ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಪ್ರೋಬಾ-3 ನೌಕೆ ಯಶಸ್ವಿಯಾಗಿ ನಭಕ್ಕೆ

04:15 PM Dec 05, 2024 IST | Samyukta Karnataka

ಬೆಂಗಳೂರು: ಇಸ್ರೋದ ಪ್ರೊಬಾ -3 ಮಿಷನ್ ಇಂದು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.
ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ನೆಗೆಯಿತು. ಕೃತಕ ಸೂರ್ಯ ಗ್ರಹಣಗಳನ್ನು ಸೃಷ್ಟಿಸುವ ಇಎಸ್ಎಯ ಮಹತ್ವಾಕಾಂಕ್ಷಿ, ಐತಿಹಾಸಿಕ ಪ್ರೋಬಾ-3 ಯೋಜನೆ ಸೂರ್ಯನನ್ನು ಹೊಸ ರೀತಿಯಲ್ಲಿ ಅಧ್ಯಯನ ಮಾಡಲು ಅವಕಾಶ ಕಲ್ಪಿಸಲಿದೆ. ಪ್ರೊಬಾ -3 ಎರಡು ಗಗನನೌಕೆಗಳನ್ನು ಒಳಗೊಂಡಿರುತ್ತದೆ. ಆಕಲ್ಟರ್ ಸ್ಪೇಸ್‌ಕ್ರಾಫ್ಟ್ (OSC) ಮತ್ತು ಕರೋನಾಗ್ರಾಫ್ ಸ್ಪೇಸ್‌ಕ್ರಾಫ್ಟ್ (CSC) ಎಂಬ ಈ ಎರಡು ಬಾಹ್ಯಾಕಾಶ ನೌಕೆಗಳು "ಸ್ಟ್ಯಾಕ್ಡ್ ಕಾನ್ಫಿಗರೇಶನ್"ನಲ್ಲಿ ಜತೆಯಾಗಿರುತ್ತವೆ. ಕೃತಕ ಸೌರ ಗ್ರಹಣಗಳನ್ನು ಅನುಕರಿಸಿ ಕಾರ್ಯನಿರ್ವಹಿಸುತ್ತದೆ. ಎರಡು ಉಪಗ್ರಹಗಳು ಹೆಚ್ಚು ಅಂಡಾಕಾರದ ಕಕ್ಷೆಗಳಲ್ಲಿ 150-ಮೀಟರ್ ದೂರದಲ್ಲಿ ಜತೆಯಾಗಿ ಕಾರ್ಯನಿರ್ವಹಿಸುತ್ತವೆ. ಇದು ಸೂರ್ಯನ ಹೊರಗಿನ ವಾತಾವರಣ ಅಧ್ಯಯನ ಮಾಡುವ ಸಲುವಾಗಿ ವಿಶೇಷವಾಗಿ ವಿನ್ಯಾಸ ಮಾಡಿರುವ ನೌಕೆಗಳಾಗಿವೆ.

Tags :
#ISRO#ಉಡಾವಣೆ
Next Article