ಬಾಣಂತಿಯರ ಸಾವಿನ ಹಿಂದೆ ಮೆಡಿಕಲ್ ಮಾಫಿಯಾ
ಮಲ್ಲಿಕಾರ್ಜುನ ಚಿಲ್ಕರಾಗಿ
ಬಳ್ಳಾರಿ: ಬಳ್ಳಾರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ನಾಲ್ವರು ಬಾಣಂತಿಯರ ಸಾವಿಗೆ ಕಳಪೆ ಗುಣಮಟ್ಟದ ಐವಿ (ಇಂಟ್ರಾವೆನಸ್ ದ್ರಾವಣ) ಗ್ಲೂಕೋಸ್ ಕಾರಣ ಎನ್ನುವ ಷರಾವನ್ನು ಸರಕಾರ ಬರೆದಿದೆ. ಆದರೆ ಆಗ ತಾನೆ ಕಣ್ಣು ಬಿಟ್ಟ ಶಿಶುಗಳು, ಯಾರದೋ ದುಡ್ಡಿನ ವ್ಯಾಮೋಹದಿಂದ ಅನಾಥವಾಗಿದ್ದು ಅವಕ್ಕೆ ಆಸರೆ ಯಾರು? ಎನ್ನುವ ಪ್ರಶ್ನೆಗೆ ಸರಕಾರವೇ ಉತ್ತರ ನೀಡಬೇಕಿದೆ.
ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಾದ ನಾಲ್ವರು ಮತ್ತು ಬಿಮ್ಸ್‌ನಲ್ಲಿ ಒಬ್ಬರು ಸೇರಿ ಕಳೆದ ೧೫ ದಿನ ಗಳಲ್ಲಿ ಬಳ್ಳಾರಿಯಲ್ಲಿ ಐದು ಬಾಣಂತಿಯರು ಮೃತಪಟ್ಟಿ ದ್ದಾರೆ. ಇಷ್ಟು ದಿನ ಗೌಪ್ಯವಾಗಿದ್ದ ಬಾಣಂತಿಯರ ತನಿಖಾ ತಂಡದ ವರದಿ ಬಹಿರಂಗವಾಗದೇ ಇರುವುದು ಜಿಲ್ಲಾಡಳಿತಕ್ಕೆ ತಲೆಬಿಸಿ ಉಂಟು ಮಾಡಿತ್ತು. ತನಿಖಾ ತಂಡದ ವರದಿಯ ಮೊದಲ ಪುಟ ಮಾತ್ರ ಶುಕ್ರವಾರ ಬಯಲಾಗಿದೆ. ಬಾಣಂತಿಯರ ಸರಣಿ ಮರಣ ಮೃದಂಗದ ಅಸಲಿಯತ್ತನ್ನು ಬಳ್ಳಾರಿಯಲ್ಲಿ ಹಲವು ವರ್ಷಗಳಿಂದ ಬೇರೂರಿದ ವೈದ್ಯರೇ ಬಹಿರಂಗಗೊಳಿಸಿದ್ದು, ಸರಕಾರವೇ ಮೆಡಿಕಲ್ ಮಾಫಿಯಾ ಜತೆ ಕೈ ಜೋಡಿಸಿದ ಅಂಶವನ್ನು ಹೊರಹಾಕಿದೆ.
ಏನಿದು ಅಸಲಿ ಕಾರಣ?: ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಾಗಿದ್ದ ೯ ಜನರಿಗೆ ಸಿಸೇರಿಯನ್ ವೇಳೆ ಕಳಪೆ ಗುಣಮಟ್ಟದ ಐವಿ ಗ್ಲುಕೋಸ್ ನೀಡಲಾ ಗಿದೆ ಎಂದು ತನಿಖಾ ತಂಡ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಿದೆ. ಅದರಲ್ಲೂ ವಿಶೇಷವಾಗಿ ಎಂ/ಎಂ ಪಶ್ಚಿಮ ಬಂಗಾಳ ಪ್ಯಾರಾಸ್ಯು ಟಿಕಲ್ ಲಿ. ಕಂಪನಿ ಸರಬರಾಜು ಮಾಡಿದ ಐವಿ ಗ್ಲುಕೋಸ್ ದ್ರಾವಣದಿಂದಲೇ ಬಾಣಂತಿಯರ ಸಾವು ಸಂಭವಿಸಿದೆ ಎನ್ನುವುದನ್ನು ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ. ಆದರೆ ಸಿಎಂ ಸೇರಿ ಆರೋಗ್ಯ ಸಚಿವರು ಗೌಪ್ಯವಾಗಿಯೇ ಇಟ್ಟಿದ್ದರು. ಬಾಣಂತಿಯರ ಸರಣಿ ಸಾವು ಮುಂದುವರಿಯುತ್ತಿ
ರುವುದರಿಂದ ತಡೆದುಕೊಳ್ಳದ ತಜ್ಞ ವೈದ್ಯರೇ ಇದನ್ನು ಹೊರಹಾಕಿದ್ದಾರೆ. ಕೇವಲ ಬಳ್ಳಾರಿಯಲ್ಲಿ ಮಾತ್ರವಲ್ಲ ಚಿತ್ರದುರ್ಗ, ದಾವಣಗೆರೆ, ರಾಯಚೂರು ಜಿಲ್ಲೆಯಲ್ಲೂ ಇದೇ ಐವಿ ದ್ರಾವಣ ನೀಡಿದ ಬಾಣಂತಿಯರು ಮೃತಪಟ್ಟಿದ್ದಾರೆ ಎನ್ನುವು ದನ್ನು ರಾಜ್ಯದ ಸರಕಾರಿ ಸರ್ಜನ್ ವೈದ್ಯರು ಇರುವ ವಾಟ್ಸ್ಅಪ್ ಗ್ರೂಪ್‌ಗಳಲ್ಲಿ ಸಾಮೂಹಿಕ ಚಾಟ್ ನಡೆಸಿದ್ದಾರೆ.
