ಪ್ರಧಾನಿ ಮೋದಿ ಪ್ರಭಾವಿ ನಾಯಕ
ನವದೆಹಲಿ: ದೇಶದ ಪ್ರಭಾವಿ ಗಣ್ಯರ ಪಟ್ಟಿಯನ್ನು ಈಗ ದಿ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆ ಪ್ರಕಟಿಸಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ಪ್ರಭಾವಿ ನಾಯಕರಾಗಿ ಮುಂದುವರಿದಿದ್ದಾರೆ. ಗೃಹ ಸಚಿವ ಅಮಿತ್ ಶಾ ಹಾಗೂ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಅನೇಕ ಬಿಜೆಪಿ ಹಾಗೂ ಸಂಘಪರಿವಾರದ ನಾಯಕರು ಮೊದಲ ೧೦ ಹತ್ತು ಸ್ಥಾನಗಳಲ್ಲಿ ರಾರಾಜಿಸಿದ್ದಾರೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ಶತಕೋಟ್ಯಧಿಪತಿ ಉದ್ಯಮಿ ಗೌತಮ್ ಅದಾನಿ ಅವರಂತಹವರೂ ಸ್ಥಾನ ಗಿಟ್ಟಿಸಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮತ್ತೊಮ್ಮೆ ಆರಿಸಿಬರುವ ಸಂಭವನೀಯತೆಯ ಹಿನ್ನೆಲೆಯಲ್ಲಿ ಇಂಥ ಪಟ್ಟಿ ಪ್ರಕಟವಾಗಿರುವುದು ಇಲ್ಲಿ ಗಮನಾರ್ಹ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ೧೬ನೇ ಸ್ಥಾನ ಪಡೆದರೆ, ಹಿರಿಯ ನಾಯಕಿ ಸೋನಿಯಾ ಗಾಂಧಿ ೨೯ನೇ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ೩೬ನೇ ಸ್ಥಾನ ಪಡೆದಿದ್ದಾರೆ.
ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ(ಉ.ಪ್ರ.) ೬ನೇ, ಹಿಮಂತ ಬಿಸ್ವಾ ಶರ್ಮಾ( ಅಸ್ಸಾಂ) ೧೪ನೇ, ಮಮತಾ ಬ್ಯಾನರ್ಜಿ(ಪ.ಬಂಗಾಳ) ೧೫ನೇ, ಅರವಿಂದ ಕೇಜ್ರಿವಾಲ್(ದೆಹಲಿ) ೧೮ನೇ, ಸಿದ್ದರಾಮಯ್ಯ( ಕರ್ನಾಟಕ) ೨೨ನೇ, ನಿತೀಶ್ ಕುಮಾರ್( ಬಿಹಾರ) ೨೪ನೇ, ಎಂ.ಕೆ.ಸ್ಟಾಲಿನ್(ತಮಿಳ್ನಾಡು)೨೫ನೇ, ಅನುಮುಲಾ ರೇವಂತ ರೆಡ್ಡಿ(ತೆಲಂಗಾಣ)೩೯ನೇ ಸ್ಥಾನ ಗಿಟ್ಟಿಸಿದ್ದಾರೆ.
ಮೊದಲ ೧೦ ಶ್ರೇಯಾಂಕಿತರು
ನರೇಂದ್ರ ಮೋದಿ- ಪ್ರಧಾನಿ, ಅಮಿತ್ ಶಾ-ಕೇಂದ್ರ ಗೃಹ ಸಚಿವ, ಮೋಹನ್ ಭಾಗವತ್- ಆರೆಸ್ಸೆಸ್ ಮುಖ್ಯಸ್ಥ, ಡಿ ವೈ ಚಂದ್ರಚೂಡ್- ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ, ಎಸ್ ಜೈಶಂಕರ್-ವಿದೇಶಾಂಗ ಸಚಿವ, ಯೋಗಿ ಆದಿತ್ಯನಾಥ್- ಉತ್ತರ ಪ್ರದೇಶ ಸಿಎಂ, ರಾಜನಾಥ್ ಸಿಂಗ್-ರಕ್ಷಣಾ ಸಚಿವ, ನಿರ್ಮಲಾ ಸೀತಾರಾಮನ್-ಹಣಕಾಸು ಸಚಿವೆ, ಜೆಪಿ ನಡ್ಡಾ- ಬಿಜೆಪಿ ರಾಷ್ಟ್ರೀ ಯ ಅಧ್ಯಕ್ಷ, ಗೌತಮ್ ಅದಾನಿ- ಅದಾನಿ ಗ್ರೂಪ್‌ನ ಅಧ್ಯಕ್ಷರು.