜದ ಪ್ರತಿಯೊಬ್ಬರೂ ಪರಸ್ಪರರಿಗೆ ತೋರುವ ಗೌರವಾದರ ಭಾವನೆ' ಎಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದರು. ಇಂತಹ ವ್ಯವಸ್ಥೆಯನ್ನು ಕಟ್ಟಿಕೊಡುವ ಹಾಗೂ ಈ ವ್ಯವಸ್ಥೆಗೆ ಧಕ್ಕೆಯಾಗದಂತೆ ಕಾಪಾಡುವ ಹೊಣೆಯನ್ನು ಕಾಂಗ್ರೆಸ್ ಹೊತ್ತುಕೊಂಡಿದೆ. ಕಾಂಗ್ರೆಸ್ ಸಂಸ್ಥಾಪನಾ ದಿನವೆಂದರೆ ಕೇವಲ ವಾರ್ಷಿಕ ಆಚರಣೆಯಲ್ಲ, ಅದು ಪ್ರಜಾತಂತ್ರದ ಆಶಯಗಳನ್ನು ಎತ್ತಿ ಹಿಡಿಯುವ ಸಂಭ್ರಮ .

Next Article