ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಬಿಸಿನೀರಿನ ಸ್ನಾನವೋ? ತಣ್ಣೀರಿನ ಸ್ನಾನವೋ?

03:02 AM Jan 29, 2025 IST | Samyukta Karnataka

ನಾನು ಸ್ನಾನ ಮಾಡಿದ್ದೇ ತಪ್ಪೇ? ಅವತ್ತು ನೀರಿನಲ್ಲಿ ಮುಳುಗುವಾಗಲೇ ಅಂದುಕೊಂಡೆ. ಇದು ಇಲ್ಲಿಗೇ ಮುಗಿಯಲ್ಲ. ಏನೇ ಮಾಡಿದರೂ ಮಾತಾಡುತ್ತಾರೆ ಮಾತಾಡಲಿ ಎಂದು ಅವರು ಅರ್ಧಸಿಟ್ಟು, ಅರ್ಧಬೇಜಾರಿನಲ್ಲಿ ಹೇಳಿದರೆಂದು ಕಿವುಡನುಮಿ ತನ್ನ ಟಿವಿಯಲ್ಲಿ ಒಂದೇ ಸಮನೆ ಒದರುತ್ತಿದ್ದಾಳೆ. ಸ್ನಾನ ಮಾಡುವುದು ಸರಿಯೋ ತಪ್ಪೊ ಎನ್ನುವುದರ ಬಗ್ಗೆ ನಾವು ಪ್ಯಾನಲ್ ಡಿಸಕಷನ್ ಇರಿಸಿದ್ದೇವೆ. ಇನ್ನು ಕೆಲವೇ ಹೊತ್ತಿನಲ್ಲಿ ನಿಮ್ಮ ಮುಂದೆ ನಾವು ಪ್ರಸ್ತುತ ಪಡಿಸುತ್ತೇವೆ ನೋಡಿ.. ನೋಡಿ ಮತ್ತು ನೋಡಿ…
ಇವತ್ತು ನಮ್ಮ ಮುಂದೆ ಪಂ. ಲೇವೇಗೌಡರು ಬಂದಿದ್ದಾರೆ. ಅವರು ಈ ವಯಸ್ಸಿನಲ್ಲಿಯೂ ಸ್ನಾನದ ಬಗ್ಗೆ ಮಾತನಾಡುತ್ತಿದ್ದಾರೆ ಎಂದರೆ ಅದ್ಭುತ.. ಅದ್ಭುತ.. ಈಗ ಅವರನ್ನೇ ಕೇಳೋಣ ಬನ್ನಿ… ಬನ್ನಿ…
ಕಿವುಡನುಮಿ; ನಮಸ್ಕಾರ ಸಾರ್…
ಪಂ. ಲೇವೇಗೌಡರು ನಮಸ್ಕಾರ
ಕಿವುಡನುಮಿ; ಸಾರ್… ಸ್ನಾನ ಮಾಡುವುದೇ ತಪ್ಪಾ?
ಪಂ. ಲೇವೇಗೌ ಸ್ನಾನ ಬಿಸಿನೀರಿನಿಂದ ಮಾಡುವುದೋ ತಣ್ಣೀರಿನಿಂದಲೋ ಎನ್ನುವುದು ಇಂಪಾರ್ಟಂಟ್…
ಕೇಳಸ್ಕೊಂಡ್ರಾ… ಕೇಳಸ್ಕೊಂಡ್ರಾ… ಸಾಹೇಬರು ಬಿಸಿನೀರಿನಿಂದಲೋ ತಣ್ಣೀರಿನಿಂದಲೋ ಎಂದು ಕೇಳುತ್ತಿದ್ದಾರೆ. ಈಗ ಮದ್ರಾಮಣ್ಣನವರನ್ನು ಕೇಳೋಣ
ಕಿವುಡನುಮಿ; ಮದ್ರಾಮಣ್ಣೋರೆ ಸ್ನಾನ ಅಂದರೆ ಏನು?
ಮದ್ರಾಮಣ್ಣ; ನೋಡವಾ…. ಸ್ನಾನ ಅಂದರೆ ಸ್ನಾನ ಅಷ್ಟೇ
ಕಿವುಡನುಮಿ; ಅಲ್ಲ ಸಾರ್ ನೀರಿನಲ್ಲಿ ಮುಳುಗಿದರೆ ಸ್ನಾನವೋ ಅಥವಾ ಮೈಮೇಲೆ ಹಾಕಿಕೊಂಡರೆ ಸ್ನಾನವೋ?
ಮದ್ರಾಮಣ್ಣ; ಎರಡೂ ಅಲ್ಲ. ನೀರೇ ನಮ್ಮ ಮೇಲೆ ಬಿದ್ದರೆ ಅದು ನಿಜವಾದ ಸ್ನಾನ…
ಕಿವುಡನುಮಿ; ಹಾಗಾದರೆ ಸ್ನಾನ ಮಾಡಿದರೆ ಇವರೇನೋ ಅನ್ನುತ್ತಿದ್ದಾರಲ್ಲ?
ಮದ್ರಾಮಣ್ಣ; ಅನ್ನದೇ ಮತ್ತೇನು ಮಾಡುತ್ತಾರೆ ಬಿಡವ…
ನೋಡಿ ಇವರು ಹೀಗಂತ ಹೇಳುತ್ತಿದ್ದಾರೆ… ಇನ್ನು ಸಿಟ್ಯೂರಪ್ಪನವರು ಈಗ ಬಂದಿದ್ದಾರೆ ಅವರನ್ನು ಕೇಳೋಣ ಬನ್ನಿ..
ಕಿವುಡನುಮಿ; ಸಾರ್..ಸ್ನಾನದ ಬಗ್ಗೆ
ಸಿಟ್ಯೂರಪ್ಪ; ಅಯ್ಯೋ ಅಯ್ಯೋ ಅದರ ಬಗ್ಗೆ ಹೇಳಬೇಕು ಅಂದರೆ ಒಂದು ತಿಂಗಳು ಬೇಕು ಆದರೆ ಈಗ ಅಷ್ಟೊಂದು ಸಮಯವಿಲ್ಲ ಅಷ್ಟೇ ಅಂದರು.

Next Article