For the best experience, open
https://m.samyuktakarnataka.in
on your mobile browser.

ಬಾಗಲಕೋಟೆ ಹೋಳಿ: ೨೫ರಿಂದ ಬಣ್ಣದಾಟ

09:07 PM Mar 11, 2024 IST | Samyukta Karnataka
ಬಾಗಲಕೋಟೆ ಹೋಳಿ  ೨೫ರಿಂದ ಬಣ್ಣದಾಟ

ಬಾಗಲಕೋಟೆ: ಹೋಳಿ ಹುಣ್ಣಿಮೆ ಹಿನ್ನೆಲೆಯಲ್ಲಿ ನಗರದಲ್ಲಿ ಐತಿಹಾಸಿಕ ಬಣ್ಣದಾಟವನ್ನು ಮಾ. ೨೫, ೨೬ ಹಾಗೂ ೨೭ರಂದು ಆಚರಿಸಲು ಹೋಳಿ ಹಬ್ಬ ಆಚರಣೆ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.
ಇಲ್ಲಿನ ಸ್ಟೇಷನ್ ರಸ್ತೆಯ ಅಂಬಾ ಭವಾನಿ ದೇವಸ್ಥಾನದಲ್ಲಿ ಹೋಳಿ ಹುಣ್ಣಿಮೆಯ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಹೋಳಿ ಹಬ್ಬ ಆಚರಣೆ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಹೋಳಿ ಹಬ್ಬ ಆಚರಣೆ ಸಮಿತಿ ಅಧ್ಯಕ್ಷ ಕಳಕಪ್ಪ ಬಾದವಾಡಗಿ ಮಾತನಾಡಿ, ಐತಿಹಾಸಿಕ ಹೋಳಿ ಹಬ್ಬಕ್ಕೆ ಮಾ. ೨೩ರಂದು ಸಂಜೆ ೭ಕ್ಕೆ ವಲ್ಲಭಬಾಯ್ ಚೌಕ್‌ನಲ್ಲಿ ಚಾಲನೆ ನೀಡಲಾಗುವುದು. ಜಾತಿ, ಮತ-ಪಂಥವನ್ನು ಬಿಟ್ಟು ಎಲ್ಲರೂ ಒಂದಾಗಿ ಹೋಳಿ ಹಬ್ಬದಲ್ಲಿ ಪಾಲ್ಗೊಳ್ಳಬೇಕು ಎಂದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹಾಬಲೇಶ್ವರ ಗುಡುಗುಂಟಿ ಮಾತನಾಡಿ, ಮಾ. ೨೪ರಂದು ಬೆಳಿಗ್ಗೆ ೫ಕ್ಕೆ ಕಿಲ್ಲಾ ಓಣಿಯಲ್ಲಿ ಕಾಮ ದಹನ ನಂತರ ಬೆಳಿಗ್ಗೆ ೯ರಿಂದ ಸಂಜೆ ೭ರ ವರೆಗೆ ಹಳಪೇಟೆ, ಹೊಸಪೇಟೆ, ಜೈನಪೇಟೆ, ವೆಂಕಟಪೇಟೆಯಲ್ಲಿ, ನವನಗರ ಹಾಗೂ ವಿದ್ಯಾಗಿರಿಯಲ್ಲಿ ಕಾಮದಹನ ಜರುಗಲಿದೆ. ೨೫ರಿಂದ ಹಮ್ಮಿಕೊಂಡಿರುವ ಬಣ್ಣದಾಟದ ಮೊದಲನೇ ದಿನ ಕಿಲ್ಲಾ, ೨೬ರಂದು ಜೈನಪೇಟೆ, ಹಳಪೇಟೆ, ವೆಂಕಟಪೇಟ ಹಾಗೂ ೨೭ರಂದು ಹೂಸಪೇಟೆಯ ಓಣಿಯ ಬಣ್ಣದಾಟ ಜರುಗಲಿದೆ ಎಂದರು.
೨೪ರಿಂದ ೨೮ರ ವರೆಗೆ ಐದು ದಿನಗಳ ಸೋಗಿನ ಪ್ರದರ್ಶನ, ೨೫ರಂದು ನವನಗರದ ಹಾಗೂ ವಿದ್ಯಾಗಿರಿಯಲ್ಲಿ ಬಣ್ಣದಾಟ ಜರುಗುವುದು ಎಂದು ತಿಳಿಸಿದರು.