ಬಿಜೆಪಿ ಮಹಿಳಾ ಮೋರ್ಚ ಅಧ್ಯಕ್ಷೆ ವಿರುದ್ಧ ವಂಚನೆ ಆರೋಪ: ಜಾಮೀನು ರಹಿತ ಬಂಧನ ವಾರೆಂಟ್
09:58 PM Jan 20, 2025 IST | Samyukta Karnataka
ಹಣವಿಲ್ಲದ ಚೆಕ್ ನೀಡಿ ವಂಚನೆ
ಕಾರವಾರ: ಕುಮಟಾ ಬಿಜೆಪಿ ತಾಲೂಕಿನ ಮಹಿಳಾ ಮೋರ್ಚ ಅಧ್ಯಕ್ಷೆ ಜಯಪ್ರಕಾಶ್ ಶೇಟ್ ವಿರುದ್ಧ ಕುಮಟಾ ಜೆಎಂಎಫ್‌ಸಿ ಕೋರ್ಟ್ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದೆ. 1.90 ಲಕ್ಷ ಹಣ ವಂಚನೆ ಆರೋಪದಡಿ 26/12/2024 ಪ್ರಕರಣ ದಾಖಲಿಸಿದ್ದ ಕುಮಟಾ ಕಿಂಗ್ ಕ್ರಡಿಟ್ ಸೌಹಾರ್ದ ಕೋಪರೇಟಿವ್ ಲಿಮಿಟೆಡ್ ಬ್ಯಾಂಕ್, ಆರೋಪಿ ಖಾತೆಯಲ್ಲಿ ಹಣವಿಲ್ಲದ ಚಕ್ ನೀಡಿ ವಂಚನೆ ಮಾಡಿರುವ ಕುರಿತು ಕಲಂ 223 ,138 NI Act ನಡಿ ಪ್ರಕರಣ ದಾಖಲಿಸಿತ್ತು. ಈ ಪ್ರಕರಣ ಸಂಬಂಧ ಆರೋಪಿ ಜಯಪ್ರಕಾಶ್ ಶೇಟ್ ಗೆ ಇಂದು ಕುಮಟಾ ಸಿವಿಲ್ ಹಾಗೂ JMFC ಕೋರ್ಟ ನಲ್ಲಿ ವಾದ ವಿವಾಧ ಆಲಿಸಿ ಜಮೀನು ರಹಿತ ವಾರೆಂಟ್ ಜಾರಿಮಾಡಿದೆ.