ಬಾದಾಮಿ ಬನಶಂಕರಿ ರಥೋತ್ಸವ 25ರಂದು
09:17 PM Jan 17, 2024 IST | Samyukta Karnataka
ಬಾದಾಮಿ: ಉತ್ತರ ಕರ್ನಾಟಕ ಭಾಗದಲ್ಲಿಯೇ ಅತ್ಯಂತ ದೊಡ್ಡ ಜಾತ್ರೆ ಎನಿಸಿಕೊಂಡಿರುವ ಬಾದಾಮಿ-ಬನಶಂಕರಿದೇವಿ ಜಾತ್ರೆ ಘಟಸ್ಥಾಪನೆ ಜ. ೧೮ರಂದು ಜರುಗಲಿದೆ. ಅಂದು ಬೆಳಿಗ್ಗೆ ೯.೩೦ರಿಂದ ಮಧ್ಯಾಹ್ನ ೪.೩೦ರವರೆಗೆ ಶ್ರೀದೇವಿಯ ದರ್ಶನಕ್ಕೆ ಅವಕಾಶ ಇರುವುದಿಲ್ಲ. ನಂತರ ಎಂದಿನಂತೆ ಎಲ್ಲ ರೀತಿಯ ಸೇವೆಗಳು ಶ್ರೀದೇವಿಗೆ ನಡೆಯಲಿವೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಜ.೨೫ರಂದು ಬನದ ಹುಣ್ಣಿಮೆಯಂದು ಸಂಜೆ ೫ ಗಂಟೆಗೆ ಮಹಾ ರಥೋತ್ಸವ ಜರುಗಲಿದೆ. ಜ.೨೯ ರಂದು ಕಳಸ ಇಳಿಸುವುದು ಸೇರಿದಂತೆ ಜಾತ್ರೆಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.