For the best experience, open
https://m.samyuktakarnataka.in
on your mobile browser.

ಬೆಂಗಳೂರಿನಿಂದ ಶಬರಿಮಲೆ ಯಾತ್ರಾರ್ಥಿಗಳಿಗೆ ಶುಭ ಸುದ್ದಿ

11:00 AM Dec 04, 2024 IST | Samyukta Karnataka
ಬೆಂಗಳೂರಿನಿಂದ ಶಬರಿಮಲೆ ಯಾತ್ರಾರ್ಥಿಗಳಿಗೆ ಶುಭ ಸುದ್ದಿ

ಬೆಂಗಳೂರು: ಶಬರಿಮಲೆ ಯಾತ್ರಾರ್ಥಿಗಳಿಗೆ ಶುಭ ಸುದ್ದಿಯನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೀಡಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಬೆಂಗಳೂರಿನಿಂದ ಶಬರಿಮಲೆಗೆ ವೋಲ್ವೋ ಬಸ್ ಸೌಲಭ್ಯ ಮಾಡಲಾಗಿದ್ದು, ಪ್ರಯಾಣ ವಿವರಗಳನ್ನು ಹಂಚಿಕೊಂಡಿದ್ದಾರೆ, ಮಧ್ಯಾಹ್ನ 1:50ಕ್ಕೆ ಶಾಂತಿನಗರ ಬಸ್ ನಿಲ್ದಾಣದಿಂದ ಹೊರಟು ಸಂಜೆ 5:10ಕ್ಕೆ ಮೈಸೂರು ತಲುಪಿ ಮರುದಿನ ಬೆಳಿಗ್ಗೆ 6:45ಕ್ಕೆ ನಿಲಕ್ಕಲ್ ತಲುಪಲಿದೆ. ಅದೇ ದಿನ ಸಂಜೆ 6:00 ಗಂಟೆಗೆ ಬಸ್ ನಿಲಕ್ಕಲ್ ನಿಂದ ಹೊರಟು ಮರುದಿನ ಬೆಳಿಗ್ಗೆ 10:00 ಗಂಟೆಗೆ ಮೆಜೆಸ್ಟಿಕ್ ತಲುಪಲಿದೆ. ಹೋಗುವಾಗ ಪಂಪಾದಲ್ಲಿ ಇಳಿಯುವ ಅವಕಾಶವನ್ನು ಸಹ ನೀಡಲಾಗಿದೆ. ಭಕ್ತಾದಿಗಳು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿ ಎಂದಿದ್ದಾರೆ.

Tags :