ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಬರದ ನಾಡಲ್ಲ: ಜಲದ ನಾಡು!

12:19 PM Apr 11, 2024 IST | Samyukta Karnataka

ಬೆಂಗಳೂರು: ಅಂತರಜಲ ಹೆಚ್ಚಿ, ಬಸವನಾಡು ಜಲಸಂಪನ್ಮೂಲವಾಗುತ್ತಿದೆ ಎಂದು ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಕೆರೆ ತುಂಬುವ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಕಾರಣ ಅಂತರಜಲ ಹೆಚ್ಚಿ, ಬಸವನಾಡು ಜಲಸಂಪನ್ಮೂಲವಾಗುತ್ತಿದೆ…

ಬಬಲೇಶ್ವರ ಮತ ಕ್ಷೇತ್ರದ ಮಮದಾಪುರ ವಿರಕ್ತಮಠದ ಜಮೀನಿನಲ್ಲಿ ಬುಧವಾರ ಕೊರೆಸಿದ ಬೋರ್ ನಿಂದ 4 ಇಂಚು ನೀರು ದೊರೆತಿದ್ದು, ಪೂಜ್ಯ ಸ್ವಾಮಿಗಳಾದ ಶ್ರೀ ಅಭಿನವ ಮುರುಗೇಂದ್ರ ಮಹಾಸ್ವಾಮಿಗಳು ಸಂತಸಗೊಂಡಿದ್ದಾರೆ. ಕೆಲ ದಿನಗಳ ಹಿಂದೆ ಕೆರೆ ತುಂಬಿಸಿದ ಫಲವಾಗಿಯೇ ಅಂತರಜಲ ಹೆಚ್ಚಿ, ಬೋರ್ ನಲ್ಲಿ ನೀರು ಬರಲು ಕಾರಣವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಪೂಜ್ಯರ ಮಾತುಗಳು ಇನ್ನೂ ಹೆಚ್ಚಿನ ಕೆಲಸ ಮಾಡಲು ಪ್ರೇರಣೆ ನೀಡಿದೆ.

ಜನಪ್ರತಿನಿಧಿಯಾಗಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಕೆರೆ ತುಂಬುವ ಯೋಜನೆಗಳು ನಮ್ಮೆಲ್ಲ ಜನರ ಕೈ ಹಿಡಿದಿರುವುದು ನನಗೂ ತೃಪ್ತಿ ತಂದಿದೆ. ಅಭಿವೃದ್ಧಿಯ ಪರ್ವ ಮುಂದುವರೆಯಲಿದೆ ಎಂದಿದ್ದಾರೆ.

Next Article