For the best experience, open
https://m.samyuktakarnataka.in
on your mobile browser.

ಪ್ರವೀಣ್ ಕುಮಾರ್ ಚಿನ್ನದ ಜಿಗಿತ

10:57 PM Sep 06, 2024 IST | Samyukta Karnataka
ಪ್ರವೀಣ್ ಕುಮಾರ್ ಚಿನ್ನದ ಜಿಗಿತ

ಪ್ಯಾರಿಸ್: ಭಾರತೀಯ ಪ್ಯಾರಾ ಅಥ್ಲೀಟ್ ಪ್ರವೀಣ್ ಕುಮಾರ್ ಚಿನ್ನದ ಪದಕ ಗೆಲ್ಲುವ ಮೂಲಕ ಐತಿ ಹಾಸಿಕ ಸಾಧನೆ ಮಾಡಿದ್ದಾರೆ. ಪುರುಷರ ಲಾಂಗ್ ಜಂಪ್ ಟಿ೬೪ ಸ್ಪರ್ಧೆಯಲ್ಲಿ ಏಷ್ಯಾದ ದಾಖಲೆ ೨.೦೮ ಮೀಟರ್ ಜಿಗಿಯುವ ಮೂಲಕ ಹೊನ್ನಿನ ಪದಕ ತನ್ನದಾಗಿಸಿಕೊಂಡರು. ಪ್ರವೀಣ್‌ರ ಈ ಸಾಧನೆಯಿಂದ ಭಾರತ ಈ ಬಾರಿಯ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ೬ನೇ ಚಿನ್ನ ಹಾಗೂ ಒಟ್ಟು ೨೬ನೇ ಪದಕ ಸಾಧಿಸಿದಂತಾಗಿದೆ. ಇದು ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಸಾಧಿಸಿದ ಸಾರ್ವಕಾಲಿಕ ದಾಖಲೆಯಾಗಿದೆ.