For the best experience, open
https://m.samyuktakarnataka.in
on your mobile browser.

ಬಾಹ್ಯಾಕಾಶ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿರುವ ಕನ್ನಡಿಗ: ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ

04:54 PM Jan 18, 2025 IST | Samyukta Karnataka
ಬಾಹ್ಯಾಕಾಶ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿರುವ ಕನ್ನಡಿಗ  ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ

ಖಾಸಗಿ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಕ್ಕೆ, ಗೂಗಲ್ ಬೆಂಬಲಿತ ಪಿಕ್ಸ್‌ಸೆಲ್‌ಗೆ ಈ ಉಡಾವಣೆ ಮೈಲಿಗಲ್ಲು

ಬೆಂಗಳೂರು: ಬಾಹ್ಯಾಕಾಶ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿರುವ ಕನ್ನಡಿಗ, ಚಿಕ್ಕಮಗಳೂರು ಜಿಲ್ಲೆಯ ಆಲ್ಲೂರಿನ ಅವೇಜ್ ಅಹಮದ್ ಕುರಿತು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು, PIXXEL ಸ್ಪೇಸ್‌ನ ಮೊದಲ ಖಾಸಗಿ ಉಪಗ್ರಹ ನಕ್ಷತ್ರಪುಂಜ ಸಾಧಿಸಿದ ಯಶಸ್ಸನ್ನು ಶ್ಲಾಘಿಸಿದ್ದು. ಇದು ದೇಶದ ಯುವಜನರ ಅಸಾಧಾರಣ ಪ್ರತಿಭೆಯನ್ನು ಪ್ರದರ್ಶಿಸುತ್ತದೆ. ಜೊತೆಗೆ ಇದು ಬಾಹ್ಯಾಕಾಶ ಉದ್ಯಮದಲ್ಲಿ ಖಾಸಗಿ ವಲಯ ವಿಸ್ತರಿಸುತ್ತಿರುವುದನ್ನು ಬಿಂಬಿಸುತ್ತದೆ ಎಂದಿದ್ದಾರೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿರುವ ಚಿಕ್ಕಮಗಳೂರು ಜಿಲ್ಲೆಯ ಅಲ್ದೂರಿನ ಅವೇಜ್ ಅಹಮದ್ ಇದೀಗ ಮತ್ತೊಂದು ಮಹತ್ವದ ಸಾಧನೆ ಮಾಡಿದ್ದಾರೆ. ಭೂಮಿ ಹಾಗೂ ಅದರ ವಾತಾವರಣದ ನಾನಾ ರೀತಿಯ ಸೂಕ್ಷ್ಮ ಮಾಹಿತಿಗಳನ್ನು ಸೆರೆಹಿಡಿಯಬಲ್ಲ ಮೂರು ಉಪಗ್ರಹಗಳನ್ನು ಅವೇಜ್ ಅಹಮದ್ ಅವರ ಪಿಕ್ಸೆಲ್ ಕಂಪನಿ ಹಾರಿಬಿಟ್ಟಿದೆ. ಈ ಮೂರು ಉಪಗ್ರಹಗಳು ವಿಶ್ವದಲ್ಲೇ ಅತ್ಯುನ್ನತ ಸಾಮರ್ಥ್ಯದ ವಾಣಿಜ್ಯ ಉದ್ದೇಶದ ಹೈಪರ್‌ ಸ್ಪೆಕ್ಟ್ರಾ (Hyper spectra) ಉಪಗ್ರಹಗಳಾಗಿವೆ ಎಂದು ಕಂಪನಿ ಹೇಳಿಕೊಂಡಿದೆ.

ಯಾರು ಈ ಅವೇಜ್ ಅಹಮದ್? : ಅವೇಜ್ ಅಹಮದ್ ಚಿಕ್ಕಮಗಳೂರು ಜಿಲ್ಲೆಯ ಅಲ್ದೂರಿನವರು. ಅವರ ತಂದೆ ಅಲ್ದೂರು ಪಟ್ಟಣದಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿದ್ದಾರೆ. ಅಲ್ದೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಪಡೆದ ಅವೇಜ್, ಬಿರ್ಲಾ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಸೈನ್ಸ್‌ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಪದವಿ ಗಳಿಸಿದರು. ಈಗ ಖಾಸಗಿ ಉಪಗ್ರಹಗಳನ್ನು ಅಭಿವೃದ್ಧಿಗೊಳಿಸಿ ಅಂತರಿಕ್ಷಕ್ಕೆ ಹಾರಿಬಿಡುವ ಮಹತ್ವದ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

Tags :