For the best experience, open
https://m.samyuktakarnataka.in
on your mobile browser.

ಫ್ಲಾಟ್, ಮಾಲ್-ಹಸಿತ್ಯಾಜ್ಯ ಸಂಸ್ಕರಿಸಲು ಸೂಚನೆ

07:42 PM Dec 12, 2024 IST | Samyukta Karnataka
ಫ್ಲಾಟ್  ಮಾಲ್ ಹಸಿತ್ಯಾಜ್ಯ ಸಂಸ್ಕರಿಸಲು ಸೂಚನೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೆಲೆಸಿರುವ ೩೦ಕ್ಕಿಂತ ಹೆಚ್ಚಿನ ಫ್ಲಾಟ್‌ಗಳನ್ನು ಹೊಂದಿರುವ ಅಪಾರ್ಟ್‌ಮೆಂಟ್‌ಗಳು ೫೦೦೦ ಚ.ಅಡಿಗೂ ಅಧಿಕ ವಿಸ್ತೀರ್ಣದ ಸಂಕೀರ್ಣಗಳು, ಉದ್ದಿಮೆ ಮತ್ತು ವ್ಯಾಪಾರಸ್ಥರು, ಮಾಲ್‌ಗಳು, ವಾಣಿಜ್ಯ ಸಂಸ್ಥೆಗಳು, ಪೂಜಾ ಸ್ಥಳಗಳು, ಸಾರ್ವಜನಿಕ ವಲಯದ ಉದ್ದಿಮೆಗಳು, ಖಾಸಗಿ ಕಂಪನಿಗಳು ಹಾಗೂ ಇನ್ನಿತರ ಇಲಾಖೆಗಳು ಪ್ರತಿನಿತ್ಯ ತಮ್ಮ ಉದ್ದಿಮೆಯಿಂದ ಸರಾಸರಿ ೧೦೦ ಕೆ.ಜಿಗಿಂತ ಹೆಚ್ಚು ತ್ಯಾಜ್ಯ ಉತ್ಪಾದಿಸುವ ಬೃಹತ್ ತ್ಯಾಜ್ಯ ಉತ್ಪಾದಕರು ತಮ್ಮಲ್ಲಿ ಉತ್ಪಾದನೆಯಾಗುವ ಘನ ತ್ಯಾಜ್ಯವನ್ನು ೩ ವಿಧವಾಗಿ (ಹಸಿತ್ಯಾಜ್ಯ, ಒಣತ್ಯಾಜ್ಯ, ಅಪಾಯಕಾರಿ ತ್ಯಾಜ್ಯ)ಗಳಾಗಿ ವಿಂಗಡಿಸಿ, ಹಸಿ ತ್ಯಾಜ್ಯವನ್ನು ತಮ್ಮ ಆವರಣದಲ್ಲಿಯೇ ಸಂಸ್ಕರಿಸಿ ಗೊಬ್ಬರ ಉತ್ಪತ್ತಿ ಮಾಡುವ ಕುರಿತು ಅಗತ್ಯ ಕ್ರಮವನ್ನು ೨೦೨೫ ಜ.೧೫ರ ವರೆಗೆ ಸಮಯಾವಕಾಶವನ್ನು ನಿಗದಿಪಡಿಸಲಾಗಿದೆ.
ಜನವರಿ-೨೦೨೫ರ ಅಂತ್ಯದಲ್ಲಿ ಮ.ನ.ಪಾ ವ್ಯಾಪ್ತಿಯ ಬೃಹತ್ ತ್ಯಾಜ್ಯ ಉತ್ಪಾದಕರು ಹಸಿ ತ್ಯಾಜ್ಯವನ್ನು ತಮ್ಮ ಆವರಣದಲ್ಲಿಯೇ ಸಂಸ್ಕರಿಸಿ ವಿಲೇವಾರಿ ಮಾಡಲು ವಿಫಲವಾದಲ್ಲಿ ಘನ ತ್ಯಾಜ್ಯ ನಿರ್ವಹಣೆ ನಿಯಮಗಳು ೨೦೧೬ ಮತ್ತು ಮ.ನ.ಪಾ ಘನ ತ್ಯಾಜ್ಯ ನಿರ್ವಹಣೆ ಬೈಲಾ-೨೦೧೯ ರ ಪ್ರಕಾರ ರೂ. ೧೫,೦೦೦ ದಂಡ ವಿಧಿಸಲಾಗುತ್ತದೆ. ಸಾರ್ವಜನಿಕರು ಹೆಚ್ಚಿನ ಮಾಹಿತಿಯನ್ನು ಪಾಲಿಕೆಯ ವೆಬ್‌ಸೈಟ್‌ನಲ್ಲಿ ಪಡೆಯಬಹುದು.