ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಬಂತಿದೋ ಸಾರ್ವತ್ರಿಕ ಚುನಾವಣೆಗೆ ತಾರಾಬಲ

01:00 AM Mar 11, 2024 IST | Samyukta Karnataka

ಜನತಂತ್ರ ಪದ್ಧತಿಯಲ್ಲಿ ಚುನಾವಣೆಗೆ ಹಬ್ಬದ ರೂಪ ಬರಲು ಕಾರಣಗಳು ಹಲವಾರು; ಪ್ರಜಾಪ್ರಭುತ್ವ ಎಂದರೆ ಜನರಿಂದ-ಜನರಿಗಾಗಿ-ಜನರಿಗೋಸ್ಕರ ಎಂದಾದ ಮೇಲೆ ಜನರ ಮತದಾನದ ಕಾಲದಲ್ಲಿ ಇಂತಹ ಸಡಗರ ರೂಪುಗೊಳ್ಳುವುದು ಸಾಮಾನ್ಯವಾದ ಪ್ರಕ್ರಿಯೆ. ವ್ಯಕ್ತಿಗತವಾಗಿದ್ದರೆ ಹಬ್ಬದ ರೂಪ ಬರುತ್ತಿರಲಿಲ್ಲ. ಆದರೆ, ಸಾಂಘಿಕವಾಗಿ ಚುನಾವಣೆ ನಡೆಯುವ ಪರಿಣಾಮವೇ ಈ ಹಬ್ಬದ ರೂಪ. ಭವ್ಯ ಭಾರತದ ಭವಿಷ್ಯವನ್ನು ನಿಷ್ಕರ್ಷೆ ಮಾಡಲಿರುವ ಲೋಕಸಭಾ ಚುನಾವಣೆಗೆ ಮುಹೂರ್ತ ಈ ವಾರದ ಒಂದೆರಡು ದಿನದ ಒಳಗೆ ನಿಷ್ಕರ್ಷೆಯಾಗುವ ಪರಿಣಾಮವೆಂದರೆ ದೇಶದಾದ್ಯಂತ ಚುನಾವಣೆಯ ಕಾವು.
ಸಾರ್ವತ್ರಿಕ ಚುನಾವಣೆ ಎಂದ ಮೇಲೆ ರಾಜಕೀಯ ಪಕ್ಷಗಳು, ಮುಖಂಡರು, ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಳ್ಳುವುದು ಸ್ವಾಭಾವಿಕವೇ. ಆದರೆ, ಇವರೆಲ್ಲರ ಪಾಲ್ಗೊಳ್ಳುವಿಕೆಯ ಕೇಂದ್ರ ಬಿಂದು ಸಾರ್ವಜನಿಕರು ಅರ್ಥಾತ್ ಮತದಾರರು. ಮತದಾನದ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ತಮ್ಮ ತಮ್ಮ ವೈಚಾರಿಕತೆಗೆ ಅನುಗುಣವಾಗಿ ಪ್ರಚಾರ ಕಾರ್ಯ ನಡೆಸುವ ಮುಖಂಡರಿಗೆ ಯಾವಾಗಲೂ ಕಾಡುವ ಸಮಸ್ಯೆ ಎಂದರೆ ಮತದಾರರ ದೃಷ್ಟಿಕೋನ.
