For the best experience, open
https://m.samyuktakarnataka.in
on your mobile browser.

ಬೀದರ್ ಕೋಟೆಯಲ್ಲಿ ಏರ್ ಶೋ

11:14 AM Aug 29, 2024 IST | Samyukta Karnataka
ಬೀದರ್ ಕೋಟೆಯಲ್ಲಿ ಏರ್ ಶೋ

ಬೀದರ್: ನಗರದ ಕೋಟೆಯ ಮೇಲೆ ಆಗಸ್ಟ್ 30, 31ರಂದು ಏರ್ ಶೋ ಕಾರ್ಯಕ್ರಮ ಭಾರತೀಯ ವಾಯುಪಡೆ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ.
ಆ.30 ಶುಕ್ರವಾರದಂದು ಜಿಲ್ಲೆಯ ಎಲ್ಲಾ ಸಾರ್ವಜನಿಕರಿಗೆ ಕೋಟೆಯಲ್ಲಿ ಏರ್ ಶೋ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದ್ದು, ಅಂದು ಮಧ್ಯಾಹ್ನ 3ಕ್ಕೆ ಸಾರ್ವಜನಿಕರು ಕೋಟೆ ಒಳಗಡೆ ನಿಗದಿತ ಸ್ಥಳದಲ್ಲಿ ಹಾಜರಾಗಿ ಏರ್ ಶೋ ವೀಕ್ಷಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆ.31 ಶನಿವಾರ ನಗರದ ಸಾರ್ವಜನಿಕರಿಗೆ ಏ‌ರ್ ಶೋ ವೀಕ್ಷಣೆಗೆ ವ್ಯವಸ್ಥೆಗೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Tags :