ಬಿಮ್ಸ್ ನಲ್ಲಿ ಹಣ ದುರ್ಬಳಕೆ: ಮೂವರ ಅಮಾನತು
ಬಳ್ಳಾರಿ: ಬಳ್ಳಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಬಳಕೆದಾರರ ಶುಲ್ಕ ದುರ್ಬಳಕೆ ಮಾಡಿಕೊಂಡ ಮೂವರು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ.
ಸಿಬ್ಬಂದಿ ದಯಾ ಅಮರ್, ಮೇಲ್ವಿಚಾರಕಿ ಶರಣಮ್ಮ, ಅಧೀಕ್ಷಕ ಗುರುರಾಜ ಅಮಾನತುಗೊಂಡವರು.
ನಿತ್ಯ ಹತ್ತು ಇಪ್ಪತ್ತು ರೂಪಾಯಿನಂತೆ ಹೊರ ರೋಗಿಗಳ ವಿಭಾಗದಲ್ಲಿ ಜನ ಕಟ್ಟುವ ಹಣಕ್ಕೆ ಖನ್ನಾ ಈ ಮೂವರು ಖನ್ನಾ ಹಾಕಿದ್ದಾರೆ ಎನ್ನಲಾಗಿದೆ ಒಟ್ಟು
6 ಲಕ್ಷದ 21 ಸಾವಿರದ 242 ರೂಪಾಯಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಹಣವನ್ನು
ಬ್ಯಾಂಕ್ ಗೆ ಹಾಕದೇ ಜೇಬಿಗೆ ಹಾಕಿಕೊಂಡಿದ್ದಾರೆ.
ದಯಾ ಅಮರ್ ಎನ್ನುವ ಸಿಬ್ಬಂದಿಯಿಂದ ಬ್ಯಾಂಕ್ ಗೆ ಹಾಕಿರುವ ನಕಲಿ ಚಲನ್ ತೋರಿಸಿ ಕಳ್ಳತನ.
ಒಂದು ಅಥವಾ ಎರಡು ಸಾವಿರ ಹಣ ಬ್ಯಾಂಕ್ ಗೆ ಹಾಕಿ ಬಳಿಕ ನಕಲಿ ಚಲನ್ ನಲ್ಲಿ 20, 25 ಸಾವಿರ ಅಂತಾ ಬರೆದುಕೊಂಡು ಹೋಗಿ ಯಾಮಾರಿಸಿದ್ದಾನೆ.
ವಿಮ್ಸ್ ಮೆಲಾಧಿಕಾರಿಗಳು ಅಕೌಂಟ್ ಚೆಕ್ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ದಯಾ ಅಮರ್ ನನ್ನ ಅಮಾನತ್ತು ಮಾಡಿದ ವಿಮ್ಸ್ ನಿರ್ದೇಶಕ ಗಂಗಾಧರ್ ಗೌಡ, ಈ ಪ್ರಕರಣದಲ್ಲಿ ನಿರ್ಲಕ್ಷ್ಯ ಮಾಡಿದ ಹಿನ್ನೆಲೆ ಇನ್ನೂ ಇಬ್ಬರು ಸಿಬ್ಬಂದಿಗಳಾದ
ಮೇಲ್ವಿಚಾರಕಿ ಶರಣಮ್ಮ, ಅಧೀಕ್ಷಕ ಗುರುರಾಜ್ ರನ್ನು ಅಮಾನತು ಮಾಡಲಾಗಿದ್ದು,
ಇಲಾಖಾ ತನಿಖೆಗೆ ಆದೇಶಿಸಲಾಗಿದೆ.