For the best experience, open
https://m.samyuktakarnataka.in
on your mobile browser.

ಬಿಯರ್ ಮಾರಾಟದಲ್ಲಿ ಶೇ. ೧೪.೯೦ ಏರಿಕೆ

10:32 PM Oct 10, 2024 IST | Samyukta Karnataka
ಬಿಯರ್ ಮಾರಾಟದಲ್ಲಿ ಶೇ  ೧೪ ೯೦ ಏರಿಕೆ

ಬೆಂಗಳೂರು: ವಾತಾವರಣ, ಸಾಲು ರಜೆಗಳು ಇತ್ಯಾದಿ ಹಲವು ಕಾರಣಗಳಿಂದಾಗಿ ಕರ್ನಾಟಕದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬಿಯರ್ ಮಾರಾಟದಲ್ಲಿ ಏರಿಕೆಯಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ೨೦೨೪-೨೫ರ ಹಣಕಾಸು ವರ್ಷದಲ್ಲಿ ಒಟ್ಟಾರೆ ಮದ್ಯ ಮಾರಾಟದಲ್ಲಿ ಶೇ. ೫.೫೫ರಷ್ಟು ಏರಿಕೆಯಾಗಿದೆ. ಅಬಕಾರಿ ಇಲಾಖೆ ದಾಖಲೆಗಳ ಪ್ರಕಾರ, ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ೯೨೧.೯೦ ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ.
ಬಿಯರ್ ಮಾರಾಟದಲ್ಲಿ ತೀವ್ರ ಏರಿಕೆ ಕಂಡುಬಂದಿದೆ ಮತ್ತು ಭಾರತೀಯ ನಿರ್ಮಿತ ಮದ್ಯದ (ಐಎಂಎಲ್) ಮಾರಾಟದಲ್ಲಿ ಕುಸಿತ ಕಂಡುಬಂದಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ, ಬಿಯರ್ ಮಾರಾಟದಲ್ಲಿ ಶೇ. ೧೪.೯೦ ಏರಿಕೆ ಮತ್ತು ಐಎಂಎಲ್ ಮಾರಾಟದಲ್ಲಿ ಶೇ ೨ ಇಳಿಕೆಯಾಗಿದೆ. ಕಳೆದ ಆರು ತಿಂಗಳಲ್ಲಿ ಬಿಯರ್ ಮಾರಾಟವು ಶೇ. ೧೫ರಷ್ಟು ಬೆಳವಣಿಗೆಯಾಗಿದೆ. ಇದಕ್ಕೆ ಹವಾಮಾನದ ಬದಲಾವಣೆ, ಹೆಚ್ಚು ರಜಾದಿನಗಳು ಮತ್ತು ಇತರವುಗಳನ್ನು ಒಳಗೊಂಡಂತೆ ಅನೇಕ ಅಂಶಗಳಿಂದಾಗಿ ಆಗಿದೆ ಎಂದು ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎರಡು ತಿಂಗಳ ಹಿಂದೆ ಪ್ರೀಮಿಯಂ ಮತ್ತು ಸೆಮಿ ಪ್ರೀಮಿಯಂ ಬ್ರಾಂಡ್‌ಗಳ ಮೇಲಿನ ಬೆಲೆ ಏರಿಕೆ, ಕಡಿಮೆ ಉತ್ಪಾದನೆ ಮತ್ತು ಸ್ಟಾಕ್‌ಗಳಿಂದಾಗಿ ಐಎಂಎಲ್ ಮಾರಾಟದಲ್ಲಿ ಕುಸಿತವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಅಬಕಾರಿ ಇಲಾಖೆ ಅಧಿಕಾರಿಗಳ ಪ್ರಕಾರ, ೨೦೨೩-೨೪ರಲ್ಲಿ ಏಪ್ರಿಲ್-ಸೆಪ್ಟೆಂಬರ್ ವರೆಗೆ ೩೫೨.೮೨ ಲಕ್ಷ ಪೆಟ್ಟಿಗೆಗಳಷ್ಟು ಐಎಂಎಲ್ ಮಾರಾಟವಾಗಿತ್ತು. ೨೦೨೪-೨೫ರ ಅದೇ ಅವಧಿಯಲ್ಲಿ ೩೪೫.೭೬ ಲಕ್ಷ ಪೆಟ್ಟಿಗೆಗಳಷ್ಟು ಮಾರಾಟವಾಗಿವೆ. ಅದೇ ರೀತಿ, ೨೦೨೩-೨೪ರಲ್ಲಿ ಏಪ್ರಿಲ್-ಸೆಪ್ಟೆಂಬರ್ ವರೆಗೆ ೨೧೧.೨೫ ಲಕ್ಷ ಸಿಬಿ ಬಿಯರ್ ಮಾರಾಟವಾಗಿದ್ದರೆ, ೨೦೨೪-೨೫ರಲ್ಲಿ ಅದೇ ಅವಧಿಯಲ್ಲಿ ೨೪೨.೭೩ ಲಕ್ಷ ಸಿಬಿ ಮಾರಾಟವಾಗಿವೆ.

Tags :