ಬಿಟಿಡಿಎ ಹಗರಣ: ಸಿಐಡಿ ತನಿಖೆಗೆ
ಬಾಗಲಕೋಟೆ: ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ(ಬಿಟಿಡಿಎ)ದಿಂದ ನಿವೇಶನ ಹಂಚಿಕೆ ಹಾಗೂ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ತನಿಖೆಯನ್ನು ಸಿಐಡಿಗೆ ವಹಿಸಲಾಗುವುದು ಎಂದು ಪ್ರಾಧಿಕಾರ ಸಭಾಪತಿ ಎಚ್.ವೈ.ಮೇಟಿ ಅವರು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರ ಸಮ್ಮುಖದಲ್ಲಿ ಘೋಷಿಸಿದ್ದಾರೆ.
ಗುರುವಾರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ೭೮ನೇ ಸ್ವಾತಂತ್ರೊö್ಯÃತ್ಸವ ಸಮಾರಂಭದಲ್ಲಿ ಭಾಗಿಯಾದ ನಂತರ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಅವರು ಉತ್ತರಿಸಿದರು. ೨೦೧೩ರ ನಮ್ಮ ಸರ್ಕಾರದ ಅವಧಿಯಿಂದ ಈವರೆಗೆ ಬಿಟಿಡಿಎಯಲ್ಲಿ ನಡೆದಿರುವ ಅವ್ಯವಹಾರಗಳ ತನಿಖೆಯನ್ನು ಸಿಐಡಿಗೆ ವಹಿಸಲಾಗುತ್ತದೆ. ಅದಕ್ಕಾಗಿ ಶೀಘ್ರದಲ್ಲಿ ಸಭೆ ನಡೆಸುವ ಸಂಬAಧ ಉಸ್ತುವಾರಿ ಸಚಿವರಿಗೆ ದಿನಾಂಕವನ್ನೂ ಕೋರಿದ್ದೇನೆ. ಅವರು ಆ.೨೬ರಂದು ಅಮೇರಿಕಕ್ಕೆ ತೆರಳಲಿದ್ದು, ಅಷ್ಟರೊಳಗಾಗಿ ಸಭೆ ನಡೆಸಿ ತನಿಖೆಯನ್ನು ಸಿಐಡಿಗೆ ವಹಿಸಲಾಗುತ್ತದೆ. ಈ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು. ಬಿಟಿಡಿಎಗೆ ಸದಸ್ಯರು, ಬುಡಾ ಅಧ್ಯಕ್ಷ, ಸದಸ್ಯರ ನೇಮಕ ಯಾವಾಗ ಎಂಬ ಪ್ರಶ್ನೆಗೆ ಅದೆಲ್ಲ ಸರ್ಕಾರ ಮಾಡುತ್ತದೆ ಎಂದಷ್ಟೇ ಅವರು ಉತ್ತರಿಸಿದರು