ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಬಂಡೀಪುರವು ಕೇವಲ ಒಂದು ರಸ್ತೆ ಅಲ್ಲ…

03:44 PM Dec 04, 2024 IST | Samyukta Karnataka

ಬೆಂಗಳೂರು: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಬಂಡೀಪುರದ ಮೂಲಕ ರಾತ್ರಿ ಪ್ರಯಾಣ ನಿರ್ಬಂಧವನ್ನು ನಿಷೇದಿಸುವ ವಿಚಾರದ ಬಗ್ಗೆ ನೀಡಿರುವ ಇತ್ತೀಚಿನ ಹೇಳಿಕೆ ಕಾಂಗ್ರೆಸ್ ನಾಯಕತ್ವದಲ್ಲಿನ ಭಿನ್ನಾಭಿಪ್ರಾಯವನ್ನು ತೋರುತ್ತದೆ ಎಂದು ಸಂಸದ ಯದುವೀರ್ ಒಡೆಯರ್‌ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಒಂದು ಕಡೆ, ಮುಖ್ಯಮಂತ್ರಿ ನಿರ್ದಿಷ್ಟವಾಗಿ ಅಂಥ ಯಾವುದೇ ಪ್ರಸ್ತಾಪವಿಲ್ಲ ಎಂದು ನಿರಾಕರಿಸುತ್ತಾರೆ. ಇನ್ನೊಂದು ಕಡೆ, ಪಕ್ಷದ ರಾಷ್ಟೀಯ ನಾಯಕರು ಅದಕ್ಕೆ ವಿರುದ್ಧವಾಗಿ ಸೂಚನೆ ನೀಡುತ್ತಿದ್ದಾರೆ. ಈ ಅಸಮನ್ವಯತೆ ಅವರ ಆಡಳಿತದ ಪ್ರಾಮಾಣಿಕತೆಯ ಬಗ್ಗೆ ಸಂದೇಹಗಳನ್ನು ಹುಟ್ಟುಹಾಕುತ್ತದೆ. ಮೇಲಾಗಿ, ಈ ಪ್ರಸ್ತಾಪಗಳು ನಮ್ಮ ದೇಶದ ಪರಿಸರ ವ್ಯವಸ್ಥೆಗಳ ಸಂರಕ್ಷಣೆಯ ಬಗ್ಗೆ ಚಿಂತೆಯನ್ನೂ ತೋರುತ್ತವೆ. ಬಂಡೀಪುರವು ಕೇವಲ ಒಂದು ರಸ್ತೆ ಅಲ್ಲ—ಇದು ಅನೇಕ ವನ್ಯಜೀವಿ ಪ್ರಭೇಧಗಳ ವಾಸಸ್ಥಳವಾಗಿದೆ, ಅವುಗಳನ್ನು ಮಾನವ ಚಟುವಟಿಕೆಗಳಿಂದ ರಕ್ಷಿಸಲು, ವಿಶೇಷವಾಗಿ ರಾತ್ರಿ ಸಮಯದಲ್ಲಿ, ಸೂಕ್ಷ್ಮ ಅವಧಿಯಲ್ಲಿ ಅವುಗಳಿಗೆ ರಕ್ಷಣೆ ನೀಡಬೇಕಾದ ಅಗತ್ಯವಿದೆ.

ರಾಜಕೀಯ ನಾಯಕರು ಈ ದೇಶದ ಪ್ರಕೃತಿ ಸಂರಕ್ಷಣೆಗೆ ಪ್ರಜ್ಞಾಪೂರ್ವಕವಾಗಿರುವುದನ್ನು ನಿರ್ಧರಿಸಬೇಕೇ ಹೊರತು ತಮ್ಮ ಪ್ರಣಾಳಿಕೆಯು ಕೆಲವೊಬ್ಬರಿಗೆ ಲಾಭವನ್ನು ತರುವಂತೆ ಮಾಡಿರುವುದರಿಂದ ಈ ರೀತಿಯ ನಿರ್ಭಂಧವನ್ನು ಹಿಂಪಡೇದು ಪರಿಸರ ಹಾಗೂ ವನ್ಯಜೀವಿಗಳ ಸರ್ವನಾಶ ಮಾಡುವುದು ಸರಿಯಲ್ಲ , ಇದರಿಂದ ಸಂಭವಿಸಬಹುದಾದ ಹಾನಿಯ ಬಗ್ಗೆಯು ಸಹ ಚಿಂತಿಸಬೇಕಾಗಿದೆ.

ಒಟ್ಟಾರೆ ಕರ್ನಾಟಕಕ್ಕೆ ಅವಶ್ಯಕವಾದದ್ದು ಏನೆಂದರೆ, ಒಂದೇ ಧ್ವನಿಯಲ್ಲಿ ಮಾತನಾಡುವ, ನಾಡಿನ ಜನತೆ ಮತ್ತು ಪರಿಸರದ ಹಿತದೃಷ್ಠಿಯಿಂದ ಕ್ರಮಗಳನ್ನೂ ತೆಗೆದುಕೊಳ್ಳುವ ಬಲಿಷ್ಠ ಸರ್ಕಾರ ಎಂದಿದ್ದಾರೆ.

Tags :
#ಅರಣ್ಯ#ಬಂಡೀಪುರ
Next Article