ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಬಿಲ್ ಮಂಜೂರಾತಿ ಮಾಡಲು ಪ್ರೋಸೆಸ್ ಇಲ್ಲವೇ ?

12:02 PM Jul 18, 2024 IST | Samyukta Karnataka

ಕೆಲವೊಂದು ಬಿಲ್ ಗಳಲ್ಲಿ ಆದಾಯ ತೆರಿಗೆ ಪಾವತಿ ಆಗಿಲ್ಲ. ಬಿಲ್ ಗಳಲ್ಲಿ Pay order ಖಜಾನಾಧಿಕಾರಿಗಳ ಸಹಿ ಇಲ್ಲದೆ ಪೂರ್ಣಗೊಂಡಿದ್ದು ಹೇಗೆ ಅರಣ್ಯ ಸಚಿವರೇ ??

ಬೆಂಗಳೂರು: ನಿಮ್ಮ ಇಲಾಖೆಯಲ್ಲಿ ಒಂದು ಕನಿಷ್ಠ ಬಿಲ್ ಮಂಜೂರಾತಿ ಮಾಡಲು ಪ್ರೋಸೆಸ್ ಇಲ್ಲವೇ ? ಎಂದು ಬಿಜೆಪಿಯ ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಚಿವ ಈಶ್ವರ ಬಿ ಖಂಡ್ರೆಯವರನ್ನ ಪ್ರಶ್ನಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಅರಣ್ಯ ಸಚಿವರೇ ನಿಮ್ಮ ಇಲಾಖೆಯಲ್ಲಿ ಬಿಲ್ ಗೋಲ್ಮಾಲ್ ನಡೆಯುತ್ತಿರುವುದು ನಿಮಗೆ ಗೊತ್ತಾಗುತ್ತಿಲ್ಲವೇ ? 2024 ರ, ಮಾರ್ಚ್ 5 ರಂದು ನಡೆದ ಸಭೆಯಲ್ಲಿ ಬಿಲ್ ಗಳ ಚರ್ಚೆಯಾಗಿದೆ. ಅರಣ್ಯ ಇಲಾಖೆಯ ಪ್ರಯಾಣದ ಉದ್ದೇಶ ಇಲ್ಲದಿದ್ದರೂ T.A ಬಿಲ್ ಗಳಿಗೆ ಅನುಮೋದನೆ ದೊರತಿದೆ. Sub Voucher ಮಾಡದೆ
ಬಿಲ್ ಅನುಮೋದಿಸಲಾಗಿದೆ. ಕೆಲವೊಂದು ಬಿಲ್ ಗಳಲ್ಲಿ ಆದಾಯ ತೆರಿಗೆ ಪಾವತಿ ಆಗಿಲ್ಲ. ಬಿಲ್ ಗಳಲ್ಲಿ Pay order ಖಜಾನಾಧಿಕಾರಿಗಳ ಸಹಿ ಇಲ್ಲದೆ ಪೂರ್ಣಗೊಂಡಿದ್ದು ಹೇಗೆ ಅರಣ್ಯ ಸಚಿವರೇ ?? ಸಾಕಷ್ಟು ಬಿಲ್ ಗಳಲ್ಲಿ ಸಕ್ಷಮ ಪ್ರಾಧಿಕಾರದ ಮಂಜೂರಾತಿ ಆದೇಶವಿಲ್ಲ, ಖಜಾನಾಧಿಕಾರಿಗಳು ಹಾಗೂ ಮುಖ್ಯ ಲೆಕ್ಕಾಧಿಕಾರಿಗಳ ಸಹಿ ಇಲ್ಲ. ವೈದ್ಯಕೀಯ ವೆಚ್ಚ ಮರುಪಾವತಿ [medical reimbursement ] ಬಿಲ್ ಗಳಲ್ಲಿ ಖಾಯಿಲೆಯ ಸ್ವರೂಪವೇ ನೀಡದೆ ಹೇಗೆ ಬಿಲ್ ಅನುಮೋದಿಸಲಾಯಿತು ಈಶ್ವರ್ ಖಂಡ್ರೆ ಅವರೇ ? ಇವೆಲ್ಲ ದಾಖಲೆಗಳು ನಿಮ್ಮದೇ ಇಲಾಖೆಯ ಸಭಾ ನಡವಾಳಿಗಳಲ್ಲಿ ಇದೆ. ನಿಮ್ಮ ಇಲಾಖೆಯಲ್ಲಿ ಒಂದು ಕನಿಷ್ಠ ಬಿಲ್ ಮಂಜೂರಾತಿ ಮಾಡಲು ಪ್ರೋಸೆಸ್ ಇಲ್ಲವೇ ? ತೆರಿಗೆದಾರರ ಹಣವನ್ನು ಈ ರೀತಿ ಭ್ರಷ್ಟಾಚಾರ ಮಾಡುತ್ತಿರುವ ಅಧಿಕಾರಿಗಳ ಮೇಲೆ ಯಾವ ಕ್ರಮ ಜರುಗಿಸುತ್ತೀರಾ ?? ಎಂದಿದ್ದಾರೆ.

Next Article