ಸ್ವಾತಂತ್ರ್ಯಾನಂತರ ಇದುವರೆಗೆ ೧೭ ಲೋಕಸಭೆ ಚುನಾವಣೆಗಳು ನಡೆದು ೧೮ನೇ ಲೋಕಸಭೆ ಚುನಾವಣೆ ನೆರಳು ಕವಿದಿದ್ದರೂ ಮತದಾರನ ಮನೋಧರ್ಮ ಏನೆಂಬುದು ಮಾತ್ರ ರಾಜಕೀಯ ಪಕ್ಷಗಳಿಗಾಗಲೀ ಅಥವಾ ಪಂಡಿತರಿಗಾಗಲೀ ಖಚಿತವಾಗಿಲ್ಲ. ಸೋಲು ಗೆಲುವಿನ ವಿಚಾರ ಬೇರೆ. ಆ ಋತುವಿನ ಪರಿಸ್ಥಿತಿಯನ್ನು ಆಧರಿಸಿ ಮತ ಚಲಾಯಿಸುವ ಪ್ರವೃತ್ತಿ ಜಗತ್ತಿನೆಲ್ಲೆಡೆ ಮೊದಲಿನಿಂದಲೂ ಚಾಲ್ತಿಯಲ್ಲಿದೆ. ಭಾರತವೂ ಕೂಡಾ ಇದರಿಂದ ಭಿನ್ನವಾಗಿಲ್ಲ.
ಜನತಂತ್ರ ಪದ್ಧತಿಯಲ್ಲಿ ಚುನಾವಣೆಗೆ ಹಬ್ಬದ ರೂಪ ಬರಲು ಕಾರಣಗಳು ಹಲವಾರು; ಪ್ರಜಾಪ್ರಭುತ್ವ ಎಂದರೆ ಜನರಿಂದ-ಜನರಿಗಾಗಿ-ಜನರಿಗೋಸ್ಕರ ಎಂದಾದ ಮೇಲೆ ಜನರ ಮತದಾನದ ಕಾಲದಲ್ಲಿ ಇಂತಹ ಸಡಗರ ರೂಪುಗೊಳ್ಳುವುದು ಸಾಮಾನ್ಯವಾದ ಪ್ರಕ್ರಿಯೆ. ವ್ಯಕ್ತಿಗತವಾಗಿದ್ದರೆ ಹಬ್ಬದ ರೂಪ ಬರುತ್ತಿರಲಿಲ್ಲ. ಆದರೆ, ಸಾಂಘಿಕವಾಗಿ ಚುನಾವಣೆ ನಡೆಯುವ ಪರಿಣಾಮವೇ ಈ ಹಬ್ಬದ ರೂಪ. ಭವ್ಯ ಭಾರತದ ಭವಿಷ್ಯವನ್ನು ನಿಷ್ಕರ್ಷೆ ಮಾಡಲಿರುವ ಲೋಕಸಭಾ ಚುನಾವಣೆಗೆ ಮುಹೂರ್ತ ಈ ವಾರದ ಒಂದೆರಡು ದಿನದ ಒಳಗೆ ನಿಷ್ಕರ್ಷೆಯಾಗುವ ಪರಿಣಾಮವೆಂದರೆ ದೇಶದಾದ್ಯಂತ ಚುನಾವಣೆಯ ಕಾವು.
ಸಾರ್ವತ್ರಿಕ ಚುನಾವಣೆ ಎಂದ ಮೇಲೆ ರಾಜಕೀಯ ಪಕ್ಷಗಳು, ಮುಖಂಡರು, ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಳ್ಳುವುದು ಸ್ವಾಭಾವಿಕವೇ. ಆದರೆ, ಇವರೆಲ್ಲರ ಪಾಲ್ಗೊಳ್ಳುವಿಕೆಯ ಕೇಂದ್ರಬಿಂದು ಸಾರ್ವಜನಿಕರು ಅರ್ಥಾತ್ ಮತದಾರರು. ಮತದಾನದ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ತಮ್ಮ ತಮ್ಮ ವೈಚಾರಿಕತೆಗೆ ಅನುಗುಣವಾಗಿ ಪ್ರಚಾರ ಕಾರ್ಯ ನಡೆಸುವ ಮುಖಂಡರಿಗೆ ಯಾವಾಗಲೂ ಕಾಡುವ ಸಮಸ್ಯೆ ಎಂದರೆ ಮತದಾರರ ದೃಷ್ಟಿಕೋನ.
