For the best experience, open
https://m.samyuktakarnataka.in
on your mobile browser.

ಬೆಂಗಳೂರು, ಕಾರವಾರ, ವಿಜಯಪುರ ರೈಲು ರದ್ದು

06:55 PM Jul 29, 2024 IST | Samyukta Karnataka
ಬೆಂಗಳೂರು  ಕಾರವಾರ  ವಿಜಯಪುರ ರೈಲು ರದ್ದು

ಮಂಗಳೂರು: ಕೆಎಸ್‌ಆರ್ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ (ನಂ.೧೬೫೧೧) ರೈಲನ್ನು ಆ.೩ರವರೆಗೆ ಸಂರ್ಪೂವಾಗಿ ರದ್ದು ಮಾಡಲಾಗಿದೆ. ಕಣ್ಣೂರು-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ (ನಂ.೧೬೫೧೨) ರೈಲನ್ನು ಜು.೩೦ರಿಂದ ಆ.೪ರವರೆಗೆ ರದ್ದುಪಡಿಸಲಾಗಿದೆ.
ನಂ.೦೭೨೭೮ ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಜು.೩೦ರಿಂದ ಆ.೪ರವರೆಗೆ ಸಂಪೂರ್ಣ ರದ್ದುಪಡಿಸಲಾಗಿದೆ. ನಂ.೦೭೩೭೭ ವಿಜಯಪುರ-ಮಂಗಳೂರು ಸೆಂಟ್ರಲ್ ರೈಲನ್ನು ಜು.೨೯ರಿಂದ ಆ.೩ರವರೆಗೆ ಸಂಪೂರ್ಣ ರದ್ದುಪಡಿಸಲಾಗಿದೆ.
ನಂ.೧೬೫೮೫ ಎಸ್‌ಎಂವಿಟಿ ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲು ಜು.೨೯ರಿಂದ ಆ.೩ರವರೆಗೆ ಸಂಪೂರ್ಣ ರದ್ದಾಗಿದೆ. ನಂ.೧೬೫೮೬ ಮುರುಡೇಶ್ವರ-ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಜು.೩೦ರಿಂದ ಆ.೪ರವರೆಗೆ ಸಂಪೂರ್ಣ ರದ್ದಾಗಿದೆ.
ನಂ.೧೬೫೯೫ ಕೆಎಸ್‌ಆರ್ ಬೆಂಗಳೂರು-ಕಾರವಾರ ವಿಶೇಷ ಎಕ್ಸ್‌ಪ್ರೆಸ್ ರೈಲು ಜು.೨೯ ರಿಂದ ಆ.೩ರವರೆಗೆ ಮತ್ತು ನಂ.೧೬೫೯೬ ಕಾರವಾರ-ಕೆಎಸ್‌ಆರ್ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು ಜು.೩೦ರಿಂದ ಆ.೪ರವರೆಗೆ ಸಂಪೂರ್ಣ ರದ್ದಾಗಿದೆ.
ನಂ.೧೬೫೭೬ ಮಂಗಳೂರು ಜಂಕ್ಷನ್-ಯಶವಂತಪುರ ಜಂಕ್ಷನ್ ಎಕ್ಸ್‌ಪ್ರೆಸ್ ರೈಲನ್ನು ಜು.೩೦ ಮತ್ತು ಆ.೧ರಂದು ನಂ.೧೬೫೭೫ ಯಶವಂತಪುರ ಜಂಕ್ಷನ್-ಮಂಗಳೂರು ಜಂಕ್ಷನ್ ಜು.೩೧ ಮತ್ತು ಆ.೨ರಂದು ರದ್ದುಪಡಿಸಲಾಗಿದೆ.
ನಂ.೧೬೫೩೯ ಯಶವಂತಪುರ ಜಂಕ್ಷನ್ -ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ರೈಲನ್ನು ಆ.೩ರಂದು ಮತ್ತು ನಂ.೧೬೫೪೦ ಮಂಗಳೂರು ಜಂಕ್ಷನ್-ಯಶವಂತಪುರ ಜಂಕ್ಷನ್ ರೈಲನ್ನು ಆ.೪ರಂದು ರದ್ದುಪಡಿಸಲಾಗಿದೆ.
ನಂ.೧೬೫೧೫ ಯಶವಂತಪುರ ಜಂಕ್ಷನ್-ಕಾರವಾರ ಎಕ್ಸ್ಪ್ರೆಸ್ ರೈಲನ್ನು ಜು.೨೯,೩೧ ಮತ್ತು ಆ.೨ರಂದು ರದ್ದುಪಡಿಸಲಾಗಿದೆ. ನಂ.೧೬೫೧೬ ಕಾರವಾರ-ಯಶವಂತಪುರ ಜಂಕ್ಷನ್ ರೈಲನ್ನು ಜು.೩೦, ಆ.೧ ಮತ್ತು ಆ.೩ರಂದು ಸಂಪೂರ್ಣ ರದ್ದುಪಡಿಸಲಾಗಿದೆ ಎಂದು ಪಾಲಕ್ಕಾಡ್ ವಿಭಾಗದ ಪ್ರಕಟನೆ ತಿಳಿಸಿದೆ.