ಬಾಲ್ ಮುಟ್ಟಿ ಕೆಟ್ಟ ದಾಂಡಿಗ…
ಢಾಕಾ: ಬಾಂಗ್ಲಾ ಹಾಗೂ ನ್ಯೂಜಿಲ್ಯಾಂಡ್ ವಿರುದ್ಧ ಸಾಗುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಬಾಂಗ್ಲಾದೇಶ ತಂಡದ ಹಿರಿಯ ಆಟಗಾರ ಮುಷ್ಫಿಕರ್ ರಹೀಂ ಚೆಂಡನ್ನು ಕೈಯಿಂದ ಹಿಡಿಯುವ ಮೂಲಕ ಔಟಾದ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ ಆರಂಭಿಕ ಆಘಾತ ಎದುರಿಸಿತು. 50 ರನ್ ಗಳಿಸುವ ಮುನ್ನವೇ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಬ್ಯಾಟಿಂಗ್ಗೆ ಇಳಿದ ಮುಷ್ಫಿಕರ್ ತಾಳ್ಮೆಯುತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾಗುತ್ತಿದ್ದರು. ಆದರೆ ಕೈಲ್ ಜಾಮಿಸನ್ ಅವರ ಓವರ್ನಲ್ಲಿ ಚೆಂಡನ್ನು ಡಿಫೆನ್ಸ್ ಮಾಡುವ ವೇಳೆ ಚೆಂಡು ಬ್ಯಾಟ್ಗೆ ಬಡಿದು ಮುಂದೆ ಸಾಗಿತ್ತು. ಈ ವೇಳೆ ಚೆಂಡು ವಿಕೆಟ್ ಗೆ ಬೀಳುತ್ತದೆ ಎಂದು ಭಾವಿಸಿದ ಮುಷ್ಫಿಕರ್ ಗಲಿಬಿಲಿಗೊಂಡು ತಮ್ಮ ಕೈಯಿಂದಲೇ ಚೆಂಡನ್ನು ತಡೆದರು. ಮುಷ್ಫಿಕರ್ ರಹೀಂ ಚೆಂಡನ್ನು ಕೈಗಳಿಂದ ತಡೆದ ಕಾರಣ ಕಿವೀಸ್ ಆಟಗಾರರು ಔಟ್ಗಾಗಿ ಅಂಪೈರ್ ಬಳಿ ಮನವಿ ಮಾಡಿದರು. ಫೀಲ್ಡ್ ಅಂಪೈರ್ ಮೊದಲಿಗೆ ಔಟ್ ನೀಡದೆ. ಲೆಗ್ ಅಂಪೈರ್ ಬಳಿ ಚರ್ಚಿಸಿ ಬಳಿಕ ಮೂರನೇ ಅಂಪೈರ್ಗೆ ಪರಿಶೀಲಿಸುವಂತೆ ಮನವಿ ಮಾಡಿದರು. ಚೆಂಡನ್ನು ಕೈಗಳಿಂದ ತಡೆದಿರುವುದು ದೊಡ್ಡ ಪರದೆಯಲ್ಲಿ ಕಾಣಿಸಿದ ಮೂರನೇ ಅಂಪೈರ್ ಇದನ್ನು ಔಟ್ ಎಂದು ಘೋಷಿಸಿದರು.