ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಬಿಜೆಪಿಯವರು ಇನ್ನೂ ನಾಲ್ಕು ವರ್ಷ ಪ್ರತಿಭಟನೆ ಮಾಡ್ತಾನೆ ಇರಲಿ

03:43 PM Sep 25, 2024 IST | Samyukta Karnataka

ಕಲಬುರಗಿ: ಸಿಎಂ ಸಿದ್ದರಾಮಯ್ಯ ರಾಜೀನಾಮಗೆ ಬಿಜೆಪಿ‌ ಪಟ್ಟು ಹಿಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕಲಬುರಗಿಯಲ್ಲಿ ಬುಧವಾರ ಪ್ರತಿಕ್ರಿಯೆ ನೀಡಿ, ಬಿಜೆಪಿಯವರು ಇನ್ನು ನಾಲ್ಕು ವರ್ಷ ಹೀಗೆ ಪ್ರತಿಭಟನೆ ಮಾಡೋಕೆ ಹೇಳಿ ಎಂದರು.
ಇನ್ನು ನಾಲ್ಕು ವರ್ಷ ಪ್ರತಿಭಟನೆ ಮಾಡಲಿ ತೊಂದರೆ ಇಲ್ಲಾ. ಆದರೆ ಬಿಜೆಪಿಯವರು ಇದಕ್ಕೂ ಮುಂಚೆ ಬೆಲ್ ಮೇಲೆ ಯಾಕೆ ಓಡಾಡ್ತಿದ್ದಾರೆ..!? ಕೇಂದ್ರ ಸಚಿವ ಕುಮಾರಸ್ವಾಮಿ ಯಾಕೆ ಜಾಮೀನಿನ ಮೇಲೆ ಓಡಾಡ್ತಿದ್ದಾರೆ. ಮುನಿರತ್ನ ಯಾಕೆ ಒಳಗ ಇದ್ದಾರೆ. ಆ ಬಗ್ಗೆ ಮಾತನಾಡಲಿ ಎಂದರು.

12 ವರ್ಷಗಳ ಹಿಂದಿನ ವಿಚಾರ ಈಗ ಮಾತಾನಾಡುತ್ತಾರೆ ಆದರೆ ಮಧ್ಯ ಐದು ವರ್ಷ ಅವರದೆ ಸರ್ಕಾರ ಇತ್ತಲ್ಲಾ..!? ಬಿಜೆಪಿಯವರು ಹೇಳಿದ‌ ತಕ್ಷಣ ಸಿಎಂ ರಾಜೀನಾಮೆ ಕೊಡಬೇಕು ಅಂತಾ ಏನು ಇಲ್ಲ. ನಮಗೆ ಗೆಲ್ಲಿಸಿದ್ದು ಈ ರಾಜ್ಯದ ಜನತೆ, ಬಿಜೆಪಿಯವರನ್ನು ಸೋಲಿಸಿದ್ದಾರೆ. ಸೊಲಿಸಿದವರ ಮಾತು ಕೇಳ ಬೇಡಿ ಎಂದಿದ್ದಾರೆ. ನೀವು ಇನ್ನು ಮೇಲೆ ಸಿಎಂ ರಾಜೀನಾಮೆ ಬಗ್ಗೆ ಕೇಳೊಕೆ ಹೋಗಬೇಡಿ. ಮಾದ್ಯಮಗಳಿಗೆ ಸಿಎಂ ರಾಜೀನಾಮೆ ಬಗ್ಗೆ ಮಾತನಾಡಬೇಡಿ ಎಂದು ಸಲಹೆ ನೀಡಿದ ಸಚಿವರು. ವಿಜಯೇಂದ್ರ ಕಥೆ ಎನು, ಮನಿ ಲಾಂಡ್ರಿಂಗ್ ಅವರ ಅಫಿಡಿವಿಟ್ ತೋರಿಸ್ಲಾ..!? ಬಿಜೆಪಿ ನಾಯಕರುಗಳದ್ದು ಸಿಕ್ಕಾಪಟ್ಟೆ ಇದ್ದಾವೆ ಎಂದ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ಎಲ್ಲರಿಗೂ ಹಕ್ಕು ಕೊಟ್ಟಿದ್ದಾರೆ, ಬಿಜೆಪಿಯವರು ಇನ್ನು ಹೀಗೆ ಪ್ರತಿಭಟನೆ ಮಾಡಲಿ ಎಂದರು. ಈ ದೇಶದಲ್ಲಿ ಇನ್ನು ಕಾನೂನು ಇದೆ ತಾನೆ. ನಿಮಗೆ ಏನು‌ ಕಾನೂನು‌ ಇದೆ ಅದು‌ ಸಿದ್ದರಾಮಯ್ಯ ಅವರಿಗೂ ಇದೆ. ರಾಜ್ಯದ ಎಲ್ಲಾ ಜನರು,ಶಾಸಕರು, ಸಚಿವರು, ಕಾರ್ಯಕರ್ತರು ಅವರ ಜತೆಯಲ್ಲಿದ್ದಾರೆ. ಸರ್ವೋಚ್ಛ ನ್ಯಾಯಾಲಯದ ಮತ್ತೆ ಗೆದ್ದು ಬರ್ತಾರೆ ತೊಂದರೆ ಇಲ್ಲ ಎಂದು ವಿಶ್ಬಾಸ ವ್ಯಕ್ತ ಪಡಿಸಿದರು.

Tags :
#ಕಲಬುರಗಿ#ಕಾಂಗ್ರೆಸ್‌#ಬಿಜೆಪಿ#ಸಿದ್ದರಾಮಯ್ಯ
Next Article