ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಪ್ರೇಮ್ ಅಡ್ಡದಿಂದ ಬಂದ ಕೆಡಿ: ನಾಳೆಯಿಂದ ಶಿವಸ್ಮರಣೆ

02:27 PM Dec 23, 2024 IST | Samyukta Karnataka

ಶಿವ ಶಿವ, ಪಕ್ಕಾ ಜಾನಪದೀಯ ಸ್ಟೈಲ್‌ನಲ್ಲಿದೆ

ಧ್ರುವ ಸರ್ಜಾ ಹಾಗು ನಿರ್ದೇಶಕ ಪ್ರೇಮ್ ಕಾಂಬಿನೇಷನ್ KD-ದಿ ಡೆವಿಲ್ ಚಿತ್ರದ ಹಾಡೊಂದು 24 ನೇ ತಾರೀಖು ಬಿಡುಗಡೆಯಾಗುತ್ತಿದೆ.
ಅದಕ್ಕೇ ಕೆ ಅಷ್ಟೊಂದು ಹೈಪು ಅಂತೀರೇನೋ. ಕಾರಣವಿದೆ. ಯಾಕೆಂದರೆ, ಪ್ರೇಮ್ ಸಿನಿಮಾದಲ್ಲಿ ಯಾರು ಏನನ್ನು ಇಷ್ಟ ಪಡುತ್ತಾರೋ ಬಿಡುತ್ತಾರೋ…ಹಾಡುಗಳನ್ನಂತೂ ಪ್ರತಿಯೊಬ್ಬರೂ ಶ್ಲಾಘಿಸುತ್ತಾರೆ. ಹಾಡುಗಳು ಆ ವರ್ಷದ ಹಿಟ್ ಲಿಸ್ಟ್‌ನಲ್ಲಿ ದಾಖಲಾಗುತ್ತವೆ. ಹೀಗಾಗಿ ಕೆ ಡಿ ಸಿನಿಮಾದ ಆಡಿಯೋ ಖರೀದಿಸಿರುವ ಆನಂದ್ ಆಡಿಯೋದವರು ಆ ಮ್ಯಾಜಿಕ್ ಬಯಸಿ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡುತ್ತಿದ್ದಾರೆ. ಆಡಿಯೋದ ಹಕ್ಕುಗಳು ಕೂಡ ದೊಡ್ಡ ಮೊತ್ತಕ್ಕೆ ಬಿಕರಿಯಾಗಿದೆ ಎಂಬ ಮಾತಿದೆ. ಆದರೆ ಎಷ್ಟಕ್ಕೆ ಎಂಬುದನ್ನು ಆನಂದ್ ಆಡಿಯೋದ ಶ್ಯಾಮ್ ಕೂಡ ಹೇಳಲಿಲ್ಲ. ನಿರ್ಮಾಪಕ ಸುಪ್ರೀತ್ ಕೂಡ ಘೋಷಿಸಲಿಲ್ಲ. ಒಟ್ಟಿನಲ್ಲಿ ಕೆ ಡಿ ಸುದ್ದಿ ಶುರುಮಾಡಿದ್ದಾರೆ ಪ್ರೇಮ್.

ಈ ವಾರ ಬಿಡುಗಡೆಯಾಗುತ್ತಿರುವ ಹಾಡು ಶಿವ ಶಿವ, ಪಕ್ಕಾ ಜಾನಪದೀಯ ಸ್ಟೈಲ್‌ನಲ್ಲಿದೆ. ನಾನು ಮತ್ತು ಕೈಲಾಶ್ ಖೇರ್ ಇಬ್ಬರು ಹಾಡಿದ್ದೇವೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮವಾದ್ದರಿಂದ ಆಯಾಯ ಭಾಷೆಗೆ ಅಲ್ಲಿನ ಖ್ಯಾತ ಗಾಯಕರು ಹಾಡಿದ್ದಾರೆ. 1000ಕ್ಕೂ ಹೆಚ್ಚು ಡ್ಯಾನ್ಸರ್‌ಗಳು ಈ ಹಾಡಿನಲ್ಲಿ ಹೆಜ್ಜೆ ಕುಣಿಸಿದ್ದು, ತುಂಬಾ ಕಲರ್ಫುಲ್ ಆಗಿ ಚಿತ್ರಿಸಿದ್ದೇವೆ. ಮಕ್ಕಳಿಗಂತೂ ಶಿವ ಶಿವ ಹಾಡು ತುಂಬಾ ನೆಚ್ಚಿಗೆ ಯಾಗುತ್ತದೆ' ಎಂದರು ಪ್ರೇಮ್.

ಪ್ರತೀ ಹಾಡನ್ನು ಗ್ರ್ಯಾಂಡ್ ಆಗಿಯೇ ಸಿದ್ಧಪಡಿಸಿದ್ದೇವೆ ಅನ್ನೋದು ಅವರ ಹೆಚ್ಚುವರಿ ಮಾತು. ಧ್ರುವ ಕೂಡ ಪ್ರೇಮ್ ಸಿನಿಮಾದ ಹಾಡುಗಳ ಬಗ್ಗೆ ಮೆಚ್ಚಿ ಮಾತಾಡಿದರು. ನಾನು ಬೇರೆ ಯಾವುದರ ಬಗ್ಗೆಯು ತಲೆಕೆಡಿಸಿಕೊಳ್ಳುವುದಿಲ್ಲ. ಅಭಿಮಾನಿಗಳಿಗೆ ನನ್ನ ಪಾತ್ರ ಹಿಡಿಸಬೇಕು. ಅದಷ್ಟೇ ನನ್ನ ಗುರಿ. ಅದಕ್ಕಾಗಿ ಎಷ್ಟು ಕಷ್ಟ ಪಡಲು ಬೇಕಾದರೂ ಸಿದ್ಧ ಎಂದರು. ನಿರ್ಮಾಪಕ ಸುಪ್ರೀತ್ ಕೆ ಡಿ ಸಿನಿಮಾ ಒಂದು ದೊಡ್ಡ ಕ್ಯಾನ್ವಾಸ್‌ನ ಚಿತ್ರ ಎಂದರು. ಸಿನಿಮಾದ ಚಿತ್ರೀಕರಣಕ್ಕೆಂದು ಸುಮಾರು ಇಪ್ಪತ್ತು ಎಕರೆ ಜಾಗದಲ್ಲಿ ಸೈಟ್ ಹಾಕಿ ಶೂಟಿಂಗ್ ಮಾಡಲಾಗಿದೆಯಂತೆ. ಒಂದೆರಡು ಹಾಡನ್ನು ಚಿತ್ರೀಕರಿಸುವುದು ಇನ್ನೂ ಬಾಕಿ ಇರುವುದರಿಂದ ಬಿಡುಗಡೆ ದಿನಾಂಕ ಅದಾದ ಮೇಲೆ ಪ್ರಕಟಿಸುವುದಾಗಿ ಹೇಳಿಕೊಂಡರು. ಅರ್ಜುನ್ ಜನ್ಯ ಕೆ ಡಿ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ಯುರೋಪ್ ಮುಂಬೈ ಚೆನ್ನೈ ಸ್ಟುಡಿಯೋ ಗಳಲ್ಲಿ ಸಂಗೀತದ ಕೆಲಸ ನಡೆದಿರುವುದಾಗಿ ಹೇಳಿದರು ನಿರ್ದೇಶಕ ಪ್ರೇಮ್.

Tags :
@goldenganii#KD#KDTheDevil ❤️‍🔥#ShivaShiva
Next Article