For the best experience, open
https://m.samyuktakarnataka.in
on your mobile browser.

ಬಿಜೆಪಿಯ ಬಹುತೇಕ ನಾಯಕರು ಬೇಲ್ ಮೇಲೆ ಓಡಾಡ್ತಿದಾರೆ

12:49 PM Jul 11, 2024 IST | Samyukta Karnataka
ಬಿಜೆಪಿಯ ಬಹುತೇಕ ನಾಯಕರು ಬೇಲ್ ಮೇಲೆ ಓಡಾಡ್ತಿದಾರೆ

ಬಳ್ಳಾರಿ: ಬಿಜೆಪಿ‌ ನಾಯಕರೆಲ್ಲ ಕ್ಲೀನ್ ಇಮೇಜ್ ಇರೋರಾ? ಅವರಲ್ಲೂ ಅದೇಷ್ಟೋ ಜನ ಬೇಲ್ ಮೇಲೆ ಓಡಾಡ್ತಿದಾರೆ ಎಂದು ಇಂಧನ ಸಚಿವ ಕೆ.ಜೆ.ಜಾಜ್೯ ಹೇಳಿದರು.
ಬಳ್ಳಾರಿಯ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿರುವ ಅವರು. ವಾಲ್ಮೀಕಿ ನಿಗಮ ಪ್ರಕರಣ ಈಗಾಗಲೇ ಎಸ್ಐಟಿ‌ ವಿಚಾರಣೆಯಲ್ಲಿದೆ. ಇಡಿ ದಾಳಿ ಅಗತ್ಯವಿರಲಿಲ್ಲ. ಆದರೂ ಮಾಡಿದ್ದಾರೆ. ಸರಕಾರ ಇದರಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಇಡಿ, ಎಸ್ಐಟಿಯೂ ತಮ್ಮ ಪಾಡಿಗೆ ತಾವು ಕೆಲಸ ಮಾಡಲಿ, ಈಗಾಗಲೇ ಎಸ್ಐಟಿ ತನಿಖೆ ಆರಂಭಿಸಿದೆ. ರಿಪೋರ್ಟ್ ಬರೋವರೆಗೂ ಕಾಯೋಣ. ತನಿಖೆಯ ವರದಿ ಬಂದ ಮೇಲೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ತೇವೆ ಎಂದ ಜಾಜ್೯ ಹೇಳಿದರು.
ಎಸ್ಐಟಿ ತನಿಖೆಗೆ ನಾಗೇಂದ್ರ ಸಹಕಾರ ಮಾಡ್ತಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಜಾಜ್೯ ನಾಗೇಂದ್ರ ಅವರು ಸಹಕಾರ ಮಾಡ್ತಿಲ್ಲ ಅಂತಾ ಎಸ್ಐಟಿಯವರು ಹೇಳಿದ್ದಾರಾ? ಎಸ್ಐಟಿಯವರು ಆ ರೀತಿ ಹೇಳಿಲ್ಲ. ನಾನು ಗೃಹ ಸಚಿವನಾಗಿದ್ದವನು ಅಧಿಕಾರಿಗಳು ಏನು ಕೆಲಸ ಮಾಡುತ್ತಾರೆ ಎನ್ನುವುದು ಗೊತ್ತಿದೆ. ಈಗ ಎಸ್ಐಟಿ ತನಿಖೆ ಮಾಡ್ತಿದೆ. ಸರ್ಕಾರ ಇದ್ರಲ್ಲಿ ಯಾವುದೇ ಹಸ್ತಕ್ಷೇಪ ಮಾಡ್ತಿಲ್ಲ. ಈ ಪ್ರಕರಣದಿಂದ ಸರ್ಕಾರಕ್ಕೆ ಯಾವುದೇ ಮುಜುಗರವೂ ಇಲ್ಲ.

ಬಿಜೆಪಿಯವರು ಈಗ ಭ್ರಮೆಯಲ್ಲಿದ್ದಾರೆ: ಕೇಂದ್ರದಲ್ಲಿ ಗೆಲ್ಲೋದಕ್ಕೆ ಆಗಿಲ್ಲ, ಅದನ್ನ ಮುಚ್ಚಿಕೊಳ್ಳೋದಕ್ಕೆ ಮಾತಾಡ್ತಿದ್ದಾರೆ. ಸ್ವಲ್ಪ ಎಸ್ಐಟಿ ತನಿಖಾ ವರದಿ ಬರೋತನಕ ಕಾಯೋಣ ಎಂದ ಕೆಜೆ ಜಾರ್ಜ್. ವಾಲ್ಮೀಕಿ ಹಗರಣ ಸಿಬಿಐಗೆ ಕೊಡುವಂತೆ ಬಿಜೆಪಿ ನಾಯಕರ ಒತ್ತಾಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಬಿಜೆಪಿಯವರು ಯಾಕೆ ಸಿಬಿಐಗೆ ಕೊಡಿ ಅಂತಾ ಹೇಳುತ್ತಿದ್ದಾರೆ ? ಇಲ್ಲಿ ನಮ್ಮ ಅಧಿಕಾರಿಗಳು ದಕ್ಷರಿಲ್ವಾ? ಸಿಬಿಐ ಕೇಂದ್ರದ್ದು, ಅದಕ್ಕೆ ಸಿಬಿಐಗೆ ಕೊಡಿ ಅಂತಾ ಹೇಳ್ತಿದ್ದಾರೆ. ಬಿಜೆಪಿ ನಾಯಕರ ಮೇಲೆ ಯಾವುದೇ ಕೇಸ್‌ಗಳಿಲ್ವಾ?

