ಬಿಜೆಪಿಯಿಂದ ಎಂ.ಪಿ.ರೇಣುಕಾಚಾರ್ಯ ಉಚ್ಚಾಟನೆಗೆ ಒತ್ತಾಯ
ದಾವಣಗೆರೆ: ಪಕ್ಷದಮಾಜಿ ಸಚಿವರಾದ ಎಂ.ಪಿ ರೇಣುಕಾಚಾರ್ಯ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಬೇಕೆಂದು ಹೊನ್ನಾಳಿ ತಾಲ್ಲೂಕು ಬಿಜೆಪಿ ಘಟಕ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಶಾಂತರಾಜ್ ಪಾಟೀಲ್ ಮಾತನಾಡಿ, ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ರೇಣುಕಾಚಾರ್ಯ ಪಕ್ಷದಲ್ಲಿ ಗುಂಪುಗಾರಿಕೆ ಮಾಡಿ, ಬಂಡಾಯದ ಪ್ರವೃತ್ತಿಗೆ ನಾಂದಿಯಾಡಿದ್ದಾರೆ ಇವರನ್ನು ಕೂಡಲೇ ಪಕ್ಷದಿಂದ ಉಚ್ಚಾಟನೆ ಮಾಡುವಂತೆ ಒತ್ತಾಯಿಸಿ ಡಿಸೆಂಬರ್ ಅಂತ್ಯದ ಒಳಗಾಗಿ ಹೊನ್ನಾಳಿ ತಾಲ್ಲೂಕು ಬಿಜೆಪಿ ಘಟಕದಿಂದ ದೆಹಲಿಗೆ ನಿಯೋಗ ತೆರಳಿ ಅಮೀತ್ ಶಾ ಸೇರಿದಂತೆ ಪಕ್ಷದ ವರಿಷ್ಠರಿಗೆ ದೂರು ನೀಡಲಾಗುವುದು ಎಂದರು.
ರಾಜ್ಯದ ಅತ್ಯಂತ ಕಳಂಕಿತ ವ್ಯಕ್ತಿ ತಾನು ಆಡುವ ಮಾತಿನಲ್ಲಿ ಬದ್ದತೆ ಇಲ್ಲದೆ ಮನಬಂದAತೆ ಮಾತನಾಡುತ್ತಾ ಪಕ್ಷದ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಹೇಳಿದರೆ ಚುನಾವಣೆಯಲ್ಲಿ ಮತ ಹಾಕುತ್ತಾರಾ? ಎಂದು ಸಭೆಯಲ್ಲಿ ಮಾತನಾಡುವಂತಹ ಕೀಳರಿಮೆಯ ವ್ಯಕ್ತಿತ್ವದವರು ಸದಾ ಪಕ್ಷದಲ್ಲಿದ್ದುಕೊಂಡು ಪಕ್ಷದ ಹಿರಿಯರಿಗೆ ಈ ಹಿಂದಿನ ರಾಜ್ಯಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ಅವರಿಗೆ ಟೀಕಿಸಿದ್ದು ವಿಷಾಧಕರ ಸಂಗತಿ ಎಂದರು.
ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡಿ ತಮಿಳುನಾಡಿನಲ್ಲಿ ಅಣ್ಣಾಮಲೈ ಹಿನ್ನಡೆಯಾಗಲೂ ಸಹ ರೇಣುಕಾಚಾರ್ಯರೇ ಕಾರಣ. ಆದ್ದರಿಂದ ಅಣ್ಣಾಮಲೈ ಅವರನ್ನು ನಮ್ಮೊಂದಿಗೆ ಸೇರಿಸಿಕೊಂಡು ರೇಣುಕಾಚಾರ್ಯ ಉಚ್ಚಾಟನೆಗೆ ದೆಹಲಿಗೆ ತೆರಳಿ ದೂರು ನೀಡಲಾಗುತ್ತದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಗದೀಶ್, ನೆಲಹೊನ್ನೆ ದೇವರಾಜ್, ಚನ್ನೇಶ್, ಸಿದ್ದೇಶ್, ಮಂಜಣ್ಣ ಮತ್ತಿತರರಿದ್ದರು.
ಜಿಲ್ಲಾ ಕಾಂಗ್ರೆಸ್‌ನಲ್ಲಿ ಮಿಲಾಪಿ ರಾಜಕಾರಣ ಮಾಡಿಕೊಂಡು ದಾವಣಗೆರೆ ಕ್ಷೇತ್ರದಲ್ಲಿ ಬಿಜೆಪಿ ಸೋಲಲು ರೇಣುಕಾಚಾರ್ಯ ಕಾರಣರಾದರು. ಎಸ್.ಎಸ್. ಮಲ್ಲಿಕಾರ್ಜುನ್ ವಿರುದ್ಧ ಇರ‍್ಯಾರು ಇದುವರೆಗೂ ಒಂದು ಮಾತನಾಡುವುದಿಲ್ಲ. ಏಕೆಂದರೆ ಮಲ್ಲಿಕಾರ್ಜುನ್ ಇವರಿಗೆ ತಮ್ಮ ವಿರುದ್ಧ ಮಾತಾಡದಂತೆ ಆದೇಶಿಸಿದ್ದಾರೆ.
ಶಾಂತರಾಜ್ ಪಾಟೀಲ್, ಪಕ್ಷದ ಮುಖಂಡ