For the best experience, open
https://m.samyuktakarnataka.in
on your mobile browser.

ಪ್ರವಾಸಿ ಸ್ಥಳಗಳ ಪ್ರವೇಶ ನಿರ್ಭಂದಿಸಿ ಆದೇಶ

09:43 PM Jul 31, 2024 IST | Samyukta Karnataka
ಪ್ರವಾಸಿ ಸ್ಥಳಗಳ ಪ್ರವೇಶ ನಿರ್ಭಂದಿಸಿ ಆದೇಶ

ಮಂಡ್ಯ ಜಿಲ್ಲೆಯ ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಕೃಷ್ಣರಾಜ ಸಾಗರದ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿರುವುದರಿಂದ, ನದಿಯ ಹೊರಹರಿವು ತೀವ್ರವಾಗಿದ್ದು, ಜಲಾಶಯದಿಂದ ಜುಲೈ 31ರಂದು ಸುಮಾರು 1,70,000 ಕ್ಯೂಸೆಕ್ಸ್ ನೀರನ್ನು ಕಾವೇರಿ ನದಿಗೆ ಹರಿಸಲಾಗಿರುತ್ತದೆ.

ಶ್ರೀರಂಗಪಟ್ಟಣ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಪ್ರವಾಸಿ ಸ್ಥಳಗಳಾದ ಕೆ.ಆರ್.ಎಸ್ ಜಲಾಶಯ, ಬೃಂದಾವನ ಉದ್ಯಾನವನ, ಪಶ್ಚಿಮವಾಹಿನಿ, ಗೋಸಾಯ್ ಘಾಟ್, ಬಲಮುರಿ ಎಡಮುರಿ, ವೆಲ್ಲೆಸ್ಲಿ ಸೇತುವೆ, ನಿಮಿಷಾಂಭ ದೇವಸ್ಥಾನದ ಪಕ್ಕದಲ್ಲಿರುವ ಸ್ನಾನ ಘಟ್ಟ, ರಂಗನತಿಟ್ಟು ಹಾಗೂ ಕೆ.ಆರ್.ಎಸ್ ಜಲಾಶಯದಿಂದ ಕಾವೇರಿ ನದಿಯ ಹೊರಹರಿವಿನ ಆಜು-ಬಾಜಿ ಸ್ಥಳಗಳ ವೀಕ್ಷಣೆಯನ್ನು ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕರ ಹಾಗೂ ಪ್ರವಾಸಿಗರ ಹಿತದೃಷ್ಟಿಯಿಂದ ಆಗಸ್ಟ್ 01 ಮತ್ತು 02 ರಂದು ಸಾರ್ವಜನಿಕರ ಹಾಗೂ ಪ್ರವಾಸಿಗರ ಪ್ರವೇಶವನ್ನು ನಿರ್ಭಂದಿಸಿ ಜಿಲ್ಲಾಧಿಕಾರಿ ಡಾ: ಕುಮಾರ ಅವರು ಆದೇಶ ಹೊರಡಿಸಿದ್ದಾರೆ.