ಬಾಗಲಕೋಟೆಯಲ್ಲೂ ಲೋಕಾಯುಕ್ತ ದಾಳಿ
09:54 AM Jan 08, 2025 IST | Samyukta Karnataka
ಬಾಗಲಕೋಟೆ: ಗದಗ-ಬೆಟಗೇರಿ ನಗರಸಭೆ ಇಇ ಹುಚ್ಚೇಶ ಬಂಡಿವಡ್ಡರ ಅವರ ಸಹೋದರನ ಮನೆ ಮೇಲೂ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.
ಲೋಕಾಯುಕ್ತ ಪಿಎಸ್ಐ ಎಸ್.ಎಸ್.ತೇಲಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ನಗರ ಹೊರವಲಯದ ಸೀಮಿಕೇರಿಯಲ್ಲಿರುವ ಹುಚ್ಚೇಶ ಅವರ ಸಹೋದರ ರಾಜಶೇಖರ ಬಂಡಿವಡ್ಡರ ಅವರ ಮನೆ ಮೇಲೆ ದಾಳಿ ಮಾಡಿದೆ.
ರಾಜೇಶ ಟೈಲ್ಸ್ ಉದ್ಯಮಿ ಆಗಿದ್ದು, ಹುಚ್ಚೇಶ ಅವರ ಮೇಲೆ ಅಕ್ರಮ ಆಸ್ತಿ ಗಳಿಕೆ ಆರೋಪ ಬಂದ ಹಿನ್ನೆಲೆಯಲ್ಲಿ ಅವರ ಸಹೋದರನ ಮನೆ ಮೇಲೆಯೂ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.