ಬ್ಯಾನ್ ಮಾಡಿದ ಸರಕಾರ: ಬಳ್ಳಾರಿಯಲ್ಲಿ ಬಾಣಂತಿಯರ ನಿರಂತರ ಸಾವಿಗೆ ಐವಿ ದ್ರಾವಣ ಕಾರಣ ಎನ್ನುವ ವರದಿ ಬಳಿಕ ಎಂ/ಎಸ್ ಪಶ್ಚಿಮ ಬ್ಯಾಂಗಪ್ಯಾರಾಸ್ಯುಟಿಕಲ್ ಕಂಪನಿ ಸರಬರಾಜು ಮಾಡಿದ ಎಲ್ಲ ಬ್ಯಾಚ್‌ನ ಗ್ಲೂಕೋಸ್ ದ್ರಾವಣವನ್ನು ಸರಕಾರ ಬ್ಯಾನ್ ಮಾಡಿದ್ದು, ಸದ್ಯಕ್ಕೆ ಇವುಗಳನ್ನು ಬಳಸದೇ ಇರಲು ರಾಜ್ಯ ಔಷಧ ಸರಬರಾಜು ಮಂಡಳಿಯೂ ನಿರ್ದೇಶನ ನೀಡಿದೆ.
ಬಳ್ಳಾರಿಯಿಂದ ಬಹಿರಂಗ
ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆಗೆ ಬಂದ ೭ ಬಾಣಂತಿಯರ ಆರೋಗ್ಯದಲ್ಲಿ ಏರುಪೇರಾಗಿತ್ತು. ೧೫ ದಿನಗಳಲ್ಲಿ ಐವರು ಬಾಣಂತಿಯರು ಮೃತಪಟ್ಟಿದ್ದಾರೆ. ಸರ್ಕಾರದ ವಿರುದ್ಧ ವಿಪಕ್ಷಗಳು ಹರಿಹಾಯ್ದಿವೆ. ಡಾ. ಸವಿತಾ, ಡಾ. ಭಾಸ್ಕರ್ ಮತ್ತು ಡಾ. ಹರ್ಷ ಅವರನ್ನು ಒಳಗೊಂಡ ತಜ್ಞರ ಸಮಿತಿಯನ್ನು ಸರ್ಕಾರ ರಚನೆ ಮಾಡಿದ್ದು, ಬಳ್ಳಾರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಸಾವಿಗೆ ಏನು ಕಾರಣ ಎಂದು ತನಿಖೆ ನಡೆಸಬೇಕು ಎಂದು ಸೂಚಿಸಿತ್ತು. ತನಿಖೆ ನಡೆಸಿದ ತಂಡ ಸಾವಿಗೆ ಕಾರಣವೇನು ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಐವಿ ಗ್ಲೂಕೋಸ್ ನೀಡಿರುವುದೇ ಗರ್ಭಿಣಿಯರ ಸಾವಿಗೆ ಕಾರಣ ಎಂದು ತನಿಖಾ ತಂಡ ವರದಿ ನೀಡಿದೆ. ಇದನ್ನು ಗೌಪ್ಯವಾಗಿಸಿದ ಸರಕಾರದ ನಡೆ ಸಾರ್ವಜನಿಕವಾಗಿ ವ್ಯಾಪಕ ಟೀಕೆಗೆ ಗುರಿಯಾಗಿದೆ, ಮಾತ್ರವಲ್ಲ ಶಾಪಕ್ಕೆ ಗುರಿಯಾಗಿದೆ. ಸರಕಾರ ಖಾಸಗಿ ಕಂಪನಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಕಠಿಣ ಶಿಕ್ಷೆ ವಿಧಿಸಬೇಕು ಎಂಬುದು ಎಲ್ಲರ ಒತ್ತಾಯವಾಗಿದೆ.