ಬಿಜೆಪಿ ನಾಯಕರು ಬಹಳ ಜನ ಬೇಲ್ ಮೇಲೆ ಓಡಾಡ್ತಿದ್ದಾರೆ: ಸರ್ಕಾರ ಏನೂ ಬೀಳೋದಿಲ್ಲ, ನಮಗೆ ಜನ ಬೆಂಬಲ ಕೊಟ್ಟಿದ್ದಾರೆ. ಸರ್ಕಾರ ಬೀಳುತ್ತೆ ಅನ್ನೋದು ಬಿಜೆಪಿಯವ್ರ ಹಗಲು ಕನಸು. ನಮ್ಮ ಸಿಎಂ, ಡಿಸಿಎಂ ನಾಯಕರು ಒಳ್ಳೆ ಕೆಲಸ ಮಾಡ್ತಿದ್ದಾರೆ ಎಂದು ಪ್ರತಿಕ್ರಿಯಿಸಿದರು‌.

ಬಳ್ಳಾರಿ ಮೂಡಾ ಹಗರಣ ವಿಚಾರ ಕುರಿತು : ಮೂಡಾ ಯಾರ ಕಾಲದಲ್ಲಿ ಆಗಿದೆ? ಬಿಜೆಪಿಯವರ ಕಾಲದಲ್ಲಿ ಆಗಿದೆ. ಅವರ ಕಾಲದಲ್ಲೇ ಎಲ್ಲಾ ಭ್ರಷ್ಟಾಚಾರ ಆಗಿದೆ. ಆದ್ರೆ ಈಗ ಅವ್ರೇ ಪ್ರೊಟೆಸ್ಟ್ ಮಾಡ್ತಿದ್ದಾರೆ. ಕರೆಂಟ್ ಬಿಲ್ ಆರಂಭದಲ್ಲಿ ಜಾಸ್ತಿ ಮಾಡಿದ್ದೇ ಬಿಜೆಪಿಯವರು.
ನೂರು ಸುಳ್ಳು ಹೇಳಿ, ಅದನ್ನ ಸತ್ಯ ಮಾಡೋದು ಬಿಜೆಪಿ ಜಾಯಮಾನವಾಗಿದೆ. ಮೂಡಾದಲ್ಲಿ ಯಾರು ತಪ್ಪು ಮಾಡಿದ್ರೂ ತನಿಖೆ ಮುಗಿಯುವವರೆಗೂ ಕಾಯೋಣ ಎಂದರು.

ಸಿಎಂ ಬದಲಾವಣೆ ಬಿಜೆಪಿಯವರಿಗೆ ಮಾತ್ರ ಬೇಕಿದೆ: ಬಿಜೆಪಿಯವ್ರಿಗೆ ಮಾತ್ರ ಬದಲಾವಣೆ ಆಗಬೇಕಿದೆ. ಶಾಸಕರಾದವರು ಅನುದಾನ ಕೇಳ್ತಾರೆ, ಅದು ಅವರ ಕೆಲಸ. ಗ್ಯಾರಂಟಿ ಯೋಜನೆಯಿಂದ ಯಾವುದೇ ಸಮಸ್ಯೆ ಇಲ್ಲ. ಗ್ಯಾರಂಟಿ ಫಲಾನುಭವಿಗಳು ಮಹಿಳೆಯರೇ ಹೆಚ್ಚಿದ್ದಾರೆ.
ಗ್ಯಾರಂಟಿ ಹಣ ಜನರಿಗೆ ಅಲ್ವಾ ನಾವು ಕೊಡೋದು. ನಾವು ಜನರಿಗೆ ಏನು ಬೇಡಿಕೆ ಕೊಟ್ಟಿದ್ವೋ ಅದನ್ನ ಈಡೇರಿಸಿದ್ದೇವೆ ಎಂದ ಸಚಿವ ಜಾರ್ಜ್ ಹೇಳಿದರು.