ಬಿಜೆಪಿಯವರಿಗೆ ತಿಳಿವಳಿಕೆ ಇಲ್ಲ…
ಕೊಪ್ಪಳ: ಬಿಜೆಪಿಯವರಿಗೆ ಮಾಡಲು ಯಾವುದೇ ಕೆಲಸ ಇಲ್ಲ. ಹಾಗಾಗಿ ಬಿಜೆಪಿ ಸರ್ಕಾರ ಇರುವಾಗಲೇ ೫,೯೦೦ ಕೋಟಿ ರೂ. ಸಾಲ ಮಾಡಿದ್ದರು. ಈಗ ನಮ್ಮ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು, ಮುಖಂಡರಿಗೆ, ತಿಳುವಳಿಕೆ ಇಲ್ಲ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ನಗರದ ಜಿಲ್ಲಾಡಳಿತ ಮುಂಭಾಗದಲ್ಲಿ ಸೋಮವಾರ ನಡೆದ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾರಿಗೆ ಇಲಾಖೆಯ ೪ ನಿಗಮದಿಂದ ೭,೬೦೦ ಕೋಟಿಯಷ್ಟು ಬಾಕಿ ಇದೆ. ಇಲ್ಲ ಎಂದು ಹೇಳಿಲ್ಲ. ೪ ವರ್ಷ ಕಾಲ ಒಂದು ಬಸ್ ಖರೀದಿಸಿರಲಿಲ್ಲ. ೬೩೦೦ ಬಸ್ ಖರೀದಿಗೆ ಪ್ರಕ್ರಿಯೆ ಆರಂಭಿಸಿದ್ದು, ೩,೬೦೦ ಬಸ್ ಈಗಾಗಲೇ ಖರೀದಿಸಲಾಗಿದೆ. ೧೬ ಸಾವಿರ ಜನ ನಿವೃತ್ತರಾಗಿದ್ದಾರೆ. ಆದರೆ ನೇಮಕಾತಿ ಮಾಡಲಿಲ್ಲ. ಆದರೆ ನಾವು ೯ ಸಾವಿರ ಜನರನ್ನು ನೇಮಕ ಮಾಡುತ್ತಿದ್ದು, ೨೫೦೦ ಹುದ್ದೆಗಳನ್ನು ಭರ್ತಿ ಮಾಡಿದ್ದೇವೆ. ಈ ದುಸ್ಥಿತಿಗೆ ತಂದವರು ಬಿಜೆಪಿಯವರು. ಹಾಗಾಗಿ ಆರೋಪ ಮಾಡುವ ಬಿಜೆಪಿಯವರೇ ಆರೋಪಿಗಳು.
ಕೆ.ಎಸ್.ಆರ್.ಟಿ.ಸಿ ನೌಕರರ ಯುನಿಯನ್ ಮುಷ್ಕರಕ್ಕೆ ಸಂಬಂಧಿಸಿದಂತೆ ನಾಯಕರ ಜತೆ ಮಾತನಾಡಿದ್ದೇನೆ. ಬಿಜೆಪಿಯವರು ಬೆಳಿಗ್ಗೆ ಎದ್ದರೇ ಟ್ವೀಟ್ ಮಾಡುತ್ತಾರೆ. ಇದಕ್ಕೆ ಉತ್ತರ ನೀಡಿದ್ದೇನೆ. ಬಿಜೆಪಿಯವರು ಯಾವುದೇ ಪ್ರತಿಕ್ರಿಯೇ ನೀಡಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಟ್ವೀಟ್ ಮಾಡುವ ಬದಲು, ಎದುರು ಕುಳಿತು ಮಾತನಾಡುತ್ತೇವೆ. ಬರಲು ಹೇಳಿ ಎಂದು ಸವಾಲಾಕಿದರು.
ಶಕ್ತಿ ಯೋಜನೆಯಿಂದ ಆದಾಯ ಹೆಚ್ಚಾಗಿದೆ. ಕಾಂಗ್ರೆಸ್ ಜನಪರವಾಗಿದ್ದು, ನಮ್ಮ ಸರ್ಕಾರ ಯಾವುದೇ ತಪ್ಪು ಮಾಡುವುದಿಲ್ಲ. ತಪ್ಪು ಮಾಡುವುದು ಏನಿದ್ದರು ಬಿಜೆಪಿಯವರ ಕೆಲಸವಾಗಿದೆ ಎಂದು ಆರೋಪಿಸಿದರು.