ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಬಿಳೆಮಲೆ ಆರ್‌ಎಸ್ಎಸ್ ಬಗ್ಗೆ ಮಾತನಾಡಿದ್ದಕ್ಕೆ ಆಕ್ಷೇಪ

01:59 PM Nov 24, 2024 IST | Samyukta Karnataka

ಕೊಪ್ಪಳ: ನಗರದ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ಗವಿಸಿದ್ಧ ಎನ್. ಬಳ್ಳಾರಿ ವೇದಿಕೆ, ತಳಮಳ ಪ್ರಕಾಶನ, ಕವಿ ಗವಿಸಿದ್ಧ ಎನ್.ಬಳ್ಳಾರಿ ಸಾಹಿತ್ಯ, ಸಾಂಸ್ಕೃತಿಕ,‌ ಕಲಾ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಆಶ್ರಯದಲ್ಲಿ ನಡೆದ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳೆಮಲೆಯವರು ಆರ್‌ಆರ್‌ಎಸ್‌ನವರು ಇತಿಹಾಸ ವೈಭವೀಕರಿಸುತ್ತಾರೆ ಎಂದಾಗ ಕೆಲಹೊತ್ತು ಗೊಂದಲ ಸೃಷ್ಟಿಯಾಯಿತು.
ಗಾಂಧೀಜಿಯವರನ್ನು ಕರ್ನಾಟಕದ ಏಕೀಕರಣಕ್ಕೂ ಸಂಬಂಧವಿದ್ದು, ಹಾಗಾಗಿ ಅವರನ್ನು ಸ್ಮರಿಸಬೇಕು. ಇತಿಹಾಸವನ್ನು ನೆನಪಿಸಬೇಕು. ಆದರೆ ವೈಭವೀಕರಿಸ ಬೇಡ. ಇದನ್ನು ಆರ್‌ಆರ್‌ಎಸ್‌ನವರು ಮಾಡುತ್ತಾರೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳೆಮಲೆ ಹೇಳಿದರು.
ಆರ್‌ಆರ್‌ಎಸ್‌ ಬಗ್ಗೆ ಏಕೆ ಮಾತನಾಡುತ್ತೀರಿ. ಕವಿ ಗವಿಸಿದ್ಧ ಎನ್. ಬಳ್ಳಾರಿಯವರ ಬಗ್ಗೆ ಮಾತನಾಡಿ ಎಂದು ಸಭಾಂಗಣದಲ್ಲಿದ್ದ ಮೂವರು ವ್ಯಕ್ತಿಗಳು ಎದ್ದುನಿಂತು ಜೋರಾಗಿ ಮಾತನಾಡಿ, ಆಕ್ಷೇಪಿಸಿದರು. ಇದಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳೆಮಲೆ ಪ್ರತಿಕ್ರಿಯಿಸಿ, ಆರ್‌ಆರ್‌ಎಸ್‌ ಬಗ್ಗೆ ಮಾತನಾಡಬಾರದು ಎಂದು ಕಾನೂನು ಇದೆಯೇ. ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಇದನ್ನು ಕಷ್ಟಪಟ್ಟಾದರೂ ನಾವು ಉಳಿಸಿಕೊಳ್ಳೋಣ ಎಂದರು. ಸಂಘಟಕರು ಸಭಾಂಗಣದಲ್ಲಿದ್ದವರನ್ನು ಸಮಾಧಾನಪಡಿಸಲು ಮುಂದಾದರು. ಇನ್ನೂ ಕೆಲವರು ಕೂರುವುದಾದರೆ ಕೂರಿ, ಇಲ್ಲವಾದರೆ ಹೊರ ನಡೆಯಿರಿ ಎಂದು ಆಕ್ಷೇಪಿಸುವವರಿಗೆ ಹೇಳಿದರು. ಎದ್ದು ಹೊರ ನಡೆದರು.

Tags :
koppalrss
Next Article