For the best experience, open
https://m.samyuktakarnataka.in
on your mobile browser.

ಬಾಂಗ್ಲಾದಲ್ಲಿ ಪ್ರಕೃತಿ ವಿಕೋಪ ಆದಾಗ ಅನ್ನ, ನೀರು ನೀಡಿದ್ದು ಇದೆ ISKCON

01:36 PM Dec 14, 2024 IST | Samyukta Karnataka
ಬಾಂಗ್ಲಾದಲ್ಲಿ ಪ್ರಕೃತಿ ವಿಕೋಪ ಆದಾಗ ಅನ್ನ  ನೀರು ನೀಡಿದ್ದು ಇದೆ iskcon

ಬಾಂಗ್ಲಾದೇಶ ಹಿಂದೂಗಳಿಗೆ ಅಕ್ಷರಶಃ ನರಕವಾಗಿದೆ.

ಬೆಂಗಳೂರು: ಬಾಂಗ್ಲಾದೇಶದಲ್ಲಿ ಪ್ರಕೃತಿ ವಿಕೋಪ ಆದಾಗ ಅನ್ನ, ನೀರು ನೀಡಿದ್ದು ಇದೆ ISKCON ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು 1971 ರಲ್ಲಿ ಬಾಂಗ್ಲಾದೇಶ ಸೃಷ್ಟಿಯಾದಾಗ, ISKCON ನ ಸಂಸ್ಥಾಪಕರಾದ ಶ್ರೀ ಪ್ರಭುಪಾದ ಅವರು 2.5 ಮಿಲಿಯನ್ ದೇಣಿಗೆಯನ್ನು ಪಾದಯಾತ್ರೆ ಸೇರಿದಂತೆ ಹಲವು ಕಾರ್ಯಕ್ರಮಗಳ ಮೂಲಕ ಸಂಗ್ರಹಿಸಿ ಬಾಂಗ್ಲಾದೇಶಕ್ಕೆ ನೀಡಿದರು. ಬಾಂಗ್ಲಾದೇಶದಲ್ಲಿ ಪ್ರಕೃತಿ ವಿಕೋಪ ಆದಾಗ ಅನ್ನ, ನೀರು ನೀಡಿದ್ದು ಇದೆ ISKCON ಇಂದು ಇದೆ ISKCON ಅನ್ನು 'ಉಗ್ರವಾದಿ ಸಂಘಟನೆ' ಎಂದು ಬಾಂಗ್ಲಾದೇಶ ಘೋಷಿಸಿದೆ. ಬಾಂಗ್ಲಾದೇಶ ಹಿಂದೂಗಳಿಗೆ ಅಕ್ಷರಶಃ ನರಕವಾಗಿದೆ.
ಮುಸ್ಲಿಂ ಬಾಹುಳ್ಯದ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದವರ ರಕ್ಷಣೆಗಾಗಿ ಧ್ವನಿ ಎತ್ತಿರುವ ಇಸ್ಕಾನ್ ಸಂಸ್ಥೆಯ ಹಿಂದೂ ಸಾಧು ಚಿನ್ಮಯ ಕೃಷ್ಣ ಪ್ರಭು ದಾಸ್ ಅವರನ್ನು ಅರೆಸ್ಟ್ ಮಾಡಿ ಕಿರುಕುಳ ನೀಡುತ್ತಿದೆ. ಸಾತ್ವಿಕರಾದ ಚಿನ್ಮಯ್ ಪ್ರಭು ದಾಸರಿಗೆ ಈ ರೀತಿಯಾದ ಮಾನಸಿಕ ಹಿಂಸೆ ನೀಡುತ್ತಿರುವುದು ನಿಜಕ್ಕೂ ಖಂಡನೀಯ. ಭಾರತ ತನ್ನ ಎಲ್ಲ ಅಧಿಕಾರ, ಸಂಪನ್ಮೂಲಗಳನ್ನು ಬಳಸಿ ಶ್ರೀ ಚಿನ್ಮಯ್ ಪ್ರಭು ದಾಸ್ ಅವರಿಗೆ ಕಾನೂನು ನೆರವು ನೀಡಿ ಕೂಡಲೇ ಅವರನ್ನು ಭಾರತಕ್ಕೆ ಕರೆಸಿಕೊಳ್ಳಬೇಕು ಹಾಗೂ ಅಲ್ಲಿರುವ ಪ್ರತಿಯೊಂದು ಅಲ್ಪಸಂಖ್ಯಾತ ಹಿಂದೂಗಳಿಗೂ ಏನೂ ಆಗದಂತೆ ಬಾಂಗ್ಲಾ ಆಶ್ವಾಸನೆ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದಿದ್ದಾರೆ.

Tags :