ಪ್ರಜಾಪ್ರಭುತ್ವದ ಸೌಂದರ್ಯ ನಮ್ಮ ಒಗ್ಗಟ್ಟಿನಲ್ಲಿದೆ
ಪ್ರಜಾಪ್ರಭುತ್ವವು ಸಮಾನತೆ, ನ್ಯಾಯ, ಮತ್ತು ಬಾಂಧವ್ಯಗಳ ಮೇಲೆ ನೆಲೆಸಿದೆ
ಬೀದರ್: ನಗರದ ನೆಹರೂ ಕ್ರೀಡಾಂಗಣದಲ್ಲಿ ನಡೆದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿದರು.
ಗೌರವ ವಂದನೆ ಸ್ವೀಕರಿಸಿ ಬಳಿಕ ಮಾತನಾಡಿ ಮಹನೀಯರ ತ್ಯಾಗ ಮತ್ತು ಅವರ ಪ್ರಜಾಪ್ರಭುತ್ವದ ಕನಸುಗಳನ್ನು ಸ್ಮರಿಸುತ್ತಾ ಮಾತನಾಡಿ, ಪ್ರಜಾಪ್ರಭುತ್ವವು ಸಮಾನತೆ, ನ್ಯಾಯ, ಮತ್ತು ಬಾಂಧವ್ಯಗಳ ಮೇಲೆ ನೆಲೆಸಿದ್ದು, ಇದನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ, ಕಾಂಗ್ರೆಸ್ ಸರ್ಕಾರದ 5 ಪ್ರಮುಖ ಗ್ಯಾರಂಟಿಗಳು, ಅಂದರೆ ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ, ಗೃಹಲಕ್ಷ್ಮೀ, ಹಾಗೂ ಯುವನಿಧಿ ಯೋಜನೆಗಳು ಯಶಸ್ವಿಯಾಗಿ ಜಾರಿಗೆ ಬಂದಿದ್ದು, ಈ ಗ್ಯಾರಂಟಿಗಳಿಂದ ರಾಜ್ಯದ ಜನರ ಜೀವನಮಟ್ಟವು ಸುಧಾರಿಸಿದ್ದು, ನೆಮ್ಮದಿ ಮತ್ತು ಭದ್ರತೆಯನ್ನು ಒದಗಿಸಿವೆ. ಕಳೆದ 20 ತಿಂಗಳಲ್ಲಿ ಬೀದರ್ ಜಿಲ್ಲೆಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳಾದ ರಸ್ತೆಗಳ ಸುಧಾರಣೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಅಭಿವೃದ್ಧಿ, ಮೂಲಭೂತ ಸೌಕರ್ಯಗಳ ಪರಿಣಾಮಕಾರಿ ಅನುಷ್ಠಾನ, ಮತ್ತು ಹಸಿರುಕರಣ ಕಾರ್ಯಕ್ರಮಗಳು ಜಿಲ್ಲೆಯ ಜನತೆಯ ಜೀವನದಲ್ಲಿ ಸುಧಾರಣೆ ತಂದಿವೆ. ನಮ್ಮ ಉದ್ದೇಶ ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದು ಮತ್ತು ಪ್ರತಿಯೊಬ್ಬ ನಾಗರಿಕನ ಕನಸುಗಳನ್ನು ನನಸಾಗಿಸಲು ನಿರಂತರ ಶ್ರಮವಹಿಸುವುದಾಗಿದೆ, ಪ್ರಜಾಪ್ರಭುತ್ವದ ಸೌಂದರ್ಯ ನಮ್ಮ ಒಗ್ಗಟ್ಟಿನಲ್ಲಿ ಇದೆ. ಇಂದು ಪ್ರತಿಯೊಬ್ಬನೂ ಈ ಒಗ್ಗಟ್ಟಿನ ಸಂಕೇತವನ್ನು ಅರ್ಥಮಾಡಿಕೊಂಡು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡಲು ಶ್ರಮಿಸಬೇಕಾಗಿದೆ ಎಂದರು.