FIR ಹಾಕಿಸುವುದೇ ಪ್ರಿಯಾಂಕ್ ಖರ್ಗೆ ಫುಲ್ ಟೈಮ್ ಕೆಲಸ
ಹುಬ್ಬಳ್ಳಿ : ಪ್ರಿಯಾಂಕ್ ಖರ್ಗೆ ಶಾಸಕರಾದರೂ ಅವರಿಗೆ ಮಾಡಲು ಏನು ಕೆಲಸ ಇಲ್ಲ ಆದ್ದರಿಂದ ಎಲ್ಲರ ಮೇಲು ಹುಡುಕಿ ಹುಡುಕಿ ಎಫ್ಐಆರ್ ಹಾಕತಾರೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಅವರು ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬ ನನ್ನ ಸಂಪರ್ಕ ಮಾಡಿದೆ. ಅವರ ತಂದೆಯೇ ಹೇಳಿದ್ದಾರೆ. ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಮಾಧ್ಯಮಗಳು ಕೂಡ ಅದನ್ನ ವರದಿ ಮಾಡಿವೆ. ಮಾಧ್ಯಮ ಸ್ವಾತಂತ್ರ್ಯ ಹತ್ತಿಕುವ ಕೆಲಸ ನಡೆಯುತ್ತಿದೆ. ಒತ್ತಡಕ್ಕೆ ಒಳಗಾಗಿ ಪೊಲೀಸರು ಕೇಸ್ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ, ಆತ್ಮಹತ್ಯೆ ಮಾಡಿಕೊಂಡ ರೈತನ ಜಮೀನಿನ ಪಹಣಿಯಲ್ಲಿ ವಕ್ಫ್ ಇದೆ ಅಂತ ನಮೂದು ಆಗಿದೆ. ಪಹಣಿಯ ಪ್ರಿಂಟ್ ತೆಗೆದುಕೊಡುತ್ತೇನೆ. ಮಗ ಆತ್ಮಹತ್ಯೆ ಮಾಡ್ಕೊಂಡಿದ್ದಾನೆಂದು ಅವರ ತಂದೆ ಹೇಳಿದ್ದಾರೆ. ರಾಜ್ಯದಲ್ಲಿ ರೈತರ ಜಾಗ ಕಬಳಿಸಲು ವಕ್ಫ್ ಬೋರ್ಡ್ಗೆ ಬೆಂಬಲ. ವಕ್ಫ್ ಬೋರ್ಡ್ನ ಹಳೆಯ ತಪ್ಪುಗಳನ್ನು ಮುಚ್ಚಿ ಹಾಕುತ್ತಿದ್ದಾರೆ ಎಂದರು.
ಪೋಸ್ಟ್ ಡಿಲೀಟ್: ನಾನು ಜವಾಬ್ದಾರಿ ಸ್ಥಾನದಲ್ಲಿ ಇರೋದ್ರಿಂದ ಹಾಗೂ ಕಾನೂನಿನ ಬಗ್ಗೆ ಗೌರವ ಇರೋದ್ರಿಂದ ಪೋಸ್ಟ್ ಡಿಲೀಟ್ ಮಾಡಿದೆ. ಪ್ರಿಯಾಂಕ್ ಖರ್ಗೆ ಶಾಸಕರಾದರೂ ಅವರಿಗೆ ಮಾಡಲು ಏನು ಕೆಲಸ ಇಲ್ಲ ಅನ್ಸುತ್ತೆ. ಹುಡುಕಿ ಹುಡುಕಿ ಎಫ್ಐಆರ್ ಹಾಕಿಸುತ್ತಿದ್ದಾರೆ. ಅವರು ಫುಲ್ ಟೈಮ್ ಇದನ್ನೆ ಕೆಲಸ ಮಾಡಿಕೊಂಡಿದ್ದಾರೆ ಸುಪ್ರೀಂ ಕೋರ್ಟ್ ಇವರಿಗೆ ಛೀಮಾರಿ ಹಾಕುತ್ತಿದೆ ಎಂದರು