For the best experience, open
https://m.samyuktakarnataka.in
on your mobile browser.

ಬಲೂನ್ ಊದಲು ಹೋಗಿ ಬಾಲಕ ಸಾವು

05:20 PM Dec 02, 2024 IST | Samyukta Karnataka
ಬಲೂನ್ ಊದಲು ಹೋಗಿ ಬಾಲಕ ಸಾವು

ಹಳಿಯಾಳ: ಮನೆಯಲ್ಲಿ ಬಲೂನ್ ಜೊತೆಯಲ್ಲಿ ಆಟವಾಡುತ್ತಿದ ಬಾಲಕನೊರ್ವನ ಗಂಟಲಿಗೆ ಆಕಸ್ಮಿಕವಾಗಿ ಬಲೂನ್ ಸಿಲುಕಿದ ಪರಿಣಾಮ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟ ಘಟನೆ ಭಾನುವಾರ ರಾತ್ರಿ ಹಳಿಯಾಳ ತಾಲೂಕಿನ ಜೋಗನಕೊಪ್ಪ ಗ್ರಾಮದಲ್ಲಿ ನಡೆದಿದೆ.
ನವೀನ ನಾರಾಯಣ ಬೆಳಗಾಂವಕರ(೧೩) ಮೃತ ಬಾಲಕ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೭ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಮನೆಯಲ್ಲಿ ಆಟವಾಡುತ್ತಿದ್ದ ಬಾಲಕ ಬಲೂನ್ ಊದಲು ಹೋಗಿದ್ದಾಗ ಬಾಯಿಯ ಒಳಗೆ ಜಾರಿ ಗಂಟಲಲ್ಲಿ ಸಿಲುಕಿ ಕೊಂಡಿತು. ಇದರಿಂದ ಬಾಲಕನ ಉಸಿರುಗಟ್ಟಲಾರಂಭಿಸಿದ್ದರಿಂದ ಬಾಲಕನು ಒದ್ದಾಡುತ್ತಿರುವುದನ್ನು ಕಂಡು ಪಾಲಕರು ತಕ್ಷಣ ಬಾಲಕನನ್ನು ಹಳಿಯಾಳದ ತಾಲೂಕು ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ. ಆಸ್ಪತ್ರೆಯ ವೈದ್ಯರು ಬಾಲಕನ ಗಂಟಲಿಂದ ಬಲೂನನ್ನು ಹೊರತೆಗೆದಿದ್ದಾರೆ, ಆದರೆ ಬಾಲಕ ಆಸ್ಪತ್ರೆಗೆ ತಲುಪುವ ಮುನ್ನವೇ ಕೊನೆ ಉಸಿರೆಳೆದಿದ್ದಾನೆ. ಈ ಕುರಿತ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags :