For the best experience, open
https://m.samyuktakarnataka.in
on your mobile browser.

ಬಹುವಿಧ ಸಮಸ್ಯೆಗಳಿಗೆ ‘ಇಂಜಿನಿಯರಿಂಗ್’ ಪರಿಹಾರ

05:55 PM Sep 17, 2024 IST | Samyukta Karnataka
ಬಹುವಿಧ ಸಮಸ್ಯೆಗಳಿಗೆ ‘ಇಂಜಿನಿಯರಿಂಗ್’ ಪರಿಹಾರ

ಮೈಸೂರು: ನಿತ್ಯದ ಪ್ರತಿ ಸಮಸ್ಯೆಗಳಿಗೂ ಇಂಜಿಯರಿಂಗ್ ಮನಸ್ಥಿತಿಯಲ್ಲೇ ಪರಿಹಾರ ಕಂಡುಕೊಳ್ಳಲು ಜನ ಪ್ರಯತ್ನಿಸುತ್ತಾರೆ. ಹೀಗಾಗಿ, ಇದು ವೃತ್ತಿ ಮಾತ್ರವಲ್ಲದೇ ಜೀವನ ಶೈಲಿಯಾಗಿ ಪರಿವರ್ತನೆಯಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ನುಡಿದರು.
ನಗರದ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಆಯೋಜಿಸಿದ್ದ 57ನೇ ಇಂಜಿನಿಯರ್ಸ್ ದಿನಾಚರಣೆಯಲ್ಲಿ ಸಾಧಕ ಇಂಜಿನಿಯರುಗಳು ಮತ್ತು ವೃತ್ತಿಪರ ತಂತ್ರಜ್ಞರನ್ನು ಸನ್ಮಾನಿಸಿ ಮಾತನಾಡಿದರು. ಜೀವನದ ಪ್ರತಿ ವಿಷಯದಲ್ಲೂ ಇಂಜಿನಿಯರ್‌ಗಳ ಪಾತ್ರ ಇದೆ. ಕಟ್ಟಡ, ರಸ್ತೆ, ಕಾರು ತಯಾರಿಕೆ, ಆಪರೇಷನ್, ನೀರು ಪೂರೈಕೆ ಸೇರಿದಂತೆ ದಿನಪೂರ್ಣ ಬಳಕೆ ಮಾಡುವ ಪ್ರತಿ ವಸ್ತು, ವಿಷಯದಲ್ಲೂ ಈ ವೃತ್ತಿ ಪಾತ್ರ ಬಹಳ ದೊಡ್ಡದಾಗಿದೆ. ಇಂಜಿನಿಯರ್‌ಗಳು ಇಲ್ಲದೆ ಜೀವನ ಮುಂದುವರಿಯಲು ಸಾಧ್ಯವಿಲ್ಲ ಎಂಬಂತಾಗಿದೆ. ಆದ ಕಾರಣ ಇಂಜಿನಿಯರ್‌ಗಳ ಸೇವೆ ದೇಶ ಸೇವೆಯಾಗಿದೆ ಎಂದರು. ಮೈಸೂರು ನಗರ, ಅಂದಿನ ಮೈಸೂರು ರಾಜ್ಯ ಯೋಜನಾಬದ್ಧವಾಗಿ ಬೆಳೆಯಲು ಮಹಾರಾಜರೊಂದಿಗೆ ಮಹಾ ಮೇಧಾವಿ ಇಂಜಿನಿಯರ್ ಸರ್.ಎಂ. ವಿಶ್ವೇಶ್ವರಯ್ಯನವರ ಪಾತ್ರವೂ ದೊಡ್ಡದಾಗಿದೆ ಎಂದರು.
ಸಾಧಕರಿಗೆ ಸನ್ಮಾನ:
ವಿಶೇಷ ಸಾಧನೆ ತೋರಿದ ಮೈಸೂರು ವಿವಿ ಸ್ಕೂಲ್ ಆಫ್ ಇಂಜಿನಿಯರಿಂಗ್‌ನ ಸಹಾಯಕ ಪ್ರಾಧ್ಯಾಪಕ ಡಾ. ಎಸ್.ಕೆ. ನಿತಿನ್, ಹಿರಿಯ ಇಂಜಿನಿಯರ್ ಮತ್ತು ಸಂಶೋಧಕ ಪ್ರೊ. ಅನಂತ ಪದ್ಮನಾಭ ಮತ್ತಿತರ ಸಾಧಕರನ್ನು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಸನ್ಮಾನಿಸಿದರು. ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಎನ್. ವೆಂಕಟಕೃಷ್ಣರಾವ್, ಸಂಸ್ಥೆಯ ಅಧ್ಯಕ್ಷ ಡಾ.ಆರ್. ದೀಪು, ಸಂಚಾಲಕ ಎ.ಎಸ್. ಸತೀಶ್, ಡಾ.ಎಸ್.ಎ. ಮೋಹನಕೃಷ್ಣ ಇತರರು ಉಪಸ್ಥಿತರಿದ್ದರು. ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಎನ್. ವೆಂಕಟಕೃಷ್ಣರಾವ್, ಸಂಸ್ಥೆಯ ಅಧ್ಯಕ್ಷ ಡಾ.ಆರ್. ದೀಪು, ಕಾರ್ಯದರ್ಶಿ ಡಾ.ಎಸ್.ಎ. ಮೋಹನಕೃಷ್ಣ, ಸಂಚಾಲಕ ಎ.ಎಸ್. ಸತೀಶ್ ಇತರರು ಹಾಜರಿದ್ದರು.