ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಬಾಲ್‌ ಮುಟ್ಟಿ ಕೆಟ್ಟ ದಾಂಡಿಗ…

04:23 PM Dec 06, 2023 IST | Samyukta Karnataka

ಢಾಕಾ: ಬಾಂಗ್ಲಾ ಹಾಗೂ ನ್ಯೂಜಿಲ್ಯಾಂಡ್​ ವಿರುದ್ಧ ಸಾಗುತ್ತಿರುವ ದ್ವಿತೀಯ ಟೆಸ್ಟ್​ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಬಾಂಗ್ಲಾದೇಶ ತಂಡದ ಹಿರಿಯ ಆಟಗಾರ ಮುಷ್ಫಿಕರ್‌ ರಹೀಂ ಚೆಂಡನ್ನು ಕೈಯಿಂದ ಹಿಡಿಯುವ ಮೂಲಕ ಔಟಾದ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಬಾಂಗ್ಲಾದೇಶ ಆರಂಭಿಕ ಆಘಾತ ಎದುರಿಸಿತು. 50 ರನ್​ ಗಳಿಸುವ ಮುನ್ನವೇ 4 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಬ್ಯಾಟಿಂಗ್​ಗೆ ಇಳಿದ ಮುಷ್ಫಿಕರ್‌ ತಾಳ್ಮೆಯುತ ಬ್ಯಾಟಿಂಗ್​ ನಡೆಸುವ ಮೂಲಕ ತಂಡಕ್ಕೆ ಆಸರೆಯಾಗುತ್ತಿದ್ದರು. ಆದರೆ ಕೈಲ್​ ಜಾಮಿಸನ್​ ಅವರ ಓವರ್​ನಲ್ಲಿ ಚೆಂಡನ್ನು ಡಿಫೆನ್ಸ್ ಮಾಡುವ ವೇಳೆ ಚೆಂಡು ಬ್ಯಾಟ್​ಗೆ ಬಡಿದು ಮುಂದೆ ಸಾಗಿತ್ತು. ಈ ವೇಳೆ ಚೆಂಡು ವಿಕೆಟ್ ಗೆ ಬೀಳುತ್ತದೆ ಎಂದು ಭಾವಿಸಿದ ಮುಷ್ಫಿಕರ್ ಗಲಿಬಿಲಿಗೊಂಡು ತಮ್ಮ ಕೈಯಿಂದಲೇ ಚೆಂಡನ್ನು ತಡೆದರು. ಮುಷ್ಫಿಕರ್‌ ರಹೀಂ ಚೆಂಡನ್ನು ಕೈಗಳಿಂದ ತಡೆದ ಕಾರಣ ಕಿವೀಸ್​ ಆಟಗಾರರು ಔಟ್​ಗಾಗಿ ಅಂಪೈರ್​ ಬಳಿ ಮನವಿ ಮಾಡಿದರು. ಫೀಲ್ಡ್​ ಅಂಪೈರ್​ ಮೊದಲಿಗೆ ಔಟ್​ ನೀಡದೆ. ಲೆಗ್​ ಅಂಪೈರ್​ ಬಳಿ ಚರ್ಚಿಸಿ ಬಳಿಕ ಮೂರನೇ ಅಂಪೈರ್​ಗೆ ಪರಿಶೀಲಿಸುವಂತೆ ಮನವಿ ಮಾಡಿದರು. ಚೆಂಡನ್ನು ಕೈಗಳಿಂದ ತಡೆದಿರುವುದು ದೊಡ್ಡ ಪರದೆಯಲ್ಲಿ ಕಾಣಿಸಿದ ಮೂರನೇ ಅಂಪೈರ್​ ಇದನ್ನು ಔಟ್​ ಎಂದು ಘೋಷಿಸಿದರು.

Next Article