For the best experience, open
https://m.samyuktakarnataka.in
on your mobile browser.

ಬಾಲಕಿಯ ಅತ್ಯಾಚಾರ: ಅಪರಾಧಿಗಳಿಗೆ ಮರಣದಂಡನೆ

09:10 PM Nov 08, 2024 IST | Samyukta Karnataka
ಬಾಲಕಿಯ ಅತ್ಯಾಚಾರ  ಅಪರಾಧಿಗಳಿಗೆ ಮರಣದಂಡನೆ

ಮಂಗಳೂರು: ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಉಳಾಯಿಬೆಟ್ಟು ಪರಾರಿ ಎಂಬಲ್ಲಿನ ರಾಜ್‌ಟೈಲ್ ಫ್ಯಾಕ್ಟರಿಯಲ್ಲಿ ೮ ವರ್ಷ ಬಾಲಕಿಯ ಅತ್ಯಾಚಾರ ನಡೆಸಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಜಿಲ್ಲಾ ಸತ್ರ ತ್ವರಿತಗತಿ-೨ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿದೆ.
ಅತ್ಯಾಚಾರ, ಕೊಲೆ ಸಹಿತ ಪೋಕ್ಸೊ ಪ್ರಕರಣದ ಆರೋಪಿಗಳಾದ ಮಧ್ಯಪ್ರದೇಶದ ಜಯಸಿಂಗ್, ಮುಕೇಶ್ ಸಿಂಗ್, ಜಾರ್ಖಂಡ್‌ನ ಮನೀಶ್ ತಿರ್ಕಿ ಎಂಬವರಿಗೆ ಮರಣ ದಂಡನೆ, ೧.೨೦ ಲಕ್ಷ ರೂ. ದಂಡ ವಿಧಿಸಿದೆ. ಮೃತ ಬಾಲಕಿಯ ಕುಟುಂಬಕ್ಕೆ ೫ ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಧೀಶ ಮನು ಕೆ.ಎಸ್. ಆದೇಶಿಸಿದ್ದಾರೆ.
೨೦೨೧ರ ನವೆಂಬರ್ ೨೦ರಂದು ನಡೆದ ಈ ಪೋಕ್ಸೊ ಕೃತ್ಯದಲ್ಲಿ ಮರಣ ದಂಡನೆ ಶಿಕ್ಷೆಗೊಳಗಾದ ಪ್ರಥಮ ಪ್ರಕರಣ ಇದಾಗಿದೆ. ಪ್ರಕರಣದ ತನಿಖೆಯನ್ನು ಪೊಲೀಸ್ ನಿರೀಕ್ಷಕ ಜಾನ್ಸನ್ ಡಿಸೋಜ ನಡೆಸಿ ಆರೋಪಿಗಳ ವಿರುದ್ಧ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.