ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಬಾಲಕಿ ಚುಡಾಯಿಸಿದ ಐವರು ಯುವಕರ ಬಂಧನ

12:46 PM Nov 16, 2024 IST | Samyukta Karnataka

ಹುಬ್ಬಳ್ಳಿ: ಹಳೇಹುಬ್ಬಳ್ಳಿಯ ಶರಾವತಿನಗರದ ಬಳಿ ಶಾಲಾ ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರನ್ನು ಹಾಗೂ ಅವರಿಗೆ ಸಹಕರಿಸಿದ ಮೂವರನ್ನು ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿ, ಸ್ಕೂಟಿ ಮತ್ತು ಐದು ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಎರಡುದಿನಗಳ ಹಿಂದೆ ಶಾಲೆಯಿಂದ ಮನೆಗೆ ತೆರಳುವಾಗ ಬಾಲಕಿಯನ್ನು ಇಬ್ಬರು ಯುವಕರು ಸ್ಕೂಟಿಯಲ್ಲಿ ಹಿಂಬಾಲಿಸಿ ಚುಡಾಯಿಸಿದ್ದರು. ಈ ದೃಶ್ಯಾವಳಿ ಅಲ್ಲಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿತ್ತು. ಬಾಲಕಿಯ ಪೋಷಕರು ಶುಕ್ರವಾರ ಪೋಕ್ಸೊ ಪ್ರಕರಣ ದಾಖಲಿಸಿದ್ದರು.

ಇನ್‌ಸ್ಪೆಕ್ಟರ್ ಎಸ್.ಎಚ್. ಹಳ್ಳೂರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗಿತ್ತು.

ಪ್ರಕರಣ ದಾಖಲಾದ ಎರಡು ಗಂಟೆಯೊಳಗೆ ಪ್ರಮುಖ ಆರೋಪಿಗಳಾದ ಹಳೇಹುಬ್ಬಳ್ಳಿಯ ಅಯೋಧ್ಯಾನಗರ ನಿವಾಸಿಗಳಾದ ಶುಭಂ ತಡಸ ಮತ್ತು ಮೆಹಬೂಬ ಹಿತ್ತಲಮನಿ ಅವರನ್ನು ಬಂಧಿಸಲಾಗಿದೆ. ಅವರಿಗೆ ಸಹಕರಿಸಿದ ಆರೋಪಿಗಳಾದ ಸಾಗರ ಸಾತಪುತೆ, ಶ್ರೀವತ್ಸವ ಬೆಂಡಿಗೇರಿ, ಸಚಿನ ನರೇಂದ್ರ ಅವರನ್ನು ಸಹ ಬಂಧಿಸಲಾಗಿದೆ' ಎಂದು‌ ಪೊಲೀಸರು ತಿಳಿಸಿದ್ದಾರೆ.

ಪಿಎಸ್‌ಐ ರುದ್ರಪ್ಪ ಗುಡದರಿ, ಎಎಸ್ಐ ಪಿ.ಬಿ. ಕಾಳೆ ಮತ್ತು ಸಿಬ್ಬಂದಿ ಫಕ್ಕಿರೇಶ ಗೊಬ್ಬರಗುಂಪಿ, ಅಭಯ ಕಟ್ನಳ್ಳಿ, ನಾಗರಾಜ ಕೆಂಚಣ್ಣನವರ, ಕೃಷ್ಣ ಮೋಟೆಬೆನ್ನೂರ, ಸಂತೋಷ ವಲ್ಯಾಪುರ, ರಮೇಶ ಹಲ್ಲೆ, ಕಲ್ಲನಗೌಡ ಗುರನಗೌಡ, ವಿಠಲ ಹೊಸಳ್ಳಿ, ಜಗದೇಶ ಗೌಂಡಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

'ಪ್ರಮುಖ ಆರೋಪಿ ಶುಭಂ ತಡಸ ವಿರುದ್ಧ ಕಸಬಾಪೇಟೆ ಮತ್ತು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು, ಸಾಗರ ಸಾತಪುತೆ ವಿರುದ್ಧ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಎರಡು, ಸಚಿನ ನರೇಂದ್ರ ವಿರುದ್ಧ ಒಂದು ಪ್ರಕರಣಗಳು ದಾಖಲಾಗಿದ್ದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಕಮಿಷನರ್ ಎನ್.‌ ಶಶಿಕುಮಾರ್ ಶನಿವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

Tags :
#ಅಪರಾಧ#ಹುಬ್ಬಳ್ಳಿ
Next Article