ಬಾಗಲಕೋಟೆ ಜಿಲ್ಲೆಯಲ್ಲಿ ಶೇ.8.59 ಮತದಾನ
10:22 AM May 07, 2024 IST | Samyukta Karnataka
ಬಾಗಲಕೋಟೆ:ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಬಾಗಲಕೋಟೆ ಕ್ಷೇತ್ರದಲ್ಲಿ ರಾಜಕೀಯ ಮುಖಂಡರು, ಗಣ್ಯರು ಬೆಳಗ್ಗೆಯೇ ಉತ್ಸಾಹದಿಂದ ಮತದಾನ ಮಾಡಿದರು.
ಬೆಳಿಗ್ಗೆ ೭ ಗಂಟೆಯಿಂದ ೯ಗಂಟೆಯವರೆಗೆ ಜಿಲ್ಲೆಯಲ್ಲಿ ಶೇ.8.59 ಮತದಾನವಾಗಿದೆ. ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಅವರು ಬಾದಾಮಿ ಪಟ್ಟಣದಲ್ಲಿ ಮತದಾನ ಮಾಡಿದರು. ಮಾಜಿ ಸಚಿವ ಎಸ್.ಆರ್.ಪಾಟೀಲ ಅವರು ಬೀಳಗಿಯಲ್ಲಿ ಮತಚಾಲಯಿಸಿದರು. ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಮಾಜಿ ಶಾಸಕ ವೀರಣ್ಣ ಚರಂತಿಮಠ ದಂಪತಿ ಬಾಗಲಕೋಟೆಯ ವಿವೇಕಾನಂದ ಶಾಲೆಯಲ್ಲಿರುವ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ನಗರದ ಹಿರಿಯತಜ್ಞ ವೈದ್ಯ ಬಸವರಾಜ ಕುಟುಂಬದವರು ಸಹ ಬೆಳಗ್ಗೆ ವಿವೇಕಾನಂದ ಶಾಲೆಯಲ್ಲಿ ಮತದಾನ ಮಾಡಿದರು.ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಕುಟುಂಬದವರು ಸಕ್ರಿ ಹೈಸ್ಕೂಲ್ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ಅರ್ಧಗಂಟೆ ತಡ: ನಗರದ ಸಕ್ರಿಯ ಹೈಸ್ಕೂಲ್ ಮತಗಟ್ಟೆಯಲ್ಲಿ ಇವಿಎಂ ತಾಂತ್ರಿಕ ದೋಷದ ಕಾರಣ ಮತದಾನ ಅರ್ಧಗಂಟೆ ತಡವಾಗಿ ಆರಂಭಗೊಂಡಿರುವ ಮಾಹಿತಿ ತಿಳಿದು ಬಂದಿದೆ.