ಸ್ವಾತಂತ್ರಾನಂತರ ಇದುವರೆಗೆ ೧೭ ಲೋಕಸಭೆ ಚುನಾವಣೆಗಳು ನಡೆದು ೧೮ನೇ ಲೋಕಸಭೆ ಚುನಾವಣೆ ನೆರಳು ಕವಿದಿದ್ದರೂ ಮತದಾರನ ಮನೋಧರ್ಮ ಏನೆಂಬುದು ಮಾತ್ರ ರಾಜಕೀಯ ಪಕ್ಷಗಳಿಗಾಗಲೀ ಅಥವಾ ಪಂಡಿತರಿಗಾಗಲೀ ಖಚಿತವಾಗಿಲ್ಲ. ಸೋಲು ಗೆಲುವಿನ ವಿಚಾರ ಬೇರೆ. ಆ ಋತುವಿನ ಪರಿಸ್ಥಿತಿಯನ್ನು ಆಧರಿಸಿ ಮತ ಚಲಾಯಿಸುವ ಪ್ರವೃತ್ತಿ ಜಗತ್ತಿನೆಲ್ಲೆಡೆ ಮೊದಲಿನಿಂದಲೂ ಚಾಲ್ತಿಯಲ್ಲಿದೆ. ಭಾರತವೂ ಕೂಡಾ ಇದರಿಂದ ಭಿನ್ನವಾಗಿಲ್ಲ. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರು ೧೯೮೦ರ ಲೋಕಸಭಾ ಚುನಾವಣೆಯ ಪ್ರಚಾರ ಸಭೆಯಲ್ಲಿ `ಅದೃಶ್ಯ ಮತದಾರ ನಮ್ಮ ಕೈ ಹಿಡಿಯುತ್ತಾನೆ' ಎಂದು ಅರ್ಥಗರ್ಭಿತವಾಗಿ ಹೇಳಿದ ಮಾತು ಇದುವರೆಗೂ ಅದೃಶ್ಯ ಮತದಾರನ ಹುಡುಕಾಟಕ್ಕೆ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಯನ್ನು ಪ್ರೇರೇಪಿಸಿವೆ. ಹಾಗೆ ನೋಡಿದರೆ, ಈಗಿನ ಚುನಾವಣಾ ಪ್ರಚಾರದ ಭರಾಟೆಯಲ್ಲಿ ಅದೃಶ್ಯ ಮತದಾರನ ಗಮನ ಸೆಳೆಯುವುದೇ ಗುರಿ.
ಸ್ವಾತಂತ್ರಾನಂತರ ಚುನಾವಣೆ ಆರಂಭವಾದ ಮೊದಲ ೨೫ ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ಭಾರತದಲ್ಲಿ ರಾಜಕೀಯವಾಗಿ ಏಕಚಕ್ರಾಧಿಪತ್ಯವಾಗಿತ್ತು. ಏಕೆಂದರೆ, ಪ್ರತಿಪಕ್ಷಗಳಲ್ಲಿ ಒಮ್ಮತವಿರಲಿಲ್ಲ. ವೈಚಾರಿಕ ಸ್ಪಷ್ಟತೆಗಿಂತ ಉತ್ಸಾಹವೇ ಹೆಚ್ಚಾಗಿತ್ತು. ಕಾರ್ಯಕರ್ತರಿಗಿಂತ ಮುಖಂಡರೇ ಹೆಚ್ಚು ಮಂದಿ ಇದ್ದರು. ಸಂಘಟನೆ ಯಾವ ಪಕ್ಷದಲ್ಲಿ ಇರಲಿಲ್ಲ. ಹಾಗೆಯೇ, ಜನಮಾನ್ಯತೆಯೂ ಕೂಡಾ ನಿರೀಕ್ಷಿತ ಪ್ರಮಾಣದಲ್ಲಿ ಪ್ರತಿಪಕ್ಷಗಳ ಕಡೆ ಇರಲಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಪಂಡಿತ್ ಜವಹರಲಾಲ್ ನೆಹರೂ ಅವರಂತಹ ಧೀಮಂತ ರಾಷ್ಟçನಾಯಕರಿದ್ದರು. ಈ ಅಂಶ ಗಮನಾರ್ಹವಾಗಿ ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿತ್ತು. ೨೫ ವರ್ಷದ ನಂತರದ ಬೆಳವಣಿಗೆಯಲ್ಲಿ ಭಾರತದ ರಾಜಕೀಯ ನಕ್ಷೆ ಬದಲಾಗಿ ಪ್ರತಿಪಕ್ಷಗಳು ಸಂಘಟನೆಯ ಮೂಲಕ ಜನಮಾನ್ಯತೆ ಪಡೆದುಕೊಂಡಿರುವುದು ಬದಲಾಗಿರುವ ರಾಜಕೀಯ ಸ್ಥಿತಿಯ ದಿಕ್ಸೂಚಿ. ಈಗಿರುವುದು ಸಮ್ಮಿಶ್ರ ರಾಜಕೀಯ ವ್ಯವಸ್ಥೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಹಾಗೂ ಈ ಹಿಂದೆ ಸುದೀರ್ಘ ಅವಧಿಯವರೆಗೆ ಅಧಿಕಾರ ನಡೆಸಿರುವ ಕಾಂಗ್ರೆಸ್ ಪಕ್ಷಗಳು ರಾಷ್ಟ್ರೀಯ ಪಕ್ಷಗಳಾಗಿ ಕಣದಲ್ಲಿವೆ. ಇನ್ನುಳಿದ ಪಕ್ಷಗಳು ಬಿಜೆಪಿ ನೇತೃತ್ವದ ಎನ್‌ಡಿಎ ಹಾಗೂ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟದಲ್ಲಿ ಗುರುತಿಸಿಕೊಂಡಿವೆ. ಕೆಲವು ಪಕ್ಷಗಳು ಯಾವ ಸಂಘಟನೆಯ ಜೊತೆ ಗುರುತಿಸಿಕೊಳ್ಳದೆ ಸ್ವತಂತ್ರವಾಗಿ ಇವೆ. ಹೀಗಾಗಿ ಈ ಬಾರಿಯ ಚುನಾವಣೆಯ ಹೋರಾಟ ಇದುವರೆಗಿನ ಹೋರಾಟಗಳಿಗಿಂತ ವಿಭಿನ್ನವಾಗಿರುವುದಂತೂ ಖಂಡಿತ.
ಬಿರುಬೇಸಿಗೆಯ ಉರಿ ಬಿಸಿಲಿನಲ್ಲಿ ಚುನಾವಣೆ ನಡೆಯಲಿರುವುದು ಈ ಬಾರಿಯ ಸಮಸ್ಯೆ. ಪ್ರಜಾತಂತ್ರದಲ್ಲಿ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಉಂಟು ಎಂಬ ಮಾತು ಅದರ ದೌರ್ಬಲ್ಯವೂ ಹೌದು ಅದರ ಸಾಮರ್ಥ್ಯವೂ ಹೌದು. ಹಕ್ಕೊತ್ತಾಯದ ಮೂಲಕ ಆಗಬಾರದ ಕೆಲಸಗಳನ್ನು ಬಹುಮತದ ನೆಪವೊಡ್ಡಿ ಆಗುವಂತೆ ಮಾಡುವ ಪವಾಡ ಜನತಂತ್ರ ಪದ್ಧತಿಯಲ್ಲಿ ಮಾತ್ರ ಸಾಧ್ಯ ಎಂಬುದಕ್ಕೆ ಉದಾಹರಣೆಗಳು ಸಾಕಷ್ಟು. ಏನೇ ಆದರೂ ಎಲ್ಲಾ ಪದ್ಧತಿಗಳಿಗಿಂತ ಭಾರತದ ಮಟ್ಟಿಗೆ ಜನರ ಒಳಗೊಳ್ಳುವಿಕೆಗೆ ಮುಕ್ತ ಅವಕಾಶವಿರುವ ಜನತಂತ್ರ ಪದ್ಧತಿ.

Next Article