ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಬಿಜೆಪಿ ಮೊದಲು ಶಾಸಕಾಂಗ ನಾಯಕ ಆಯ್ಕೆ ಮಾಡಲಿ

07:04 PM Nov 03, 2023 IST | Samyukta Karnataka

ದಾವಣಗೆರೆ: ಬಿಜೆಪಿ ರಾಜ್ಯಾಧ್ಯಕ್ಷ ಯಾರು ಎಂಬುದಾಗಿ ಮೊದಲು ಹೇಳಲಿ. ತಮ್ಮ ಪಕ್ಷದ ಶಾಸಕಾಂಗ ನಾಯಕನನ್ನು ಆಯ್ಕೆ ಮಾಡಲಿ. ಆಮೇಲೆ ಉಳಿದಿದ್ದನ್ನು ಚರ್ಚೆ ಮಾಡೋಣ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ವಿಪಕ್ಷ ಬಿಜೆಪಿಯ ನಾಯಕರಿಗೆ ಲೇವಡಿ ಮಾಡಿದ್ದಾರೆ.
ನಗರದ ಜಿಪಂನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ತಮ್ಮ ಪಕ್ಷದ ಅಧ್ಯಕ್ಷರು ಯಾರೆಂದು ಹೇಳಲಿ. ಮೊದಲು ಶಾಸಕಾಂಗ ಪಕ್ಷದ ನಾಯಕರನ್ನು ಬಿಜೆಪಿಯವರು ಮೊದಲು ಆಯ್ಕೆ ಮಾಡಲಿ. ಆ ನಂತರ ಉಳಿದದ್ದನ್ನೆಲ್ಲಾ ಚರ್ಚೆ ಮಾಡೋಣ ಎಂದರು.
ಕರ್ನಾಟಕ ವಿಧಾನಸಭೆ, ವಿಧಾನ ಪರಿಷತ್‌ನಲ್ಲಿ ವಿಪಕ್ಷ ನಾಯಕರೇ ಇಲ್ಲ. ಚುನಾವಣೆ ಫಲಿತಾಂಶ ಬಂದು 6 ತಿಂಗಳಾದರೂ ಉಭಯ ಸದನಗಳಿಗೂ ನಾಯಕರೇ ಇಲ್ಲದ ಸ್ಥಿತಿಯಲ್ಲಿ ಬಿಜೆಪಿ ಇದೆ. ಇನ್ನೂ ವಿಪಕ್ಷ ನಾಯಕರನ್ನು ಆಯ್ಕೆ ಮಾಡುವುದಕ್ಕೂ ಬಿಜೆಪಿಯವರಿಂದ ಸಾಧ್ಯವಾಗಿಲ್ಲ ಎಂದು ಅವರು ಟೀಕಿಸಿದರು. ತಃ ತಮ್ಮ ಪಕ್ಷದ ರಾಜ್ಯಾಧ್ಯಕ್ಷರು ಯಾರೆಂಬುದೂ ಗೊತ್ತಿಲ್ಲ. ಇಂತಹ ಪಕ್ಷದವರು ಮತ್ತೊಬ್ಬರ ಬಗ್ಗೆ ಮಾತನಾಡುತ್ತಾರೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಪೂರ್ಣ ಪ್ರಮಾಣದಲ್ಲಿ ಸಂಪುಟವನ್ನು ರಚಿಸಲಿಲ್ಲ. 4 ವರ್ಷದಲ್ಲಿ ಒಂದೇ ಒಂದು ಸಲವೂ 34 ಜನರಿಗೆ ಸಚಿವ ಸ್ಥಾನ ನೀಡಲಿಲ್ಲ. ನಾವು ಸರ್ಕಾರದ ಬಂದ ಮೊದಲ ದಿನದಿಂದ ಲೇ ಪೂರ್ಣ ಪ್ರಮಾಣದ ಸಂಪುಟ ರಚಿಸಿ, ಕೆಲಸ ಮಾಡುತ್ತಿದ್ದೇವೆ. ಎಲ್ಲಿದೆ ಗೊಂದಲ ನೀವೇ ಹೇಳಿ ಎಂದು ಅವರು ಪ್ರಶ್ನಿಸಿದರು.ರಾಜ್ಯಾಧ್ಯಕ್ಷ, ವಿಪಕ್ಷ ನಾಯಕರನ್ನೂ ಮಾಡಲಾಗದ ಬಿಜೆಪಿ ತನ್ನ ವೈಫಲ್ಯ ಮರೆ ಮಾಚಲು ದಿನಕ್ಕೊಂದು ವಿಚಾರವನ್ನು ಹರಡುತ್ತಿದೆ. ರಾಜ್ಯದಲ್ಲಿ ವಿಶೇಷವಾಗಿ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಗೊಂದಲ ಇಲ್ಲ. ಸರ್ಕಾರದಲ್ಲಿ ಏನೂ ಆಗಿಲ್ಲ, ಆಗುತ್ತಿಲ್ಲ. ನಮ್ಮ ಸರ್ಕಾರ ಸುಭದ್ರವಾಗಿ ಕೆಲಸ ಮಾಡುತ್ತಿದೆ. ಚುನಾವಣೆ ಪೂರ್ವದಲ್ಲಿ ನಾವು ನೀಡಿದ್ದ ಭರವಸೆ, ಯೋಜನೆಗಳಿಂದಾಗಿ ಜನರಿಗೆ ಅನುಕೂಲವಾಗುತ್ತಿದೆ. ನಮ್ಮ ಗ್ಯಾರಂಟಿಗಳಿಂದ ಬಡವರಿಗೆ ಸಾಕಷ್ಟು ಸಹಾಯವಾಗುತ್ತಿದೆ. ಜನರ ಆಶೀರ್ವಾದ, ಹಾರೈಕೆಯಿಂದ ನಮ್ಮ ಸರ್ಕಾರವು ಸುಭದ್ರವಾಗಿದೆ ಎಂದು ಅವರು ಹೇಳಿದರು.ನಿತ್ಯವೂ ಒಂದೊಂದು ರಾಜಕೀಯ ಚಟುವಟಿಕೆ ಇದ್ದೇ ಇರುತ್ತದೆ. ಜನರಿಗೆ ರಾಜಕೀಯ ಮುಖ್ಯವಲ್ಲ. ಜನರಿಗೆ ಬೇಕಾಗಿರುವುದು ಕಷ್ಟದ ಕಾಲದಲ್ಲಿ ತಮ್ಮ ಪರವಾಗಿರುವ ಸರ್ಕಾರವಷ್ಟೇ. ಅದನ್ನು ನಮ್ಮ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಹಾಗಾಗಿ ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಯಾರೂ ಸಹ ಅಸಮಾಧಾನಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವ ಕೃಷ್ಣ ಭೈರೇಗೌಡ ಸಿಎಂ ಅಧಿಕಾರಾವದಿ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

Next Article