For the best experience, open
https://m.samyuktakarnataka.in
on your mobile browser.

ಬಲಿಗಾಗಿ ಕಾಯುತ್ತಿದೆ ಶಾಲಾ ಹಳೆ ಕಟ್ಟಡ

04:58 PM Jan 15, 2025 IST | Samyukta Karnataka
ಬಲಿಗಾಗಿ ಕಾಯುತ್ತಿದೆ ಶಾಲಾ ಹಳೆ ಕಟ್ಟಡ

ಯಾದಗಿರಿ: ಕೆಂಭಾವಿಯ ಸರಕಾರಿ ಬಾಲಕರ ಪ್ರೌಢ ಶಾಲೆಶಾಲೆಗೆ ಹೊಸ ಕಟ್ಟಡ ಮಂಜೂರಿ ಮಾಡಿ ಕಲ್ಯಾಣ ಕರ್ನಾಟಕ ಯೋಜನೆ ಅಡಿಯಲ್ಲಿ ಬೃಹದಾಕಾರದ ಎರಡು ಕಟ್ಟಡಗಳನ್ನು ನಿರ್ಮಿಸಲಾಗಿದೆ. ಆದರೆ ಹಳೆಯ ಕಟ್ಟಡ ತೆರವುಗೊಳಿಸದ ಕಾರಣ ಶಾಲಾ-ಕಾಲೇಜು ಮಕ್ಕಳು ಆ ಹಳೆಯ ಕಟ್ಟಡದಲ್ಲಿಯೇ ಓಡಾಡುವುದು, ಕುಳಿತುಕೊಳ್ಳುವುದು ಊಟ ಮಾಡುವುದು ಮಾಡುತ್ತಿದ್ದಾರೆ. ಹಳೇ ಕಟ್ಟಡ ಈಗಾಗಲೇ ಶಿಥಿಲಗೊಂಡಿದ್ದು ಸಾರ್ವಜನಿಕರಲ್ಲಿ ಭಯ ಉಂಟುಮಾಡಿದೆ.
ಹಳೇ ಕಟ್ಟಡ ಸದ್ಯ ಇನ್ನೂ ಬಳಕೆಯಾಗುತ್ತಿದ್ದು ಬೀಳುವ ಪರಿಸ್ಥಿತಿಯಲ್ಲಿದೆ. ಹೀಗಾಗಿ ಆದಷ್ಟು ಬೇಗ ಅದನ್ನು ನೆಲಸಮಗೊಳಿಸಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ. ಈಗಾಗಲೇ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಕೂಡ ಯಾರೂ ಕಟ್ಟಡವನ್ನು ನೆಲಸಮಗೊಳಿಸಲು ಮುಂದಾಗಿಲ್ಲ. ಹೀಗಾಗಿ ಆದಷ್ಟು ಬೇಗ ಕಟ್ಟಡ ತೆರವುಗೊಳಿಸಿ ಮುಂದೆ ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.