ಬರುವ ದಿನಗಳು ಶುಭವಿಲ್ಲ…
ಈ ಮಂಚೆಯೆ ನಾನು ಹೇಳಿದ್ದೆ ಮಳೆ ಆಗುತ್ತೆ, ಗುಡ್ಡ ಉರುಳುತ್ತೆ, ಜನರು ಸಾಯುತ್ತಾರೆ. ನನ್ನ ಪ್ರಕಾರ ಅಮಾವಾಸ್ಯೆವರೆಗೆ ಮಳೆ ಇರುತ್ತೆ ಬಳಿಕ ಬೇರೆ ಭಾಗಕ್ಕೆ ಹೋಗುತ್ತೆ
ಬೆಳಗಾವಿ: ಕಳೆದ ಇಪ್ಪತ್ತು ದಿನದಿಂದ ಹಿಂದೆ ನಾನು ಧಾರವಾಡದಲ್ಲಿ ಈ ತರಾ ಆಗುತ್ತೆ ಅಂತಾ ಹೇಳಿದ್ದೆ ಎಂದು ಕೋಡಿಮಠದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿರುವ ಅವರು ಸಮಾಚಾರ, ಪ್ರಚಾರ, ವಿಚಾರ ಇವಲ್ಲದೇ ಅಪಪ್ರಚಾರ ಒಂದೊಂದಿದೆ, ಅದು ಕಡೆಗೆ ಬರುವಂತಹದು ಆದರೆ ಅಳಕು ಹೃದಯದವನಿಗೆ ಅಪಪ್ರಚಾರವೇ ಆಯುಧ, ಕಡೆಗೆ ಬರುವ ಅಪಪ್ರಚಾರ ಈಗ ಮೊದಲೇ ಬರತಿದೆ, ಅದರಿಂದ ಸರಿಯಾದ ವಿಚಾರ, ಸಮಾಚಾರ ತಿಳಿಯದೆ ತೀರಿ ಹೋಗಿರುತ್ತದೆ, ಬುದ್ದಿ ಜೀವಿಗಳು ಮಾಡಿದವರ ಪಾಪ ಆಡಿದವರ ಬಾಯಲ್ಲಿ ಅಂತ ಹೇಳಿ ತಮ್ಮ ತಪ್ಪನ್ನು ಮುಚ್ಚಿ ಹಾಕಿಕೊಳ್ಳಲು, ಜನರ ಬಾಯಿ ಮುಚ್ಚಿಸಲು ಈ ರೀತಿ ಹೇಳತಾರೆ, ಬರುವ ದಿನಗಳು ಅಷ್ಟೊಂದು ಶುಭವಿಲ್ಲ, ಅದರ ನಡುವೆಯು ಶುಭ ಇದೆ, ಒಳಿತು-ಕೆಡಕು, ಕಪ್ಪು-ಬಿಳಿಪು ಯೋಚಿಸಿದಾಗ ಕಪ್ಪೇ ಜಾಸ್ತಿ ಹಾಗೆ ಸ್ವಲ್ಪ ಕಷ್ಟವೇ ಜಾಸ್ತಿ, ಆಯಸ್ಸು ಕಡಿಮೆ ಆಗುತ್ತಿದೆ, ಮಾನಸಿಕ ಸ್ಥೈರ್ಯ ಕಳೆದುಕೊಳ್ಳುತ್ತಿದ್ದಾನೆ. ಈ ಮಂಚೆಯೆ ನಾನು ಹೇಳಿದ್ದೆ ಮಳೆ ಆಗುತ್ತೆ, ಗುಡ್ಡ ಉರುಳುತ್ತೆ, ಜನರು ಸಾಯುತ್ತಾರೆ. ನನ್ನ ಪ್ರಕಾರ ಅಮಾವಾಸ್ಯೆವರೆಗೆ ಮಳೆ ಇರುತ್ತೆ ಬಳಿಕ ಬೇರೆ ಭಾಗಕ್ಕೆ ಹೋಗುತ್ತೆ. ಇದು ಕ್ರೋಧಿನಾಮ ಸಮಸ್ತರ, ಕ್ರೋಧ ಅಂದರೆ ಸಿಟ್ಟು ಇದರಲ್ಲಿ ಒಳ್ಳೆಯದು ಕೆಟ್ಟದ್ದು ಇದೆ ಆ ಪೈಕಿ ಕೆಟ್ಟದ್ದೆ ಜಾಸ್ತಿ ಇರುತ್ತೆ, ರೋಗರುಜ್ಜಿನುಗಳು ಹೆಚ್ಚಾಗುತ್ತವೆ ಅಂತಾ ಹೇಳಿದ್ದೆ, ಭಾರತದಲ್ಲಿ ಅಂತ ಅಷ್ಟೇ ಹೇಳಿರಲಿಲ್ಲ, ಜಾಗತಿಕ ಮಟ್ಟದಲ್ಲಿ ಕೆಲವು ರಾಜ್ಯಗಳು ಮುಳುಗುತ್ತವೆ ಅಂತಾ ಹೇಳಿದ್ದೆ, ಎಲ್ಲಾ ಡ್ಯಾಂಗಳು ತುಂಬುತ್ತವೆ ಎಂದು ಮೊದಲೆ ಹೇಳಿದ್ದೆ ಎಂದು ಕೋಡಿ ಶ್ರೀಗಳು ಹೇಳಿದರು.