ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದಾಳಿ: ಪ್ರಧಾನಿ ಮೌನ ಮುರಿಯಲಿ
ಹುಬ್ಬಳ್ಳಿ: ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಪ್ರಧಾನಿ ಮೋದಿ ಅವರು ಮೌನ ಮುರಿದು ಬಾಂಗ್ಲಾದೇಶಕ್ಕೆ ಸ್ಪಷ್ಟ ಎಚ್ಚರಿಕೆ ನೀಡಿ, ಹಿಂದೂಗಳ ರಕ್ಷಣೆ ನೀಡಬೇಕು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಗ್ರಹಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಂಗ್ಲಾದೇಶ ಸರ್ಕಾರ ಹಾಗೂ ಅಲ್ಲಿಯ ವಿದ್ಯಾರ್ಥಿಗಳ ಆಂತರಿಕ ತಿಕ್ಕಾಟ ನಡೆದಿದ್ದು, ಅಲ್ಲಿರುವ ಹಿಂದೂಗಳ ದೇವಸ್ಥಾನ, ಹಿಂದೂ ಮಹಿಳೆಯರು ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ ಎಂದರು.
ನಮ್ಮಿಂದಲ್ಲೇ ಬಾಂಗ್ಲಾದೇಶ ಹುಟ್ಟಿದೆ. ಮೊದಲು ಶೇ. ೧೨ ರಷ್ಟು ಹಿಂದೂಗಳ ಜನಸಂಖ್ಯೆ ಇತ್ತು. ಈಗ ಶೇ. ೫ ಕ್ಕೆ ಇಳಿದಿದೆ. ಭಾರತ ಬಾಂಗ್ಲಾದೇಶಕ್ಕೆ ಸಂಪೂರ್ಣ ಸಹಕಾರ ನೀಡಲಾಗಿದೆ. ಯಾವುದೇ ಉಪಕಾರ ಸ್ಮರಿಸದ ಇಸ್ಲಾಮಿಕ್ ಗಳು ಹಿಂದೂಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಹರಿಹಾಯ್ದರು. ಈಗಲಾದರೂ ಪ್ರಧಾನಿ ಮೋದಿ ಮೌನ ಮುರಿಯಬೇಕು. ನಿಮಗೆ ಹಿಂದೂಗಳ ಮೇಲೆ ನಡೆಸುತ್ತಿರುವ ದೌರ್ಜನ್ಯ ಕಣ್ಣಿಗೆ ಕಾಣುತ್ತಿಲ್ಲ ಯಾಕೆ?. ತಕ್ಷಣ ಬಾಂಗ್ಲಾದೇಶಕ್ಕೆ ಎಚ್ಚರಿಕೆ ನೀಡಬೇಕು. ಇಸ್ರೇಲ್ ನಂತೆ ಬಾಂಗ್ಲಾದೇಶಕ್ಕೆ ಹೊಕ್ಕು ಹೊಡೆಯಬೇಕು. ಅಲ್ಲಿ ಹಿಂದೂಗಳಿಗೆ ರಕ್ಷಣೆ ಇಡಬೇಕು ಎಂದು ಆಗ್ರಹಿಸಿದರು.