ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯ ಖಚಿತ : ಕಾಶಪ್ಪನವರ

01:46 PM Apr 10, 2024 IST | Samyukta Karnataka
ಇಳಕಲ್‌ದ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡುತ್ತಿದ್ದಾರೆ.

ಏನಿಲ್ಲ ಏನಿಲ್ಲ ನಿನ್ನ ನನ್ನ ನಡುವೆ ಏನಿಲ್ಲಾ ಕರಿಮಣಿ ಖ್ಯಾತಿಯ ಈ ಹಾಡನ್ನು ಉಲ್ಲೇಖಿಸಿದ ಶಾಸಕ ನಮ್ಮ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಕಾಶಪ್ಪನವರ ಮನೆತನ ಎಂದೆದಿಂಗೂ ಕಾಂಗ್ರೆಸ್ ಪರವಾಗಿದ್ದು ನಾನು ಸತ್ತರೂ ಸಹ ಕಾಂಗ್ರೆಸ್ ಪಕ್ಷದಲ್ಲಿಯೇ ಇರುತ್ತೇನೆ

ಇಳಕಲ್: ಲೋಕಸಭಾ ಚುನಾವಣೆಯ ಬಾಗಲಕೋಟೆ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಗೆಲುವು ಖಚಿತ ಎಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು
ಮಂಗಳವಾರದಂದು ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಗದ್ದಿಗೌಡರ ಮತ್ತೇ ಗೆಲ್ಲುತ್ತಾರೆ ಎಂಬ ಕನಸಿನಲ್ಲಿ ಬಿಜೆಪಿ ಧುರೀಣರು ಮತ್ತು ಕಾರ್ಯಕರ್ತರು ಇದ್ದಾರೆ ಆದರೆ ಈ ಬಾರಿ ಕಾಂಗ್ರೆಸ್ ಗೆಲುವು ಖಚಿತ ಅದಕ್ಕಾಗಿ ಜಿಲ್ಲೆಯ ಎಲ್ಲಾ ನಾಯಕರು ಶ್ರಮ ವಹಿಸುತ್ತಿದ್ದಾರೆ ಈ ವಿಧಾನಸಭಾ ಕ್ಷೇತ್ರದಲ್ಲಿ ಸಹ ಹೆಚ್ಚಿನ ಮತಗಳು ಕಾಂಗ್ರೆಸ್ ಅಭ್ಯರ್ಥಿಗೆ ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಏನಿಲ್ಲ ಏನಿಲ್ಲ ನಿನ್ನ ನನ್ನ ನಡುವೆ ಏನಿಲ್ಲಾ ಕರಿಮಣಿ ಖ್ಯಾತಿಯ ಈ ಹಾಡನ್ನು ಉಲ್ಲೇಖಿಸಿದ ಶಾಸಕ ನಮ್ಮ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಕಾಶಪ್ಪನವರ ಮನೆತನ ಎಂದೆದಿಂಗೂ ಕಾಂಗ್ರೆಸ್ ಪರವಾಗಿದ್ದು ನಾನು ಸತ್ತರೂ ಸಹ ಕಾಂಗ್ರೆಸ್ ಪಕ್ಷದಲ್ಲಿಯೇ ಇರುತ್ತೇನೆ ನನ್ನ ಪತ್ನಿ ವೀಣಾ ಕಾಶಪ್ಪನವರ ಸಹ ಒಂದೆರಡು ದಿನಗಳಲ್ಲಿ ಚುನಾವಣೆ ಕಣಕ್ಕೆ ಇಳಿಯುತ್ತಾರೆ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡುತ್ತಾರೆ ನಾನು ಮೂವತ್ತು ಸಾವಿರ ಮತಗಳ ಅಂತರದಿಂದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದೇನೆ ಈಗ ಈ ಚುನಾವಣೆಯಲ್ಲಿ ನಾಲ್ವತ್ತು ಸಾವಿರ ಅಂತರದ ಮತವನ್ನು ಇಲ್ಲಿ ಕಾಂಗ್ರೆಸ್ ಪಕ್ಷ ಪಡೆಯುತ್ತದೆ ಎಂಬ ಮಾತನ್ನು ಹೇಳಿದ ಅವರು ಪರೋಕ್ಷವಾಗಿ ಬಿಜೆಪಿಯ ದೊಡ್ಡನಗೌಡ ಪಾಟೀಲ ಮತ್ತು ಎಸ್ ಆರ್ ಎನ್ ಇ ಸಂಸ್ಥಾಪಕ ಎಸ್ ಆರ್ ನವಲಿಹಿರೇಮಠ ಅವರನ್ನು ಕುಟುಕಿದರು.
ಸಭೆಯಲ್ಲಿ ಇಳಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಬ್ದುಲರಜಾಕ ತಟಗಾರ, ಹುನಗುಂದ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಗಂಗಾಧರ ದೊಡ್ಡಮನಿ,ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೆಂಕಟೇಶ ಸಾಕಾ, ಕೆಪಿಸಿಸಿ ಸದಸ್ಯ ಶಾಂತಕುಮಾರ ಸುರಪುರ ರವೀಂದ್ರ ಕಲಬುರ್ಗಿ ವಿಜಯ ಗದ್ದನಕೇರಿ ಮತ್ತಿತರರು ಉಪಸ್ಥಿತರಿದ್ದರು.

Next Article