For the best experience, open
https://m.samyuktakarnataka.in
on your mobile browser.

ಪ್ರಾಸಿಕ್ಯೂಶನ್ ಅನುಮತಿ ವಿರುದ್ಧ ದೆಹಲಿಯಲ್ಲೂ ಪ್ರತಿಭಟನೆ

12:01 PM Aug 17, 2024 IST | Samyukta Karnataka
ಪ್ರಾಸಿಕ್ಯೂಶನ್ ಅನುಮತಿ ವಿರುದ್ಧ ದೆಹಲಿಯಲ್ಲೂ ಪ್ರತಿಭಟನೆ

ಬಳ್ಳಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ರಾಜ್ಯ ಪಾಲರು ಪ್ರಾಸಿಕ್ಯೂಶನ್ ಅನುಮತಿ ನೀಡಿರುವುದನ್ನು ವಿರೋಧಿಸಿ ರಾಜ್ಯದ ಸಂಸದರೆಲ್ಲರೂ ದೆಹಲಿಯಲ್ಲೂ ಪ್ರತಿಭಟನೆ ಮಾಡುತ್ತೇವೆ ಎಂದು ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್ ಹೇಳಿದರು.

ತುಂಗಭದ್ರಾ ಜಲಾಶಯದ ಕ್ರಸ್ಟ್‌ ‌ಅಳವಡಿಕೆಯ ಕಾರ್ಯ ವೀಕ್ಷಣೆ ‌ಬಳಿಕ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದರು. ಕೇಂದ್ರ ಬಿಜೆಪಿ ಸರಕಾರ ಆಯಾ ರಾಜ್ಯಗಳಲ್ಲಿ ಸ್ವತಂತ್ರವಾಗಿ ಆಡಳಿತ ‌ನಡೆಸುವ ಸರಕಾರಗಳ ಮೇಲೆ ಸವಾರಿ ಮಾಡುವ ಕೆಲಸ ನಿರಂತರ ಮಾಡುತ್ತಿದೆ. ಈಗ ಮುಡಾ ನೆಪ ಮಾಡಿಕೊಂಡು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸಿದೆ. ಇದು ಪ್ರಜಾಪ್ರಭುತ್ವ ವಿರೋಧಿಯಾಗಿದ್ದು ಇದರ ವಿರುದ್ದ ‌ನಾವೆಲ್ಲ ಒಗ್ಗೂಡಿ ಹೋರಾಟ ಮಾಡುತ್ತೇವೆ ನಮ್ಮ ಕಾಂಗ್ರೆಸ್ ರಾಜ್ಯಾಧ್ಯಕ್ಷ, ರಾಜ್ಯ ನಾಯಕರ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ. ದೆಹಲಿಯಲ್ಲೂ ರಾಜ್ಯದ ಸಂಸರೆಲ್ಲ ಸೇರಿ ಹೋರಾಟ ‌ಮಾಡುತ್ತೇವೆ ಎಂದರು.
ರಾಜೀನಾಮೆ ಪ್ರಶ್ನೆಯೇ ಇಲ್ಲ: ಮುಡಾ ಹಗರಣದ ಕುರಿತು ಬಿಜೆಪಿ ನಾಯಕರು ಮಾಡುತ್ತಿರುವ ಯಾವುದೇ ಆರೋಪದಲ್ಲಿ ಉರುಳಿಲ್ಲ. ಈ ಬಗ್ಗೆ ಈಗಾಗಲೇ ಸಿದ್ದರಾಮಯ್ಯ ಅವರು ಕಾನೂನಾತ್ಮಕ ಉತ್ತರ ನೀಡಿದ್ದಾರೆ. ಸಮರ್ಥವಾಗಿ ಎದುರಿಸಲು ಸಿದ್ದರಿದ್ದಾರೆ. ಯಾವುದೇ ಕಾರಣಕ್ಕೂ ಸಿಎಂ ರಾಜೀನಾಮೆ ‌ಕೊಡುವ ಪ್ರಶ್ನೆ ಇಲ್ಲ. ಇಂತಹ‌ ಪ್ರಕರಣಕ್ಕೆ ರಾಜೀನಾಮೆ ನೀಡಿದರೆ ಹತ್ತು ಬಾರಿ‌ ರಾಜೀನಾಮೆ ‌ನೀಡಿದಂತಾಗುತ್ತದೆ ಎಂದರು.