For the best experience, open
https://m.samyuktakarnataka.in
on your mobile browser.

ಬಾಹ್ಯಾಕಾಶ ವಲಯದಲ್ಲಿ ನಮ್ಮ ರಾಷ್ಟ್ರ: ಗೀತೆಯ ಸಾಹಿತ್ಯ ಬರೆದು 50ಸಾವಿರ ಗೆಲ್ಲಿ

04:21 PM Aug 14, 2024 IST | Samyukta Karnataka
ಬಾಹ್ಯಾಕಾಶ ವಲಯದಲ್ಲಿ ನಮ್ಮ ರಾಷ್ಟ್ರ  ಗೀತೆಯ ಸಾಹಿತ್ಯ ಬರೆದು 50ಸಾವಿರ ಗೆಲ್ಲಿ

ನವದೆಹಲಿ: 2024ರ ಆಗಸ್ಟ್ 23 ರಂದು ಭಾರತದ ಪ್ರಪ್ರಥಮ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಪ್ರಯುಕ್ತ ರಾಷ್ಟ್ರೀಯ ಬಾಹ್ಯಾಕಾಶ ಗೀತೆ ಸ್ಪರ್ಧೆಯನ್ನು MyGov ಸಹಯೋಗದೊಂದಿಗೆ ಇಸ್ರೋ ಆಯೋಜಿಸಿದೆ.

ಸ್ಪರ್ಧಿಗಳು ಬಾಹ್ಯಾಕಾಶ ವಲಯದಲ್ಲಿ ನಮ್ಮ ರಾಷ್ಟ್ರದ ಸಾಧನೆಯನ್ನು ಬಿಂಬಿಸುವ ಮತ್ತು ಅಂತರಿಕ್ಷ ಅನ್ವೇಷಣೆಯನ್ನು ಪ್ರತಿಫಲಿಸುವ ಗೀತೆಯನ್ನು ಕಳುಹಿಸಬಹುದು. ಗೀತೆಯ ಸಾಹಿತ್ಯವನ್ನು ಕಡ್ಡಾಯವಾಗಿ ಸ್ಪರ್ಧಿಗಳು ಸಲ್ಲಿಸಬೇಕು. ವಿಜೇತರಿಗೆ ರೂ.50,000/- ನಗದು ಬಹುಮಾನ ನೀಡಲಾಗುವುದು. https://mygov.in/task/space-anthem-contest/ ಮೂಲಕ ಲಾಗಿನ್ ಆಗಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.