ಬದಲಾದ ಕಾನೂನು: ಟ್ರಕ್ ಚಾಲಕರ ಆಕ್ರೋಶ
10:39 PM Jan 02, 2024 IST | Samyukta Karnataka
ಬೆಂಗಳೂರು: ಕೇಂದ್ರ ಸರ್ಕಾರದ ಹೊಸ ಕ್ರಿಮಿನಲ್ ಕಾನೂನು ಟ್ರಕ್ ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಟ್ರಕ್ ಚಾಲಕರ ಪ್ರತಿಭಟನೆ ಭುಗಿಲೆದ್ದಿದೆ.
ಕೇಂದ್ರ ಸರಕಾರದ ಹೊಸ ಕಾನೂನಿನ ಪ್ರಕಾರ, 'ಹಿಟ್ ಆಂಡ್ ರನ್' ಪ್ರಕರಣಗಳಲ್ಲಿ ಚಾಲಕರಿಗೆ 10 ವರ್ಷದವರೆಗೂ ಜೈಲು ಶಿಕ್ಷೆ ಹಾಗೂ 7 ಲಕ್ಷ ರೂಪಾಯಿ ದಂಡ ವಿಧಿಸಬಹುದಾಗಿದೆ. ಕೆಲವು ಪ್ರಕರಣಗಳಿಗೆ ವಿಧಿಸುವ ಶಿಕ್ಷೆ ಹಾಗೂ ದಂಡದ ಮೊತ್ತವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಹೀಗಾಗಿ ಖಾಸಗಿ ಟ್ರಕ್, ಕ್ಯಾಬ್ ಚಾಲಕರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಇಷ್ಟು ದೊಡ್ಡ ಮೊತ್ತದ ದಂಡವನ್ನು ತಮ್ಮಂತಹ ಬಡ ಜನರಿಗೆ ಪಾವತಿಸಲು ಹೇಗೆ ಸಾಧ್ಯವಾಗುತ್ತದೆ ಎಂದು ಟ್ರಕ್, ಕ್ಯಾಬ್ ಹಾಗೂ ಇತರೆ ವಾಣಿಜ್ಯ ವಾಹನಗಳ ಚಾಲಕರು ಪ್ರಶ್ನಿಸುತ್ತಿದ್ದಾರೆ.